ಸೆ.24 ರಂದು ಅಜ್ಜಾವರದಲ್ಲಿ ಬೃಹತ್ ಸಾರ್ವಜನಿಕ ರಕ್ತದಾನ ಶಿಬಿರ…
ಸುಳ್ಯ : ಎಸ್ ಕೆ ಎಸ್ ಎಸ್ ಎಫ್ ವಿಖಾಯ ರಕ್ತದಾನಿ ಬಳಗ ದ.ಕ.ಜಿಲ್ಲೆ ಇದರ ನಿರ್ದೇಶನ ಪ್ರಕಾರ ಎಸ್ ಕೆ ಎಸ್ ಎಸ್ ಎಫ್ ಅಜ್ಜಾವರ ಕ್ಲಸ್ಟರ್ ಹಾಗೂ ಅಜ್ಜಾವರ ಕ್ಲಸ್ಟರ್ ವಿಖಾಯ ವತಿಯಿಂದ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಮಂಗಳೂರು ಇದರ ಸಹಭಾಗಿತ್ವದಲ್ಲಿ ಬೃಹತ್ ಸಾರ್ವಜನಿಕ ರಕ್ತದಾನ ಸೆ.24 ರಂದು ಅಜ್ವಾವರ ನೂರುಲ್ ಹುದಾ ಮದರಸ ಸಭಾಂಗಣದಲ್ಲಿ ನಡೆಯಲಿದೆ.
ಬೆಳಿಗ್ಗೆ 9ಗಂಟೆಗೆ ಕಾರ್ಯಕ್ರಮವನ್ನು ಅಜ್ವಾವರ ಎಂ.ಜೆ.ಎಮ್.ಖತೀಬರಾದ ಬಹು ಜಾಫರ್ ಸಾಧಿಕ್ ದಾರಿಮಿ ಉದ್ಘಾಟಿಸಲಿದ್ದಾರೆ. ದ.ಕ.ಜಿಲ್ಲಾ ಎಸ್ ಕೆ ಎಸ್ ಎಸ್ ಎಫ್ ಅಧ್ಯಕ್ಷ ಬಹು ಸಯ್ಯದ್ ಅಮೀರ್ ತಂಙಳ್ ದುವಾ ನೆರವೇರಿಸಲಿದ್ದಾರೆ.ಅಜ್ಜಾವರ ಎಸ್ ಕೆ ಎಸ್ ಎಸ್ ಎಫ್ ಕ್ಲಸ್ಟರ್ ಅಧ್ಯಕ್ಷ ರಾದ ಬಹು ಶಾಫಿ ಮುಕ್ರಿ ಅಧ್ಯಕ್ಷತೆ ವಹಿಸಲಿದ್ದಾರೆ.ಸಮಾರಂಭದಲ್ಲಿ ದ.ಕ.ಜಿಲ್ಲಾ ಎಸ್ ಕೆ ಎಸ್ ಎಸ್ ಎಫ್ ವಿಖಾಯ ಚೇರ್ಮನ್ ಬಹು ಸಯ್ಯದ್ ಇಸ್ಮಾಯಿಲ್ ತಂಙಳ್,ಕೆ.ವಿ.ಜಿ ಅಯುರ್ವೇದ ಮೆಡಿಕಲ್ ಕಾಲೇಜು ಪ್ರೊಫೆಸರ್ ಡಾ.ಅವಿನಾಶ್,ರಕ್ತದಾನಿ ಪ್ರಶಸ್ತಿ ಪುರಸ್ಕೃತ ಪಿ.ಬಿ.ಸುಧಾಕರ ರೈ,ಎಸ್ ಕೆ ಎಸ್ ಎಸ್ ಎಫ್ ಟ್ರೆಂಡ್ ಕೇಂದ್ರ ಸಮಿತಿ ಸದಸ್ಯ ಇಕ್ಬಾಲ್ ಬಾಳಿಲ ಪ್ರಾಸ್ತಾವಿಕ ಭಾಷಣ ಮಾಡಲಿದ್ದಾರೆ.ಮುಖ್ಯ ಆತಿಥಿಗಳಾಗಿ ಅಜ್ಜಾವರ ಎಮ್.ಜೆ.ಎಮ್.ಅಧ್ಯಕ್ಷ ರಾದ ಅಬ್ದುಲ್ಲಾ ಕುಂಞ ಪಳ್ಳಿಕೆರೆ,ಎಸ್ ಕೆ ಎಸ್ ಎಸ್ ಎಫ್ ಸುಳ್ಯ ವಲಯ ಅಧ್ಯಕ್ಷ ರಾದ ಜಮಾಲ್ ಬೆಳ್ಳಾರೆ,ದ.ಕ.ಜಿಲ್ಲಾ ಎಸ್ ಕೆ ಎಸ್ ಎಸ್ ಎಫ್ ವಿಖಾಯ ರಕ್ತದಾನಿ ಬಳಗ ಉಸ್ತುವಾರಿ ತಾಜುದ್ದೀನ್ ಟರ್ಲಿ,ಸುಳ್ಯ ವಲಯ ರಕ್ತದಾನಿ ಬಳಗದ ಉಸ್ತುವಾರಿ ಶರೀಫ್ ಅಜ್ಜಾವರ,ಸುಳ್ಯ ವಲಯ ವಿಖಾಯ ಜನರಲ್ ಕನ್ವೀನರ್ ಕಲಂದರ್ ಎಲಿಮಲೆ,ರಫೀಕ್ ಮುಸ್ಲಿಯಾರ್,ಸೇರಿದಂತೆ ಮುಂತಾದವರು ಭಾಗವಹಿಸಲಿದ್ದಾರೆ.