ಅನ್ವಾರುಲ್ ಹುದಾ ಶಾದಿ ಮಹಲ್ ಕಟ್ಟಡ ಉದ್ಘಾಟನಾ ಸಮಾರಂಭದ ಆಮಂತ್ರಣ ಪತ್ರ ಬಿಡುಗಡೆ…
ಸುಳ್ಯ: ಅರಂತೋಡು ಅನ್ವಾರುಲ್ ಹುದಾ ಯಂಗ್ ಮೆನ್ಸ್ ಎಸೋಸಿಯೆಶನ್( ರಿ) ಅಧೀನದಲ್ಲಿರುವ ಉದಯ ನಗರದಲ್ಲಿ ನೂತನವಾಗಿ ನಿರ್ಮಿಸಿದ ಅನ್ವಾರುಲ್ ಹುದಾ ಶಾದಿ ಮಹಲ್ ಕಟ್ಟಡದ ಉದ್ಘಾಟನಾ ಸಮಾರಂಭ ಮೇ.20 ರಂದು ಸಂಜೆ ಜರಗಲಿದ್ದು ಈ ಸಮಾರಂಭದ ಆಮಂತ್ರಣ ಪತ್ರ ಬಿಡುಗಡೆ ಮೇ 17 ರಂದು ಅರಂತೋಡು ಬದ್ರಿಯಾ ಜುಮ್ಮಾ ಮಸೀದಿಯಲ್ಲಿ ನಡೆಯಿತು.
ಅನ್ವಾರುಲ್ ಹುದಾ ಯಂಗ್ ಮೆನ್ಸ್ ಎಸೋಸಿಯೆಶನ್ ಅಧ್ಯಕ್ಷ ಅಬ್ದುಲ್ ಮಜೀದ್ ರವರು ಆಮಂತ್ರಣ ಪತ್ರಿಕೆಯನ್ನು ಮಸೀದಿ ಖತೀಬರಾದ ಅಲ್ ಹಾಜ್ ಇಸಾಖ್ ಬಾಖವಿ ರವರಿಗೆ ಹಸ್ತಾಂತರ ಮಾಡುವ ಮೂಲಕ ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಜಮಾ ಅತ್ ಅಧ್ಯಕ್ಷ ಅಶ್ರಫ್ ಗುಂಡಿ,ಜಮಾ ಅತ್ ಕಾರ್ಯದರ್ಶಿ ಕೆ.ಎಮ್.ಮೂಸಾನ್ ,ಎಸೋಸಿಯೆಶನ್ ಕಾರ್ಯದರ್ಶಿ ಫಸಿಲು,ದ್ಸಿಕ್ರ್ ಸ್ವಲಾತ್ ಸಮಿತಿ ಉಪಾಧ್ಯಕ್ಷ ಅಬೂಬಕ್ಕರ್ ಪಾರೆಕ್ಕಲ್,ಸಾಜಿದ್ ಅಝ್ಝಹರಿ ಪೇರಡ್ಕ,ನುಸ್ರತುಲ್ ಇಸ್ಲಾಂ ಮದರಸ ಸಂಚಾಲಕ ಅಮೀರ್ ಕುಕ್ಕುಂಬಳ,ಬದ್ರುದ್ದೀನ್ ಪಟೇಲ್,ಸೌದಿ ಪ್ರತಿನಿಧಿ ಹಬೀಬ್ ಗುಂಡಿ,ಎಸ್.ಕೆ.ಎಸ್.ಎಸ್.ಎಫ್ ಅರಂತೋಡು ಶಾಖೆ ಅಧ್ಯಕ್ಷ ಆಶೀಕ್ ಕುಕ್ಕುಂಬಳ,ಎಸೋಸಿಯೆಶನ್ ಸದಸ್ಯರಾದ ಹನೀಫ್,ಮನ್ಸೂರ್ ಪಾರೆಕ್ಕಲ್,ಜುಬೈರ್,ಸಮದ್ ಕೊಡೆಂಕೇರಿ,ಹಾಜಿ ಅಜರುದ್ದೀನ್ ಸೇರಿದಂತೆ ಜಮಾ ಅತ್ ಸದಸ್ಯರು ,ಸಂಸ್ಥೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.