ಗೀತಾ ದೀಕ್ಷೆ ಪಡೆದ ಸಚಿವ ವಿ.ಸುನಿಲ್ ಕುಮಾರ್…
ಉಡುಪಿ:ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮಾನ್ಯ ಸಚಿವರಾದ ಶ್ರೀ ವಿ.ಸುನಿಲ್ ಕುಮಾರ್ ಅವರು ವ್ಯಾಸಪೂರ್ಣಿಮೆಯ ಪವಿತ್ರ ದಿನವಾದ ಇಂದು ಬೆಳಿಗ್ಗೆ ಶ್ರೀ ಪುತ್ತಿಗೆ ಮಠದ ಪೀಠಾಧಿಪತಿಗಳಾದ ಪರಮಪೂಜ್ಯ ಶ್ರೀ ಶ್ರೀ ಸುಗುಣೇಂದ್ರ ತೀರ್ಥಶ್ರೀಪಾದರು ಸಂಕಲ್ಪಿಸಿರುವ ಬೃಹದ್ಯೋಜನೆಯಾದ ಕೋಟಿ ಗೀತಾ ಲೇಖನ ಯಜ್ಞದಲ್ಲಿ ಪರಮಪೂಜ್ಯ ಶ್ರೀಪಾದರಿಂದ ಕುಟುಂಬ ಸಮೇತರಾಗಿ ದೀಕ್ಷೆಯನ್ನು ಸ್ವೀಕರಿಸಿದರು.
ಈ ಯೋಜನೆಯ ಪ್ರಚಾರವನ್ನೂ ಮಾಡುವುದಾಗಿ ಅವರು ತಿಳಿಸಿದರು.