ಗೂನಡ್ಕದ ಬಡ ಮಹಿಳೆಗೆ ಆಶ್ರಯವಾದ ತೆಕ್ಕಿಲ್ ಪ್ರತಿಷ್ಠಾನದ “ಬೈತುಲ್ ಆಯಿಷ”…
ಸುಳ್ಯ: ತೆಕ್ಕಿಲ್ ಪ್ರತಿಷ್ಠಾನದ ಟಿ.ಎಂ ಶಹೀದ್ ತೆಕ್ಕಿಲ್ ರವರ ನೇತೃತ್ವದಲ್ಲಿ ಸುಮಾರು 6 ಲಕ್ಷ ವೆಚ್ಚದಲ್ಲಿ ಗೂನಡ್ಕದ ಬಡ ಮಹಿಳೆ ಮತ್ತು ಏಕೈಕ ಪುತ್ರನಿಗೆ ನಿರ್ಮಿಸಿಕೊಟ್ಟಿರುವ “ಬೈತುಲ್ ಆಯಿಷ” ಮನೆಯ ಉದ್ಘಾಟನೆಯನ್ನು ಕೇರಳದ ಸಚಿವ ಅಹಮದ್ ದೇವರಕೊವಿಲ್ ಕೀ ನೀಡುವ ಮೂಲಕ ಹಸ್ತಾಂತರಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಪ್ರತಿಷ್ಠಾನದ ಸ್ಥಾಪಕ ಅಧ್ಯಕ್ಷರಾದ ಟಿ ಎಂ ಶಾಹಿದ್ ತೆಕ್ಕಿಲ್ ಅಧ್ಯಕ್ಷತೆ ವಹಿಸಲಿದ್ದು, ಈ ಕಾರ್ಯಕ್ರಮದಲ್ಲಿ ತೆಕ್ಕಿಲ್ ಎಕ್ಸಲೆನ್ಸ್ ಅವಾರ್ಡ್ ನ್ನು ಕೂಡ ನೀಡಲಾಗುವುದು. 37 ವರುಷಗಳ ಕಾಲ ಸರಕಾರಿ ಶಾಲೆಯಲ್ಲಿ ಮತ್ತು 10 ವರ್ಷಗಳ ಕಾಲ ತೆಕ್ಕಿಲ್ ಶಿಕ್ಷಣ ಸಂಸ್ಥೆಯಲ್ಲಿ ಒಟ್ಟು 47 ವರ್ಷಗಳ ಕಾಲ ಶೈಕ್ಷಣಿಕ ಕ್ಷೇತ್ರದಲ್ಲಿ ಅನುಭವ ಇರುವ ಹಾಗು ಹಲವು ಪ್ರಶಸ್ತಿ ಪಡೆದಿರುವ ದಾಮೋದರ ಮಾಸ್ತರ್ ಅವರಿಗೆ ತೆಕ್ಕಿಲ್ ಎಕ್ಸಲೆನ್ಸ್ ಪ್ರಶಸ್ತಿಯನ್ನು ನೀಡಲಾಗುವುದು.
ಈ ಹಿಂದೆ ಕೇರಳ ಸಚಿವರಾದ ಕೆ.ಪಿ.ಮೋಹನ್, ಮುಖ್ಯ ಮಂತ್ರಿಗಳ ಆರ್ಥಿಕ ಸಲಹೆಗಾರರಾದ ಶಾಫಿ ಮೆಹತರ್, ಜೋಡುಪಾಲದ ಪ್ರಳಯ ದುರಂತದಲ್ಲಿ ವಿಶೇಷ ಶ್ಲಾಘನೀಯ ಸೇವೆಗೈದ ಎಸ್.ಕೆ.ಎಸ್.ಎಸ್.ಎಫ್ ವಿಕಾಯ 18 ಸದಸ್ಯರ ತಂಡಕ್ಕೆ, ಗಡಿ ನಾಡ ಕಾಸರಗೋಡು ಪಕ್ಕದ ರವೀಂದ್ರ ರಾವನೇಶನ್ ಅವರಿಗೆ ಈ ಪ್ರಶಸ್ತಿಯನ್ನು ಈ ಹಿಂದೆ ನೀಡಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ ತಾಲೂಕಿನ ಅರಂತೋಡಿನಲ್ಲಿರುವ ತೆಕ್ಕಿಲ್ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನವು ಇಂದು ಹೆಮ್ಮರವಾಗಿ ಬೆಳೆದು ನಿಂತಿದೆ. 2001 ರಲ್ಲಿ ಪ್ರಾರಂಭಗೊಂಡು ಸಂಸ್ಥೆಯು ಕಳೆದ 3 ದಶಕಗಳಿಂದ ಸಾಮಾಜಿಕ, ರಾಜಕೀಯ, ಶೈಕ್ಷಣಿಕ, ಧಾರ್ಮಿಕ, ಸಹಕಾರಿ ಮತ್ತು ಕ್ರೀಡಾ ಕ್ಷೇತ್ರದಲ್ಲಿ ಕ್ರೀಯಾಶೀಲರಾಗಿ ಹತ್ತು-ಹಲವು ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರುತ್ತಿದೆ. ಸಂಸ್ಥೆಯ ಅದೀನದಲ್ಲಿ ತೆಕ್ಕಿಲ್ ಮಾದರಿ ಸಮೂಹ ಶಿಕ್ಷಣ ಸಂಸ್ಥೆಯು ಎಲ್.ಕೆ.ಜಿ ಯಿಂದ 10ನೇ ತರಗತಿಯವರೆಗೆ ಶಿಕ್ಷಣವನ್ನು ನೀಡುತ್ತಿದೆ. ತೆಕ್ಕಿಲ್ ಸಮುದಾಯ ಭವನವು ಅರಂತೋಡಿನಲ್ಲಿ ಕಾರ್ಯಚರಿಸುತ್ತಿದೆ. ತೆಕ್ಕಿಲ್ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಬಡ ಮತ್ತು ಅನಾಥ ಮಕ್ಕಳಿಗೆ ರಿಯಾಯಿತಿ ದರದಲ್ಲಿ ಶಿಕ್ಷಣವನ್ನು ನೀಡುತ್ತಿದೆ. ಶೈಕ್ಷಣಿಕ ಸಾಧನೆಗಳ ಮಧ್ಯೆ ರಂಜಾನ್ ತಿಂಗಳಲ್ಲಿ ಸೌಹಾರ್ದ ಇಫ್ತಾರ್ ಕೂಟ, ವಿವಿಧ ಕ್ಷೇತ್ರದಲ್ಲಿ ವಿಶೇಷ ಸಾಧನೆಗೈದವರನ್ನು ಗುರುತಿಸಿ ತೆಕ್ಕಿಲ್ ಎಕ್ಸಲೆನ್ಸ್ ಅವಾರ್ಡ್, ನಾಯಕತ್ವ ತರಭೇತಿ ಶಿಬಿರ. ವಿಧ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಸಾಧಕರನ್ನು ಗುರುತಿಸುವಿಕೆ, ಕ್ರೀಡಾ ಚಟುವಟಿಕೆಗಳು, ಸಾರ್ವಜನಿಕರಿಗೆ ಸರಕಾರಿ ಮತ್ತು ಇನ್ನಿತರ ಸೌಲಭ್ಯಗಳ ಮಾಹಿತಿ ಕಾರ್ಯಗಾರ ಮತ್ತು ಸರ್ವಧರ್ಮ ಸಾಮರಸ್ಯದ ಕಾರ್ಯಕ್ರಮಗಳನ್ನು ಏರ್ಪಡಿಸಿಕೊಂಡು ಬರುತ್ತಿದ್ದೇವೆ. ಸಂಸ್ಥೆಯ ವತಿಯಿಂದ ಬಡ ಮತ್ತು ಅನಾಥ ಹೆಣ್ಣು ಮಕ್ಕಳ ವಿವಾಹಕ್ಕೆ ಸಹಾಯ, ವಿಧ್ಯಾರ್ಥಿವೇತನ, ಮನೆ ನಿರ್ಮಾಣ ಮತ್ತು ದುರಸ್ತಿಗೆ ಸಹಾಯಧನ, ವೈಧ್ಯಕೀಯ ನೆರವು, ಜೋಡುಪಾಲ ದುರಂತ ಸಂಧರ್ಭದಲ್ಲಿ ಸಂತ್ರಸ್ತರನ್ನು ರಕ್ಷಿಸಿದ 18 ಮಂದಿ ಯುವಕರಿಗೆ ಸನ್ಮಾನ ಸೇರಿದಂತೆ ಹಲವಾರು ಸಮಾಜ ಮುಖಿ ಸೇವೆಯನ್ನು ಸಲ್ಲಿಸಲಾಗುತ್ತದೆ. ಇದರ ಅಭಿವ್ರದ್ಧಿಯ ರುವಾರಿಯೆ ಟಿ.ಎಂ.ಶಹೀದ್ ತೆಕ್ಕಿಲ್, ಟಿ.ಎಂ ಬಾಬಾ ಹಾಜಿ ತೆಕಿಲ್, ಮತ್ತು ಆಯಿಷ ಹಜ್ಜುಮ್ಮರವರ ಪುತ್ರನಾಗಿ ಜನಿಸಿದ ಟಿ.ಎಂ ಶಹೀದ್ ತೆಕ್ಕಿಲ್ ರವರು ವಿಧ್ಯಾರ್ಥಿಯಾಗಿದ್ದಾಗಲೇ ನಾಯಕತ್ವ ಗುಣಗಳನ್ನು ಮೈಗೂಡಿಸಿಕೊಂಡವರು. ರಾಜಕೀಯ ಕ್ಷೇತ್ರಕ್ಕೆ ಪಾದಾರ್ಪಣೆನೆಯನ್ನು ಮಾಡಿ ರಾಜ್ಯ ಮತ್ತು ರಾಷ್ಟ್ರಮಟ್ಟದ ಪದಾಧಿಕಾರಿಯಾಗಿ ಹಲವಾರು ಹುದ್ದೆಗಳನ್ನು ಅಲಂಕರಿಸಿದರು. ರಾಜಕೀಯದೊಂದಿಗೆ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ, ಕ್ರೀಡಾ ಕ್ಷೇತ್ರದ ಮುಂಚೂಣಿ ನಾಯಕರಾಗಿ ಗುರುತಿಸಿಕೊಂಡಿದ್ದಾರೆ. ತೆಕ್ಕಿಲ್ ಗ್ರಾಮೀಣಾಭಿವ್ರದ್ಧಿಯ ಪ್ರತಿಷ್ಠಾನದ ಮೂಲಕ ನೂರಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಯಶಸ್ವ್ವಿಯಾಗಿದ್ದಾರೆ. ಇವರ ಸಮಾಜಸೇವೆಯನ್ನು ಗುರುತಿಸಿ ಹಲವಾರು ಪ್ರಶಸ್ತಿ, ಪುರಸ್ಕಾರಗಳು ಇವರನ್ನು ಅರಸಿಕೊಂಡು ಬಂದಿದೆ. 2002 ರಲ್ಲಿ ರಾಜ್ಯ ಯುವ ಪ್ರಶಸ್ತಿ, 2018ರಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಕೇರಳ ರಾಜ್ಯದ ಕಾಸರಗೋಡು ಚುಟುಕು ಸಾಹಿತ್ಯ ಪರಿಷತ್, ರಾಜ್ಯ ಘಟಕದ ವತಿಯಿಂದ ಕರಾವಳಿ ಸಾಂಸ್ಕçತಿಕ ಪ್ರತಿಷ್ಠಾನ ರಾಷ್ಟ್ರೀಯ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಪೇರಡ್ಕ ಮುಹಿಯುದ್ದೀನ್ ಜುಮ್ಮ ಮಸೀದಿಯ ಅಧ್ಯಕ್ಷರಾಗಿ ಪ್ರಸ್ತುತ ಗೌರವಾಧ್ಯಕ್ಷರಾಗಿ, ಅರಂತೋಡು ಜುಮಾ ಮಸೀದಿಯ ಕಟ್ತಡ ಪುನರ್ ನಿರ್ಮಾಣ ಸಮಿತಿಯ ಅಧ್ಯಕ್ಷರಾಗಿ, ಅನ್ವಾರುಲ್ ಹುದಾ ಯಂಗ್ ಮೆನ್ಸ್ ಎಸೋಶಿಯೇಶನ್ ಗೌರವಾಧ್ಯಕ್ಷರಾಗಿ ಸೇವೆ ಸಲ್ಲಿಸಿರುತ್ತಾರೆ. ಇವರು ಪೇರಡ್ಕದಲ್ಲಿ ತೆಕ್ಕಿಲ್ ಮೊಹಮ್ಮದ್ ಹಾಜಿಯವರ ಸ್ಮರಣಾರ್ಥ ಮದರಸ ನಿರ್ಮಿಸಿಕೊಟ್ಟಿರುತ್ತಾರೆ. ಹಾಗೂ ದರ್ಗಾ ಶರೀಫ್ ಗೆ ಹೋಗಲು ರಸ್ತ್ತೆಗೆ ಸ್ಥಳಾವಾಕಾಶ ಮಾಡಿರುತ್ತಾರೆ. ವಿವಿಧ ಇಲಾಖೆಗಳಿಂದ ಪೇರಡ್ಕ ಮಸೀದಿ, ಮದರಸ ಮತ್ತು ವಕ್ಪ್ ಸೊತ್ತುಗಳ ರಕ್ಷಣೆಗಾಗಿ ಆವರಣಗೋಡೆ ರಚನೆಗೆ ರೂ.33 ಲಕ್ಷ ಕರ್ನಾಟಕ ಪ್ರವಾಸೋಧ್ಯಮ ಇಲಾಖೆಯಿಂದ ಪೇರಡ್ಕ ಅಲ್ಲಿ ಯಾತ್ರಿ ಭವನ ನಿರ್ಮಾಣ ಕ್ಕೆ ರೂ.60 ಲಕ್ಷ. ಗೂನಡ್ಕದಿಂದ ಪೇರಡ್ಕ ರಸ್ತೆ ಮತ್ತು ಸೇತುವೆ ನಿರ್ಮಾಣಕ್ಕೆ ರೂ.5 ಕೋಟಿ ಹಾಗೂ ಹೀಗೆ ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆಯ ಹಲವಾರು ಅನೇಕ ಮಸೀದಿಗಳಿಗೆ, ಮದರಸಗಳಿಗೆ, ದೇವಸ್ಥಾನ, ಭಜನಾ ಮಂದಿರ, ಶಾದಿ ಮಹಲ್, ಶಿಕ್ಷಣ ಸಂಸ್ಥೆ, ಗ್ರಾಮೀಣ ರಸ್ತೆಗಳಿಗೆ, ಸೇತುವೆಗಳಿಗೆ ಯೋಜನೆಗಳಿಗೆ ಸರಕಾರದ ವಿವಿಧ ಇಲಾಖೆಗಳಿಂದ ಕೋಟಿಗಟ್ಟಲೆ ಅನುದಾನವನ್ನು ಒದಗಿಸಿಕೊಟ್ಟಿದ್ದಾರೆ. ನಾಲ್ಕು ತಲೆಮಾರಿನಿಂದ ಮುತ್ತಜ್ಜ ಅರಂತೋಡು ಪಠೇಲ್ ಅಹಮ್ಮದ್ ಕುಂಇ’ ಹಾಜಿ, ಅಜ್ಜ ತೆಕ್ಕಿಲ್ ಮಹಮ್ಮದ್ ಹಾಜಿ, ತಂದೆ ಬಾಬ ಹಾಜಿ ಹಾಗೂ ಟಿ.ಎಂ ಶಹೀದ್ ತೆಕ್ಕಿಲ್ ರವರು 4 ತಲೆಮಾರಿನಿಂದ ಸುಮಾರು 120 ವರ್ಷಗಳಿಂದ ಮಸೀದಿಯ ಆಡಳಿತ ಮತ್ತು ಅಭಿವ್ರದ್ಧಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.