ಸುಳ್ಯದಲ್ಲಿ ಭೂಕಂಪನ- ಮುನ್ನೆಚ್ಚರಿಕೆ ಕ್ರಮ ವಹಿಸುವಂತೆ ಆಗ್ರಹಿಸಿ SDPI ಪಕ್ಷದ ವತಿಯಿಂದ ತಹಶೀಲ್ದಾರರಿಗೆ ಮನವಿ…

ತುರ್ತು ಸೇವೆಗೆ ಎಸ್ಡಿಪಿಐ ರೆಸ್ಕ್ಯೂ ತಂಡ ಸಹಕಾರ...

ಸುಳ್ಯ: ತಾಲ್ಲೂಕಿನ ಸಂಪಾಜೆ, ಗೂನಡ್ಕ,ಚೆಂಬು ಸೇರಿದಂತೆ ಮುಂತಾದ ಹಲವು ಕಡೆಗಳಲ್ಲಿ ಕಳೆದ ಒಂದು ವಾರದಲ್ಲಿ 6 ಕ್ಕೂ ಹೆಚ್ಚು ಬಾರಿ ಭೂಕಂಪನ ಉಂಟಾದ ವಿಚಾರವಾಗಿ SDPI ಸುಳ್ಯ ನಿಯೋಗದ ವತಿಯಿಂದ ತಹಶೀಲ್ದಾರರನ್ನು ಭೇಟಿಯಾಗಿ ಮುನ್ನೆಚ್ಚರಿಕೆ ಕ್ರಮ ವಹಿಸುವಂತೆ ಮನವಿ ಮಾಡಲಾಯಿತು.
ತಾಲ್ಲೂಕಿನ ಹಲವು ಭಾಗಗಳಲ್ಲಿ ಗುಡ್ಡಗಾಡು ಪ್ರದೇಶದಲ್ಲಿ ವಾಸಿಸುವ ಜನರಿದ್ದಾರೆ ಅವರನ್ನು ಮುಂಜಾಗ್ರತಾ ಕ್ರಮವಾಗಿ ಬೇರೆ ಪ್ರದೇಶಕ್ಕೆ ಸ್ಥಳಾಂತರ ಮಾಡಿ ಬದಲಿ ವ್ಯವಸ್ಥೆಯನ್ನು ಕಲ್ಪಿಸಬೇಕಾಗಿದೆ.
ಸುಳ್ಯದಲ್ಲಿ ವಿಪತ್ತು ನಿರ್ವಹಣಾ ತಂಡ (NDRF) ವನ್ನು ಸಿದ್ಧತೆಗೊಳಿಸಿಡಬೇಕು ಹಾಗೂ ಹಲವಾರು ಸಂಘ ಸಂಸ್ಥೆಗಳನ್ನು ಸಂಪರ್ಕಿಸಿ ರಕ್ಷಣಾ ತರಬೇತಿಯನ್ನು ನೀಡಬೇಕು. ಮುಂಜಾಗ್ರತಾ ಕ್ರಮವಾಗಿ ಬೇಕಾಗಿರುವ ಎಲ್ಲಾ ಪೂರ್ವ ತಯಾರಿಯನ್ನು ಜಿಲ್ಲಾಡಳಿತ, ತಾಲೂಕು ಆಡಳಿತ ನಡೆಸಬೇಕು ಹಾಗೂ ಜಿಲ್ಲಾಧಿಕಾರಿಗಳು ಸ್ಥಳವನ್ನು ಪರಿಶೀಲಿಸಿ ಅಗತ್ಯ ಮುಂಜಾಗ್ರತಾ ಕ್ರಮ ಜರುಗಿಸಬೇಕೆಂದು ಎಸ್‌ಡಿಪಿಐ ಸುಳ್ಯ ವಿಧಾನಸಭಾ ಕ್ಷೇತ್ರ ಸಮಿತಿ ಮನವಿಯಲ್ಲಿ ಆಗ್ರಹಿಸಿತು.
ಹಾಗೆಯೇ ಜಿಲ್ಲೆಯಾದ್ಯಂತ ಧಾರಾಕಾರವಾಗಿ ಮಳೆ ಸುರಿಯುತ್ತಿದ್ದು ಸುಳ್ಯ ತಾಲೂಕಿನಲ್ಲಿ ಪ್ರಾಕೃತಿಕ ವಿಕೋಪ ಸಂಭವಿಸಿದ್ದಲ್ಲಿ ಸಾರ್ವಜನಿಕರ ಸೇವೆಗೆ SDPI ಪಕ್ಷದ ವತಿಯಿಂದ ತುರ್ತು ಕಾರ್ಯಾಚರಣೆಗೆ ತಂಡವನ್ನು ರಚಿಸಲಾಗಿದೆ.
ಆದುದರಿಂದ ಸಾರ್ವಜನಿಕರು ಮತ್ತು ಯಾವುದೇ ಇಲಾಖೆಗಳು ನಮ್ಮನ್ನು ಸಂಪರ್ಕಿಸಬಹುದು ಎಂಬ ಮಾಹಿತಿಯನ್ನು ತಹಶೀಲ್ದಾರರಿಗೆ ನೀಡಲಾಯಿತು.

ಈ ಸಂದರ್ಭದಲ್ಲಿ SDPI ಸುಳ್ಯ ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷರಾದ ಇಕ್ಬಾಲ್ ಬೆಳ್ಳಾರೆ, ಉಪಾಧ್ಯಕ್ಷರಾದ ಬಾಬು ಎನ್ ಸವಣೂರು, ಕಾರ್ಯದರ್ಶಿ ರಫೀಕ್ ಎಂ ಎ. ಸದಸ್ಯರಾದ ಅಬ್ದುಲ್ ಕಲಾಂ ಸುಳ್ಯ, ಸುಳ್ಯ ಬ್ಲಾಕ್ ಸಮಿತಿ ಅಧ್ಯಕ್ಷ ಆಬೀದ್ ಪೈಚಾರ್, ಸುಳ್ಯ ನಗರ ಸಮಿತಿ ಅಧ್ಯಕ್ಷ ಮೀರಝ್ ಸುಳ್ಯ,ಬೆಳ್ಳಾರೆ ಬ್ಲಾಕ್ ಸಮಿತಿ ಅಧ್ಯಕ್ಷ ಹಮೀದ್ ಮರಕ್ಕಡ, ಸುಳ್ಯ ಬ್ಲಾಕ್ ಕಾರ್ಯದರ್ಶಿ ಮುನೀರ್ ಶೈನ್ ಉಪಸ್ಥಿತರಿದ್ದರು.

Sponsors

Related Articles

Back to top button