ಬೆಂಕಿ ಆಕಸ್ಮಿಕ – ಮನೆ ಭಸ್ಮ,ಬೈಕ್ ಬೆಂಕಿಗೆ ಆಹುತಿ…

ಬಂಟ್ವಾಳ: ನರಿಕೊಂಬು ಗ್ರಾಮ ಬೋರುಗುಡ್ಡೆ ಮನೆ ಉಷಾ ರಮೇಶ್ ಅವರ ಮನೆಯಲ್ಲಿ ಸೆ. 8 ರಂದು ಮುಂಜಾನೆ ಆಕಸ್ಮಿಕ ಬೆಂಕಿ ಅನಾಹುತ ಸಂಭವಿಸಿ ಮನೆ ಹಿಂಬದಿ ಪೂರ್ಣ ಭಸ್ಮವಾಗಿದೆ.
ಮನೆಯ ಎದುರು ಇದ್ದ ಬೈಕ್ ಬೆಂಕಿಯ ಬಿಸಿಯಿಂದ ಮೆಲ್ಟ್ ಆಗಿದೆ. ಅಗ್ನಿ ಶಾಮಕ ದಳ ಸ್ಥಳಕ್ಕೆ ಆಗಮಿಸಿತ್ತು. ಅಷ್ಟರಲ್ಲಿ ಊರ ಮಂದಿ ನೀರು ಹಾಕಿ ಬೆಂಕಿ ಆರಿಸಿದ್ದರು. ಘಟನೆಯಲ್ಲಿ ಸುಮಾರು ರೂ. 5ಲಕ್ಷ ನಷ್ಟ ಆಗಿದೆ ಎಂದು ಅಂದಾಜಿಸಲಾಗಿದೆ.
ಕಂದಾಯ ಅಧಿಕಾರಿಗಳು, ಮಾಜಿ ಸಚಿವ ಬಿ. ರಮಾನಾಥ ರೈ ಸಹಿತ ಪ್ರಮುಖರು ಸ್ಥಳಕ್ಕೆ ಬಂದಿದ್ದರು.
ಮುಂಜಾನೆ ಪುರೋಹಿತ ಗಣೇಶ್ ಮಯ್ಯ ಅವರು ಪೂಜಾ ಕಾರ್ಯಕ್ರಮಕ್ಕೆ ಹೋಗುತ್ತಿದ್ದಾಗ ದಟ್ಟ ಹೊಗೆ ಬೆಂಕಿಯನ್ನು ಕಂಡು ಹತ್ತಿರದ ಮನೆಯಲ್ಲಿ ಮಾಹಿತಿ ಹೇಳಿದ್ದರು.
ಅಷ್ಟರಲ್ಲಿ ಉಷಾ ಎದ್ದು ಹೊಗೆಯಿಂದ ಕೆಮ್ಮುತ್ತಾ ಹೊರಗೆ ಬಂದಿದ್ದರು.
ಅವರ ಪತಿ ಮೂರು ವರ್ಷಗಳ ಹಿಂದೆ ಹೃದಯಾಘಾತದಿಂದ ಮೃತರಾಗಿದ್ದರು.
ಮನೆಯಲ್ಲಿ ಪುತ್ರ ಮತ್ತು ಮೊಮ್ಮಗ ಇದ್ದರು. ಘಟನೆಗೆ ಸ್ಪಷ್ಟ ಕಾರಣ ತಿಳಿದಿಲ್ಲ.ಬಚ್ಚಲು ಮನೆ, ಹತ್ತಿರದ ಕೋಣೆಗಳ ವಿದ್ಯುತ್ ವಯರ್ ಬೆಂಕಿಯಿಂದ ಕರಕಲಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

whatsapp image 2025 09 08 at 3.58.50 pm (2)

whatsapp image 2025 09 08 at 3.58.50 pm (1)

whatsapp image 2025 09 08 at 3.58.50 pm

Related Articles

Back to top button