ಇಸ್ರೋ ಸಂಶೋಧನಾ ವಿದ್ಯಾರ್ಥಿನಿ ಮಾನಸ ಜಯಕುಮಾರ್ ಮಂಡೆಕೋಲು ಇವರಿಗೆ ಮಲೆನಾಡು ಚಾರಿಟೇಬಲ್ ಟ್ರಸ್ಟ್ ವತಿಯಿಂದ ಗೌರವಾರ್ಪಣೆ…
ಸುಳ್ಯ: ಭಾರತದ ಬಾಹ್ಯಾಕಾಶ ಇತಿಹಾಸ ದ ಅಮೃತ ಗಳಿಗೆಯನ್ನು ಇತಿಹಾಸದ ಪುಟಗಳಲ್ಲಿ ದಾಖಲಿಸಿದ ಚಂದ್ರಯಾನ -3 ವಿಕ್ರಂ ಲ್ಯಾಂಡರ್ ಯಶಸ್ವಿಯಲ್ಲಿ ನೂರಾರು ವಿಜ್ಞಾನಿಗಳ, ಸಂಶೋಧನಾ ನಿರತ ವಿದ್ಯಾರ್ಥಿಗಳ ಪಾತ್ರ ಬಹಳ ಪ್ರಾಮುಖ್ಯವಾದದ್ದು, ಈ ನಿಟ್ಟಿನಲ್ಲಿ ಇಸ್ರೋ ಸಂಶೋಧನಾ ವಿದ್ಯಾರ್ಥಿನಿಯಾಗಿ ಕಾರ್ಯ ನಿರ್ವಹಿಸಿದ ಸುಳ್ಯ ತಾಲೂಕಿನ ಮಾನಸ ಜಯಕುಮಾರ್ ಇವರನ್ನು ಮಲೆನಾಡು ಚಾರಿಟೇಬಲ್ ಟ್ರಸ್ಟ್ ವತಿಯಿಂದ ಗೌರವಾರ್ಪಣೆ ಮಾಡಲಾಯಿತು.
ಡಾ. ಶ್ರೀನಿಧಿ ಅವರು ಮಾನಸ ರನ್ನು ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿ ಗಳಾಗಿ ಭಾಗವಹಿಸದ್ದ ಕೆಪಿಸಿಸಿ ಅಲ್ಪಸಂಖ್ಯಾತರ ವಿಭಾಗದ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ. ಎಂ. ಮುಸ್ತಫ ಮಾತನಾಡಿ, ಇತ್ತೀಚೆಗೆ ದೇಶ -ವಿದೇಶ ಗಳಲ್ಲಿ ಜರಗುವ ಯಾವುದೇ ಸಾಧನೆಯಲ್ಲಿ ಸುಳ್ಯ ಮೂಲದವರು ಭಾಗಿಯಾಗುತ್ತಿರುವುದು ನಮ್ಮ ನಾಡಿನ ಹೆಮ್ಮೆಯಾಗಿದೆ. ಜಗತ್ತೆ ಕೊಂಡಾಡಿದ ಚಂದ್ರಯಾನ 3 ಸಾಧನೆಯಲ್ಲಿ ಸುಳ್ಯದ ಮೂವರು ವಿಜ್ಞಾನಿಗಳ ಪಾತ್ರ ಅಭಿನಂದನೀಯ. ಮಾನಸ ಜಯಕುಮಾರ್ ಇಸ್ರೋ ಸಂಶೋಧನಾ ವಿದ್ಯಾರ್ಥಿನಿಯಾಗಿ, ಚಂದ್ರ ಯಾನ -3 ರ ಅಂಗವಾಗಿ ಅಹಮದಾಬಾದಲ್ಲಿ ನಡೆದ ಯೋಜನಾ ಕಾರ್ಯಾಗಾರದಲ್ಲಿ ಭಾಗವಹಿಸಿ ಪ್ರಶoಶಿಲ್ಪಟ್ಟಿ ದ್ದರು. ಉಪಗ್ರಹ ಆoಟೇನಾ ರಚಿಸಿದ ತಂಡದಲ್ಲಿ ಪ್ರಮುಖ ಪಾತ್ರವಹಿಸಿದವರು ಎಂದರು.
ಈ ಸಂದರ್ಭದಲ್ಲಿ ಟ್ರಸ್ಟ್ ಅಧ್ಯಕ್ಷ, ನಗರ ಪಂಚಾಯತ್ ಸದಸ್ಯ ರಿ ಯಾಜ್ ಕಟ್ಟೆಕ್ಕಾರ್ಸ್, ಖ್ಯಾತ ಜ್ಯೋತಿಷಿ ಮಹಾಲಿಂಗೇಶ್ವರ ಶರ್ಮ, ತೋಟ ತೊಯಿಲಾಲಿ ಸಂಘ ದ ಕುಮಾರ್ ಕೆಎಫ್ ಡಿಸಿ
ಹನೀಫ್ ಕುಂಡಿಲ್, ಹನೀಫ್ ಎಕೆಬಿ, ಸಂತೋಷ್ ಕೇರ್ಪಳ, ದೇವಿಪ್ರಸಾದ್ ಶ್ರೀನಿವಾಸ್ ಕಾಲೇಜು ಮೊದಲಾವರು ಉಪಸ್ಥಿತರಿದ್ದರು. ಮಾನಸ ರವರು ಸುಳ್ಯ ಮೂಲದ ಬಾಲಕೃಷ್ಣ ಮತ್ತು ಕುಸುಮ ದಂಪತಿಗಳ ಪುತ್ರಿ, ಪತಿ ಜಯಕುಮಾರ್ ರವರೊಂದಿಗೆ ಮಂಗಳೂರಿನಲ್ಲಿ ವಾಸ್ತವ್ಯ ಹೊಂದಿರುತ್ತಾರೆ.