ಡಿ.17 ಮತ್ತು 18 – ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಮುಗುಳಿಯ ವರ್ಷಾವಧಿ ಜಾತ್ರಾ ಮಹೋತ್ಸವ…
ಬಂಟ್ವಾಳ: ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಮುಗುಳಿಯ ಸಜೀಪ ಮುನ್ನೂರು ಇಲ್ಲಿನ ವರ್ಷಾವಧಿ ಜಾತ್ರಾ ಮಹೋತ್ಸವ ಹಾಗೂ ಪಂಚಮಿ ಷಷ್ಠಿ ಪೂಜಾ ಉತ್ಸವ ಡಿ.17 ಮತ್ತು 18 ರಂದು ವಿಜೃಂಭಣೆಯಿಂದ ಜರಗಲಿದೆ. ಈ ಪ್ರಯುಕ್ತ ಪೂರ್ವಭಾವಿ ಸಮಾಲೋಚನಾ ಸಭೆ ಸಜೀಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್ ಅಧ್ಯಕ್ಷತೆಯಲ್ಲಿ ಭಾನುವಾರದಂದು ದೇವಳದ ಸಭಾಂಗಣದಲ್ಲಿ ಜರಗಿತು.
ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಜಯಶಂಕರ ಬಾಸ್ರಿತ್ತಾಯ, ಸದಸ್ಯರಾದ ಎನ್ ಕೆ ಶಿವ ಖಂಡಿಗ, ಹರಿಪ್ರಸಾದ್ ಭಂಡಾರಿ ಆಳುವರ ಪಾಲು, ಕೃಷ್ಣ ಭಟ್ ಅರ್ಚಕರು, ಸುಮಂತ್ ಮಡಿವಾಳ, ಶ್ರೀನಿವಾಸ ನಾಯಕ್ ದಾಸರಗುಡ್ಡೆ, ರಾಜೇಶ್ ಪೂಜಾರಿ ಜುಮಾದಿಪಾಲು, ಚಿತ್ರಾವತಿ ಎಸ್ ರೈ ಪರಾರಿ ಹೊಸಮನೆ, ಚಿತ್ರಾವತಿ ಪಿ ವರಕಾಯಿ, ಷಣ್ಮುಖ ಯುವಕ ಸಂಘ ಮುಗುಳಿಯ ಅಧ್ಯಕ್ಷ ದೀಕ್ಷಿತ್ ಡಿ ಶೆಟ್ಟಿ ಪರಾರಿ ಗುತ್ತು, ಪದಾಧಿಕಾರಿಗಳಾದ ಪ್ರಸಾದ್ ನಾಯಕ್ , ದಿವಾಕರ ಶೆಟ್ಟಿ, ವಿನೋದ್ ನಾಯಕ್, ವಿಜಯ ನಾಯಕ್, ಧನಂಜಯ ಶೆಟ್ಟಿ, ಉಮೇಶ್ ರಾವ್ ಮೊದಲಾದವರು ಸಲಹೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಶ್ರದ್ಧಾ ಭಕ್ತಿಯಿಂದ ನಡೆಯಲಿದೆ. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಬಪ್ಪನಾಡು ಶ್ರೀ ದುರ್ಗಾ ಪರಮೇಶ್ವರಿ ಕೃಪಾಪೋಷಿತ ದಶಾವತಾರ ಯಕ್ಷಗಾನ ಮಂಡಳಿಯವರಿಂದ ಯಕ್ಷಗಾನ ಬಯಲಾಟ, ಶಿವದೂತ ಗುಳಿಗೆ ನಾಟಕ ಮೊದಲಾದ ಕಾರ್ಯಕ್ರಮಗಳು ಜರಗಲಿದೆ. ಎರಡು ದಿನ ಅನ್ನದಾನ ಹಾಗೂ ವಿವಿಧ ಭಜನಾ ಸಂತ ಮಂಡಳಿಗಳಿಂದ ಭಜನಾ ಕಾರ್ಯಕ್ರಮ ಜರಗಲಿದೆ.