ಗೂನಡ್ಕ ಪೇರಡ್ಕ ಮೋಹಿಯುದ್ದಿನ್ ಜುಮಾ ಮಸ್ಜಿದ್ – ಕಾಮಗಾರಿ ಪ್ರಗತಿ ಪರಿಶೀಲನೆ…

ಸುಳ್ಯ: ಸಂಪಾಜೆ ಗ್ರಾಮದ ಇತಿಹಾಸ ಪ್ರಸಿದ್ದ ಗೂನಡ್ಕ ಪೇರಡ್ಕ ಮೋಹಿಯುದ್ದಿನ್ ಜುಮಾ ಮಸ್ಜಿದ್ ನ ತೆಕ್ಕಿಲ್ ಮೊಹಮ್ಮದ್ ಹಾಜಿಯವರ ಹೆಸರಿನಿಂದ ಮೋಹಿಯದ್ದಿನ್ ಜುಮಾ ಮಸ್ಜಿದ್ ಹೆಸರಿಗೆ ಆದ ವಕ್ಫ್ ಸ್ಥಳಕ್ಕೆ ಮತ್ತು ಟಿ ಎಂ ಅಹಮದ್ ಕುಂಞ ತೆಕ್ಕಿಲ್, ಟಿ ಎಂ ಮೋಹಿದೀನ್ ಕುಂಞ ತೆಕ್ಕಿಲ್, ಎಂಜೆಎಂ ಮಸ್ಜಿದ್ ಪೇರಡ್ಕ ಗೂನಡ್ಕ ಇದರ ಮಾಜಿ ಅಧ್ಯಕ್ಷರಾದ ಟಿ ಎಂ ಬಾಬ ಹಾಜಿ ತೆಕ್ಕಿಲ್ ಸಹೋದರರು ನೀಡಿದ ಸ್ಥಳಕ್ಕೆ ಕಂಪೌಂಡ್ ನಿರ್ಮಿಸಲು ಗೌರವಾಧ್ಯಕ್ಷರಾದ ಟಿ ಎಂ ಶಾಹೀದ್ ತೆಕ್ಕಿಲ್ ರವರ ಶಿಫಾರಸ್ಸಿನ ಮೇರೆಗೆ ಜಮೀರ್ ಅಹಮದ್ ಖಾನ್ ಸಚಿವರಾದ ಸಂದರ್ಭದಲ್ಲಿ ಹತ್ತು ಲಕ್ಷ ರೂ ಮಂಜೂರಗಿದ್ದು, ಅದರ ನಿರ್ಮಾಣದ ಕಾಮಗಾರಿ ಪ್ರಗತಿಯಲ್ಲಿದ್ದು ಕಾಮಗಾರಿಯನ್ನು ಮಸ್ಜಿದ್ ನ ಗೌರವಾಧ್ಯಕ್ಷ, ತೆಕ್ಕಿಲ್ ಪ್ರತಿಷ್ಠಾನದ ಅಧ್ಯಕ್ಷರೂ ಆದ ಟಿ ಎಂ ಶಾಹೀದ್ ತೆಕ್ಕಿಲ್, ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜಿ ಕೆ ಹಮೀದ್ ಗೂನಡ್ಕ, ಸದಸ್ಯರಾದ ಎಸ್ ಕೆ ಹನೀಫ್, ಸಜ್ಜನ ಪ್ರತಿಷ್ಠಾನದ ರಹೀಂ ಬೀಜದಕಟ್ಟೆಯವರು ವೀಕ್ಷಿಸಿ, ಪ್ರಗತಿಯನ್ನು ಪರಿಶೀಲಿಸಿದರು. ಈ ಸಂದರ್ಭದಲ್ಲಿ ಟಿ ಬಿ ಅಬ್ದುಲ್ಲ ತೆಕ್ಕಿಲ್, ಟಿ ಬಿ ಮೊಹಮ್ಮದ್ ತುರ್ತಿ,ಗುತ್ತಿಗೆದಾರರಾದ ಶರೀಫ್ ಮೊದಲಾದವರು ಉಪಸ್ಥಿತರಿದ್ದರು.

IMG 20220118 WA0015 300x225 IMG 20220118 WA0016 300x225

Related Articles