ಬಂಟ್ವಾಳ- ಪೆಬ್ರವರಿ 11 ರಿಂದ 25 ರತನಕ ಕೃಷಿ ಮೇಳ…
ಬಂಟ್ವಾಳ: ಕರಾವಳಿ ಕಲೋತ್ಸವ 2021 ಚಿಣ್ಣರ ಲೋಕ ಮೋಕೆದ ಕಲಾವಿದೆರ್ ಸೇವಾ ಟ್ರಸ್ಟ್ (ರಿ) ಬಂಟ್ವಾಳ ಇದರ ವರ್ಷದ ಕಲಾ ಯೋಜನೆಯ ಬಗ್ಗೆ ಈ ವರ್ಷ ಹಮ್ಮಿಕೊಂಡ ನವ ಯೋಚನೆಯ ನವ ಚಿಂತನೆಯ “ಕೃಷಿ ಮೇಳ” ದ ಬಗ್ಗೆ ಚಿಂತನ ಮಂಥನ ಡಿ.8 ರಂದು ಬಿ.ಸಿ.ರೋಡಿನ ಅನ್ನಪೂರ್ಣೇಶ್ವರಿ ದೇಗುಲದ ಸಭಾಂಗಣದಲ್ಲಿ ನಡೆಯಿತು.
ಪೆಬ್ರವರಿ 11 ರಿಂದ 25 ರತನಕ ಕೃಷಿ ಮೇಳ, ತುಳು ನಾಟಕ ಸ್ಪರ್ಧೆ, ಚೆಂಡೆ, ಧಪ್ , ಡ್ಯಾನ್ಸ್ ಸ್ಪರ್ಧೆ, ಅಮ್ಯೂಸ್ಮೆಂಟ್ ಇತರ ಸ್ಟಾಲ್ ಗಳ ವರ್ಣನಾತೀತ ಕಾರ್ಯಕ್ರಮಗಳು ಬಿ.ಸಿ.ರೋಡಿನ “ಗೋಲ್ಡನ್ ಪಾರ್ಕ್ ಮೈದಾನ” ದಲ್ಲಿ ನಡೆಸುವುದೆಂದು ತೀರ್ಮಾನಿಸಲಾಯಿತು.
ಮೊದಲ ಮೂರು ದಿನ ಆಕರ್ಷಕ, ಕೃಷಿ ಅನುಭವದಲ್ಲಿ ಯವಕರಿಗೆ, ಮಹಿಳೆಯರಿಗೆ, ಜನತೆಗೆ ಕೃಷಿ ಮಾಹಿತಿ ನೀಡುವ ವಿಚಾರ ಗೋಷ್ಠಿ, ಅನುಭವ, ಸ್ಪರ್ಧೆ, ಮೂಲಕ “ವನಸಿರಿ” “ಬನಸಿರಿ” “ಕೃಷಿ ಸಿರಿ” “ತಾಂತ್ರಿಕ ಸಿರಿ” ಮೂಲಕ ಕೃಷಿ ವಿಚಾರ ತಿಳಿಸುವ ಬಗ್ಗೆ ಕಾರ್ಯಕ್ರಮಕ್ಕಾಗಿ ಸದಾನಂದ ಶೆಟ್ಟಿ ಸೊರ್ನಾಡು ಇವರನ್ನು ಪ್ರಧಾನ ಸಂಚಾಲಕರಾಗಿ ನೇಮಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷರಾಗಿ ಸುದರ್ಶನ್ ಜೈನ್, ಸಂಚಾಲಕರು ಮೊಹನದಾಸ್ ಕೊಟ್ಟಾರಿ ಮುನ್ನೂರು, ಗೌರವ ಸಲಹೆಗಾರರಾದ ಅಶೋಕ್ ಶೆಟ್ಟಿ ಸರಪಾಡಿ, ಜಯಾನಂದ ಪೆರಾಜೆ, ಸೇಷಪ್ಪ ಮಾಸ್ಟರ್ ,ದಿನೇಶ್ ಶೆಟ್ಟಿ ಪಂಜಿಕಲ್ಲು, ಎಚ್ಕೆ ನಯನಾಡು ರತ್ನ ದೇವ್ ಪುಂಜಾಲಕಟ್ಟೆ ,ಜೆನಿತ್ ಜೈನ್, ಮಹಮ್ಮದ್ ನಂದಾವರ, ಆಶ್ಲೇಷ್ ಪೋಲೀಸ್ ಲೈನ್ ಉಪಸ್ಥಿತರಿದ್ದರು. ಸಮಿತಿಯ ಶ್ರೀಮತಿ ಸೌಮ್ಯ ಯಶವಂತ್ ಭಂಡಾರಿಬೆಟ್ಟು ಸ್ವಾಗತಿಸಿ ಧನ್ಯವಾದ ನೀಡಿದರು.