ಗ್ರೇಟ್ ಇಂಡಿಯನ್ ಸನ್ ಪ್ರಶಸ್ತಿ ಪುರಸ್ಕೃತ ಸ್ಪೀಕರ್ ಯು. ಟಿ. ಖಾದರ್ ರವರಿಗೆ ಅಂಚೆ ಇಲಾಖೆಯ ಮೈ ಸ್ಟ್ಯಾಂಪ್ ಸ್ಮರಣಿಕೆ ಕೊಡುಗೆ…

ಬೆಂಗಳೂರು: ಇತ್ತೀಚೆಗೆ ದೆಹಲಿಯಲ್ಲಿ ದ ಗ್ರೇಟ್ ಇಂಡಿಯನ್ ಸನ್ ಪ್ರಶಸ್ತಿಯನ್ನು ಸ್ವೀಕರಿಸಿದ ಕರ್ನಾಟಕ ಸರಕಾರದ ಅರೋಗ್ಯ, ಕುಟುಂಬ ಕಲ್ಯಾಣ ಇಲಾಖೆ, ಆಹಾರ ಮತ್ತು ನಾಗರಿಕ ಪೂರೈಕೆ ಸಚಿವರಾಗಿ, ನಗರಾಭಿವೃದ್ಧಿ ಇಲಾಖೆ ಯಲ್ಲಿ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸಿ, ಸದನ ವೀರ ಪ್ರಶಸ್ತಿ ಪಡೆದು, ವಿಪಕ್ಷ ಶಾಸಕಾಂಗ ಉಪ ನಾಯಕ ರಾಗಿ ಸೇವೆ ಸಲ್ಲಿಸಿರುವುದನ್ನು ಪರಿಗಣಿಸಿ ದ ಗ್ರೇಟ್ ಸನ್ ಅಫ್ ಇಂಡಿಯಾ ಪ್ರಶಸ್ತಿಗೆ ಭಾಜನಾಗಿದ್ದರು. ಅಂಚೆ ಇಲಾಖೆಯು ವಿಶೇಷ ಸಂದರ್ಭದಲ್ಲಿ ನೀಡುವ ಮೈ ಸ್ಟ್ಯಾಂಪ್ ಕೊಡುಗೆ ಯಾಗಿ ನೀಡಿ ದ. ಕ. ಮತ್ತು ಉಡುಪಿ ಜಿಲ್ಲಾ ಮುಸ್ಲಿಂ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ಉಪಾಧ್ಯಕ್ಷ ಕೆ. ಎಂ. ಮುಸ್ತಫ ಬೆಂಗಳೂರಿನಲ್ಲಿ ಭೇಟಿ ಮಾಡಿ, ಶಾಲು ಹೊದಿಸಿ ಸನ್ಮಾನಿಸಿ, ಸ್ಮರಣಿಕೆ ನೀಡಿ ಗೌರವಿಸಿದರು.
ಈ ಸಂದರ್ಭದಲ್ಲಿ ಒಕ್ಕೂಟದ ಗೌರವಾಧ್ಯಕ್ಷ ಉಮ್ಮರ್ ಟಿ. ಕೆ., ಅಧ್ಯಕ್ಷ ನಿವೃತ್ತ ಕಂದಾಯ ಅಧಿಕಾರಿ ಮೂಸಬ್ಬ. ಪಿ. ಬ್ಯಾರಿ, ಕಾರ್ಯದರ್ಶಿ ರಿಯಾಜ್ ಟ್ಯಾಲೆಂಟ್ ಮೊದಲಾದವರು ಉಪಸ್ಥಿತರಿದ್ದರು.

Related Articles

Back to top button