ಶ್ರೀರಾಮ ವಿದ್ಯಾ ಕೇಂದ್ರ ಕಲ್ಲಡ್ಕದ ವಿದ್ಯಾರ್ಥಿನಿಯರು ರಾಷ್ಟ್ರ ಮಟ್ಟದ ಸ್ಪರ್ಧೆ ಗೆ ಆಯ್ಕೆ…

ಬಂಟ್ವಾಳ :ಅ. 22 ರಾಷ್ಟ್ರೋತ್ಥಾನ ವಿದ್ಯಾಕೇಂದ್ರ ಥಣಿಸಂದ್ರ ಬೆಂಗಳೂರು ಇಲ್ಲಿ ನಡೆದ ವಿದ್ಯಾಭಾರತಿ ಕರ್ನಾಟಕ ರಾಜ್ಯ ಮಟ್ಟದ 14 ವರ್ಷ ಒಳಗಿನ ಹುಡುಗಿಯರ ಈಜು ಸ್ಪರ್ಧೆಯಲ್ಲಿಅನನ್ಯ ಎ.ಆರ್. 6 ನೇ ತರಗತಿ ಶ್ರೀ ರಾಮ ಪ್ರಾಥಮಿಕ ಶಾಲೆ ಕಲ್ಲಡ್ಕ ಇವಳು 200 ಮೀ ಬಟರ್ ಫ್ಲೈ ಮತ್ತು 4× 100 ಮೀ. ಫ್ರೀ ಸ್ಟೈಲ್ ರಿಲೇ ಯಲ್ಲಿ 2 ಬೆಳ್ಳಿ ಮತ್ತು 200 ಮೀ. ಬ್ಯಾಕ್ ಸ್ಟ್ರೋಕ್ ಮತ್ತು 200 ಮೀ. ಇಂಡಿವಿಜುವಲ್ ಮೆಡ್ಲೆಯಲ್ಲಿ 2 ಕಂಚಿನ ಪದಕ ಪಡೆದಿರುತ್ತಾಳೆ.
17 ವರ್ಷ ಒಳಗಿನ ಹುಡುಗಿಯರ ಈಜು ಸ್ಪರ್ಧೆಯಲ್ಲಿ ಅನರ್ಘ್ಯ ಎ.ಆರ್. 9 ನೇ ತರಗತಿ ಶ್ರೀ ರಾಮ ಪ್ರೌಢಶಾಲೆ ಕಲ್ಲಡ್ಕ ಇವಳು 200 ಮೀ ಇಂಡಿವಿಜುವಲ್ ಮೆಡ್ಲೆ ,400 ಮೀ. ಇಂಡಿವಿಜುವಲ್ ಮೆಡ್ಲೆ ಮತ್ತು 4×100 ಮೀ. ಮೆಡ್ಲೆ ರಿಲೇಯಲ್ಲಿ 3 ಬೆಳ್ಳಿ ಮತ್ತು 200ಮೀ ಬ್ಯಾಕ್ ಸ್ಟ್ರೋಕ್ ನಲ್ಲಿ ಕಂಚು ಪಡೆದು ರಾಷ್ಟ್ರ ಮಟ್ಟಕ್ಕೆ ಆಯ್ಕೆ ಯಾಗಿರುತ್ತಾರೆ.
ಇವರು ರೇಷ್ಮೆ ಇಲಾಖೆಯ ನಿವೃತ್ತ ಇನ್ ಸ್ಪೆಕ್ಟರ್ ಬಿ‌.ಕೆ.ನಾಯ್ಕ್ ಇವರ ಶಿಷ್ಯೆಯರಾಗಿದ್ದು, ಮಂಗಳೂರಿನ ಅಲೋಶಿಯಸ್ ವಿವನ್ ಈಜು ಕೊಳದ ಮುಖ್ಯ ತರಬೇತುದಾರರಾದ ಲೋಕರಾಜ್ ಮತ್ತು ಸ್ಯಾಂಜುರವರಿಂದ ತರಬೇತಿ ಪಡೆಯುತ್ತಿದ್ದಾರೆ.

whatsapp image 2024 08 22 at 8.09.10 am

Sponsors

Related Articles

Back to top button