ಫೆ. 17 -ನವೀಕೃತ ಗೂನಡ್ಕ ಪೇರಡ್ಕ ಮೋಹಿದ್ದಿನ್ ಜುಮಾ ಮಸ್ಜಿದ್ ಉದ್ಘಾಟನೆ, ಸರ್ವ ಧರ್ಮ ಸಮ್ಮೇಳನ…

ಸುಳ್ಯ: ಪೇರಡ್ಕ ಇತಿಹಾಸ ಪ್ರಸಿದ್ದ ಮೊಹಿದ್ದೀನ್ ಜುಮಾ ಮಸ್ಜಿದ್ ಇದರ ನವೀಕೃತ ಕಟ್ಟಡದ ಉದ್ಘಾಟಣೆಯನ್ನು ಸಮಸ್ತ ಕೇಂದ್ರ ಮುಶಾವರ ಸದಸ್ಯ ಹಾಗೂ ಕೊಡಗು ಜಿಲ್ಲಾ ನಾಯಿಬ್ ಖಾಝಿ ಎಂ.ಎಂ ಅಬ್ದಲ್ಲ ಫೈಝಿ ಅವರು ಫೆ. 17 ರಂದು ಉದ್ಘಾಟಿಸಲಿದ್ದಾರೆ.
ಮಸೀದಿ ಪುನರ್ ನಿರ್ಮಾಣ ಸಮಿತಿಯ ಅಧ್ಯಕ್ಷರಾದ ಟಿ.ಎಂ ಶಾಹಿದ್ ತೆಕ್ಕಿಲ್ ಅಧ್ಯಕ್ಷತೆ ವಹಿಸಲಿದ್ದು, ಹಲವಾರು ಗಣ್ಯ ವ್ಯಕ್ತಿಗಳು ಆಗಮಿಸಲಿದ್ದಾರೆ. ಅಂದು ಸಂಜೆ 7 ಗಂಟೆಗೆ ಉರೂಸ್ ಸಮಾರಂಭದ ಪ್ರಯುಕ್ತ ಸರ್ವಧರ್ಮ ಸಮ್ಮೇಳನ ದರ್ಗಾ ಶರೀಫಿನ ಬಳಿ ತೆಕ್ಕಿಲ್ ಮೊಹಮ್ಮದ್ ಹಾಜಿ ವೇದಿಕೆಯಲ್ಲಿ ಏರ್ಪಡಿಸಲಾಗಿದ್ದು, ಕೇರಳದ ಸಚಿವರಾದ ಅಹಮದ್ ದೇವರಕೋವಿಲ್ ಉದ್ಘಾಟಿಸಲಿದ್ದಾರೆ.
ಊರೂಸ್ ಸಮಿತಿ ಅಧ್ಯಕ್ಷರಾದ ಮಸೀದಿಯ ಗೌರವ ಅಧ್ಯಕ್ಷ ಟಿ ಎಂ ಶಾಹಿದ್ ತೆಕ್ಕಿಲ್ ಅಧ್ಯಕ್ಷತೆ ವಹಿಸಲಿದ್ದು ರಿಯಾಜ್ ಫೈಝಿ ದುವಾ ನೆರೆವೇರಿಸಲಿದ್ದಾರೆ. ಸಮಾರಂಭದಲ್ಲಿ ಸಚಿವ ಎಸ್ ಅಂಗಾರ, ಮಾಜಿ ಸಚಿವ ಯು ಟಿ ಖಾದರ್ ಸಹಿತ ಹಲವಾರು ಗಣ್ಯ ವ್ಯಕ್ತಿಗಳು ಭಾಗವಹಿಸಲಿದ್ದಾರೆ ಎಂದು ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಊರೂಸ್ ಸಮಿತಿ ಪ್ರಧಾನ ಕಾರ್ಯದರ್ಶಿ ಜಿ ಕೆ ಹಮೀದ್ ಗೂನಡ್ಕ ತಿಳಿಸಿದ್ದಾರೆ.

whatsapp image 2023 02 15 at 7.52.44 pm

Related Articles

Back to top button