ಸುಳ್ಯ ನಗರ ಪಂಚಾಯತಿ ವ್ಯಾಪ್ತಿಯ ಬಡ ಜನತೆಗೆ ಆಸ್ಪತ್ರೆಗೆ ತೆರಳಲು ಉಚಿತ ಅಟೋರಿಕ್ಷಾ…
ಸುಳ್ಯ : ಲಾಕ್‌ಡೌನ್ ಸಂದರ್ಭದಲ್ಲಿ ಸುಳ್ಯ ನಗರದ ಬಡ ನಿವಾಸಿಗಳಿಗೆ ತುರ್ತು ಸಂಧರ್ಭದಲ್ಲಿ ಆಸ್ಪತ್ರೆಗೆ ತೆರಳಲು ಉಚಿತ ರಿಕ್ಷಾ ಸವಾರಿ ಯೋಜನೆಯನ್ನು ಮಲೆನಾಡು ಚಾರಿಟೇಬಲ್ ಟ್ರಸ್ಟ್ ವತಿಯಿಂದ ಆರಂಭಿಸಲಾಗಿದೆ.
ಮಲೆನಾಡು ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಹಾಗೂ ನ. ಪಂ. ಸದಸ್ಯ ರಿಯಾಝ್ ಕಟ್ಟೆಕ್ಕಾರ್ ನೇತೃತ್ವದಲ್ಲಿ ಈ ಯೋಜನೆಯನ್ನು ರೂಪಿಸಲಾಗಿದ್ದು, ಜುನೈದ್ ಎನ್.ಎ ಹಾಗೂ ನಾಸಿರ್ ಕಮ್ಮಾಡಿ ಈ ಯೋಜನೆಗೆ ಸಹಕಾರ ನೀಡಿದ್ದಾರೆ.
ಉಚಿತ ರಿಕ್ಷಾ ಸವಾರಿ ಯೋಜನೆ ಸುಳ್ಯ ಪೇಟೆಯ ಜನರಿಗೆ ಸಹಾಯವಾಗಲಿದ್ದು, ಮೇ.31 ರಿಂದ ಜೂ.7ರವರೆಗೆ ಪ್ರತಿದಿನ ಬೆಳಗ್ಗೆ ಗಂಟೆ 10ಯಿಂದ ರಾತ್ರಿ 7 ಗಂಟೆಯವರೆ ಈ ಯೋಜನೆ ಚಾಲ್ತಿಯಲ್ಲಿರುತ್ತದೆ ಎಂದು ಮಲೆನಾಡು ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ರಿಯಾಝ್ ಕಟ್ಟೆಕ್ಕಾರ್ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಸಿದ್ದೀಕ್ ಕೊಕ್ಕೊ, ನಾಸಿರ್ ಕಮ್ಮಾಡಿ, ಮರ್‌ಝೂಕ್, ಶಿಹಾಬ್ ಕೇರ್ಪಳ, ಬಾತಿಶ್ ನಾವೂರು, ಶಾಝಿಲ್ ಕುಂಬ್ಲೆಕ್ಕಾರ್ಸ್, ಇಮ್ತಿಯಾಝ್ ನಾವೂರು, ಶಹೀದ್ ಪಾರೆ, ರಫೀಕ್ ಚೆಂಗಳ, ಮೂಯಿದಿನ್ ಕಲ್ಲುಮುಟ್ಲು, ನಾಸಿರ್ ಉಗ್ರಾಣಿ ಮುಂತಾದವರು ಉಪಸ್ಥಿತರಿದ್ದರು.
ಈ ಯೋಜನೆಯ ಸದುಪಯೋಗ ಪಡಿಸಿಕೊಳ್ಳಲು ಸ್ಥಳೀಯ ನಿವಾಸಿಗಳು ಕೋವಿಡ್ ಸಹಾಯ ಮೊಬೈಲ್ ಸಂಖ್ಯೆ 9945542103, 8151835118, 9844430965 ಸಂಪರ್ಕಿಸಬಹುದು.