ಲಾಕ್ಡೌನ್ – ಭಾರತದಲ್ಲಿ 2 ಕೋಟಿಗೂ ಹೆಚ್ಚು ಮಕ್ಕಳ ಜನನ???…
ಪಿಟಿಐ : ಲಾಕ್ಡೌನ್ ಪರಿಣಾಮ ಈ ವರ್ಷ ಭಾರತದಲ್ಲಿ 2 ಕೋಟಿಗೂ ಹೆಚ್ಚು ಮಕ್ಕಳು ಜನಿಸುವ ನಿರೀಕ್ಷೆ ಇದೆ ಎಂದು ಯುನಿಸೆಫ್ ಹೇಳಿರುವುದಾಗಿ ವರದಿಯಾಗಿದೆ.
ವಿಶ್ವಸಂಸ್ಥೆಯ ಅಂಗಸಂಸ್ಥೆ ಯುನಿಸೆಫ್ ಪ್ರಕಾರ ವಿಶ್ವದಲ್ಲಿ ಒಟ್ಟಾರೆ 11.6 ಕೋಟಿ ಮಕ್ಕಳು ಜನಿಸಲಿದ್ದು, ಇದು ದಾಖಲೆಯ ಜನಸಂಖ್ಯಾ ಸ್ಪೋಟವಾಗಲಿದೆ. ಈ ಮಕ್ಕಳು ಮಾರ್ಚ್-ಡಿಸೆಂಬರ್ ನಡುವೆ ಜನಿಸಲಿದ್ದಾರೆ. ಭಾರತದ ನಂತರದ ಸ್ಥಾನದಲ್ಲಿರುವ ಚೀನಾದಲ್ಲಿ 1.35 ಕೋಟಿ ಮಕ್ಕಳು ಜನ್ಮ ತಾಳಲಿದ್ದಾರೆ. 64 ಲಕ್ಷ ನೈಜೀರಿಯಾ, 50 ಲಕ್ಷ ಪಾಕಿಸ್ಥಾನ, 40 ಲಕ್ಷ ಇಂಡೋನೇಷ್ಯಾ ದೇಶಗಳು ನಂತರದ ಸ್ಥಾನದಲ್ಲಿರಲಿವೆ ಎಂದಿದೆ.