ಕಿಟ್ ವಿತರಣಾ ಸೇವೆಯಲ್ಲಿ ನಿರತರಾಗಿರವ ಝುಬೈರ್ ಸ ಅದಿ ಪಾಟ್ರಕ಼ೋಡಿ…
ಒಮಾನ್: ಕೆಸಿಎಫ್ ಒಮಾನ್ ರಾಷ್ಟ್ರೀಯ ಸಮಿತಿ ಸಾಂತ್ವನ ವಿಭಾಗದ ವತಿಯಿಂದ ನಡೆಸಲುದ್ದೇಶಿಸಿದ ಸಾಂತ್ವನ ದ ಯೋಜನೆಯಾದ ಸಸಿ-2021 ಗೆ ಅಧಿಕೃತವಾಗಿ ಈಗಾಗಲೇ ಚಾಲನೆ ನೀಡಲಾಗಿದೆ.
ಇದರ ಭಾಗವಾಗಿ ಕೆಸಿಎಫ್ ಸದಸ್ಯರಾಗಿದ್ದು ಕೊಂಡು ಕೊರೋನ ಕಾರಣದಿಂದ ಗಲ್ಫ್ ನಲ್ಲಿ ಉದ್ಯೋಗ ಕಳೆದುಕೊಂಡಿರುವ ಹಾಗೂ ರಜೆ ನಿಮಿತ್ತವಾಗಿ ಊರಿಗೆ ಬಂದು ಕೋವಿಡ್ ಕಾರಣದಿಂದ ಪುನಃ ಹಿಂದಿರುಗಲಾದೆ ಇದೀಗ ಊರಿನಲ್ಲಿರುವ ಕೆಸಿಎಫ್ ಒಮಾನ್ ಸದಸ್ಯರಿಗೆ ಸಹಾಯ ಹಸ್ತ ಚಾಚುವ ನಿಟ್ಟಿನಲ್ಲಿ ಫುಡ್ ಕಿಟ್ವ್ ವಿತರಣೆ ಮಾಡುವ ಕಾರ್ಯಕ್ರಮಕ್ಕೆ ಕೆಸಿಎಫ್ ಅಂತರಾಷ್ಟ್ರೀಯ ಸಮಿತಿಯ ಶಿಕ್ಷಣ ವಿಭಾಗದ ಕಾರ್ಯದರ್ಶಿ ಉಮರ್ ಸಖಾಫಿ ಮಿತ್ತೂರು ಹಾಗೂ ಆಡಳಿತ ವಿಭಾಗದ ಕಾರ್ಯದರ್ಶಿ ಇಕ್ಬಾಲ್ ಬೊಲ್ಮಾರ್ ಬರ್ಕ ಇವರ ನೇತೃತ್ವದಲ್ಲಿ ಚಾಲನೆ ನೀಡಲಾಗಿದ್ದು, ಇದೀಗ ಅದನ್ನು ಆಯಾ ಫಾಲಾನುಭವಿ ಕೆಸಿಎಫ್ ಒಮಾನ್ ಸದಸ್ಯರಿಗೆ ಕಿಟ್ಟನ್ನು ತಲುಪಿಸುವ ಹೊಣೆಯನ್ನು ಕೆಸಿಎಫ್ ಒಮಾನ್ ಶಿಕ್ಷಣ ವಿಭಾಗದ ಕಾರ್ಯದರ್ಶಿ , ರಜೆ ನಿಮಿತ್ತವಾಗಿ ಊರಿನಲ್ಲಿರವ ಝುಬೈರ್ ಸ ಅದಿ ಪಾಟ್ರಕ಼ೋಡಿ ವಹಿಸಿ ಕೊಂಡಿದ್ದಾರೆ.
ಸೇವೆಯಲ್ಲಿ ನಿರತರಾಗಿರುವ ಅವರಿಗೆ ಮತ್ತು ಕೆಸಿಎಫ್ ಮಸ್ಕತ್ ಝೋನ್ ಅಧ್ಯಕ್ಷರಾದ ನವಾಝ್ ಮಣಿಪುರ ಹಾಗೂ ಸಹಪಾಠಿಗಳಿಗೆ ಕೆಸಿಎಫ್ ಒಮಾನ್ ರಾಷ್ಟ್ರೀಯ ಸಮಿತಿಯು ಅಬಾರಿಯಾಗಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.