ಶಿಕ್ಷಕ ಸಾಹಿತಿಗಳ ಸಮ್ಮೇಳನ – ನೆಂಪು ನರಸಿಂಹ ಭಟ್ಟ ಸರ್ವಾಧ್ಯಕ್ಷ…

ಉಡುಪಿ: ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತಿನ ಆರನೆಯ ಶಿಕ್ಷಕ ಸಾಹಿತಿಗಳ ರಾಜ್ಯಮಟ್ಟದ ಸಮ್ಮೇಳನ ಸರ್ವಾಧ್ಯಕ್ಷರಾಗಿ ಉಡುಪಿಯ ಹಿರಿಯ ಶಿಕ್ಷಕ ಸಾಹಿತಿ ನೆಂಪು ನರಸಿಂಹ ಭಟ್ಟರನ್ನು ಆಯ್ಕೆ ಮಾಡಲಾಗಿದೆ ಎಂದು ಸಂಚಾಲಕ ಕೃಷ್ಣಮೂರ್ತಿ ಕುಲಕರ್ಣಿ ತಿಳಿಸಿದ್ದಾರೆ.
ರಾಜ್ಯ ಪ್ರಶಸ್ತಿ ಪುರಸ್ಕೃತ ರಾದ ನೆಂಪು ಹತ್ತಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ ಹಿರಿಯ ಚಿಂತಕರು. ಸೆಪ್ಟೆಂಬರ್ ೫ ರಂದು ಅಂಬಲ್ ಪಾಡಿ ದೇವಸ್ಥಾನ ಸಭಾಂಗಣ ದಲ್ಲಿ ಸಮ್ಮೇಳನ ಜರುಗಲಿದ್ದು, ರಾಜ್ಯದ ಆಸಕ್ತ ಶಿಕ್ಷಕ ಸಾಹಿತಿಗಳು ಪಾಲ್ಗೊಳ್ಳಲು ಅವಕಾಶ ಇದೆ.ಹೆಚ್ಚಿನ ಮಾಹಿತಿಗಾಗಿ ೯೪೮೨೧೮೧೩೦೫ ಗೆ ಸಂಪರ್ಕ ಮಾಡುವಂತೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ.