ಪಾರ್ವತಿ ಅನಂತಾಡಿ ನಿಧನ…
ಬಂಟ್ವಾಳ : ಅನಂತಾಡಿ ಗ್ರಾಮದ ಜನಸಂಘದ ಹಿರಿಯ ಕಾರ್ಯಕರ್ತ ತಾಳಿಪಡ್ಪು ನಿವಾಸಿ ದಿ. ಕರಿಯಪ್ಪ ಗೌಡ ಇವರ ಪತ್ನಿ ಶ್ರೀಮತಿ ಪಾರ್ವತಿ (74) ಅಲ್ಪಕಾಲದ ಅಸೌಖ್ಯದಿಂದ ತಾಳಿಪಡ್ಪು ಸ್ವಗ್ರಹದಲ್ಲಿ ಫೆ.27 ರಂದು ನಿಧನರಾಗಿದ್ದು, ಮೃತರಿಗೆ 2 ಗಂಡು, 3 ಹೆಣ್ಣು ಮಕ್ಕಳು ಹಾಗೂ ಅಪಾರ ಬಂದು ಮಿತ್ರರನ್ನು ಅಗಲಿದ್ದಾರೆ.
ಬಂಟ್ವಾಳ ಕ್ಷೇತ್ರದ ಶಾಸಕರಾದ ರಾಜೇಶ್ ನಾಯ್ಕ್, ಪುತ್ತೂರು ಶಾಸಕರಾದ ಸಂಜೀವ ಮಠಂದೂರು, ಬಂಟ್ವಾಳ ಬಿಜೆಪಿ ಮಂಡಲ ಅಧ್ಯಕ್ಷರಾದ ದೇವಪ್ಪ ಪೂಜಾರಿ, ವಿಟ್ಲಪಡ್ನೂರು ಬಿಜೆಪಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾದ ಸನತ್ ಕುಮಾರ್ ರೈ ಹಾಗೂ ಅನಂತಾಡಿ ಗ್ರಾಮದ ಬಿಜೆಪಿ ಕಾರ್ಯಕರ್ತರು, ಸಂಘ ಪರಿವಾರ ಹಾಗೂ ಸಂಘ ಸಂಸ್ಥೆಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಸಂತಾಪ ಸೂಚಿಸಿದರು.