ಸಂಘಟಿತ ಪ್ರಯತ್ನದಿಂದ ಶ್ರೀಮಹಾ ಪವಮಾನ ಯಾಗ ಯಶಸ್ವಿ: ರಾಮದಾಸ್ ಬಂಟ್ವಾಳ ಮೆಚ್ಚುಗೆ…

ವರದಿ:ಜಯಾನಂದ ಪೆರಾಜೆ
ಬಂಟ್ವಾಳ:ಹಿಂದೂ ಸಮಾಜವನ್ನು ಸಂಘಟಿಸುವ ಮೂಲ ಉದ್ದೇಶದಿಂದ ಮಹಾಪವಮಾನ ಯಾಗ ಯಶಸ್ವಿಯಾಗಿದೆ ಎಂದು ಯಾಗ ಸಮಿತಿ ಪ್ರಧಾನ ಕಾರ್ಯದರ್ಶಿ ರಾಮದಾಸ್ ಬಂಟ್ವಾಳ ಅಭಿಪ್ರಾಯ ವ್ಯಕ್ತಪಡಿಸಿದರು.
ಅವರು ಭಾನುವಾರ ಪಲ್ಲಮಜಲು ಶ್ರೀರಾಮ ಭಕ್ತಾಂಜನೇಯ ಭಜನಾ ಮಂದಿರದ ನೂತನ ಸಭಾಂಗಣದಲ್ಲಿ ನಡೆದ ಮಹಾಪವಮಾನ ಯಾಗದ ಅವಲೋಕನ ಸಭೆಯಲ್ಲಿ ಮಾತನಾಡಿದರು.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಮಾರ್ಗದರ್ಶನದಲ್ಲಿ ಊರಪರವೂರ ಭಕ್ತರ, ಮಾತೆಯರ ಸಕ್ರಿಯ ಭಾಗವಹಿಸುವಿಕೆ ಯಾಗದ ಯಶಸ್ಸಿಗೆ ಕಾರಣವಾಯಿತು. ಸುಮಾರು ೫ ಸಾವಿರಕ್ಕೂ ಅಧಿಕ ಮಂದಿ ಯಾಗದಲ್ಲಿ ಸಕ್ರೀಯವಾಗಿ ಭಾಗವಹಿಸಿದ್ದರು. ಮೇ ೧೬ರಿಂದ ೧೮ರ ವರೆಗೆ ಪಲ್ಲಮಜಲು ಶ್ರೀರಾಮ ಭಕ್ತಾಂಜನೇಯ ಭಜನಾ ಮಂದಿರದಲ್ಲಿ ೧೦೮ ಪವಮಾನ ಪಾರಾಯಣ ಸಹಿತ ಶ್ರೀ ಮಹಾಪವಮಾನ ಯಾಗ, ೧೦೮ ಲಕ್ಷ ಶ್ರೀರಾಮ ನಾಮ ತಾರಕ ಜಪಯಜ್ಞ, ಆಂಜನೇಯ ದೇವರಿಗೆ ಸಹಸ್ರ ಕದಳಿ ಯಾಗ, ವಿಷ್ಣು ಸಹಸ್ರನಾಮ ಪಾರಾಯಣ ನೆರವೇರಿತ್ತು.
ಮಂದಿರ ಸಮಿತಿ ಗೌರವಾಧ್ಯಕ್ಷ ಸೇಸಪ್ಪ ದಾಸಯ್ಯ, ಆರೆಸ್ಸೆಸ್ಸ್ ಮುಖಂಡ ವಿನೋದ್ ಕೊಡ್ಮಾಣ್, ಪ್ರಮುಖರಾದ ಗಣೇಶ್ ದಾಸ್ ಕಾಮೆರೆಕೋಡಿ, ಶೇಖರ ಶೆಟ್ಟಿ ಪೊಟ್ಟುಗುಡ್ಡೆ, ತಾರನಾಥ ಕೊಟ್ಟಾರಿ ತೇವು, ಉಮೇಶ್ ಗಾಂದೋಡಿ, ಹರಿಪ್ರಸಾದ್ ಭಂಡಾರಿಬೆಟ್ಟು, ಸಂದೇಶ್ ದರಿಬಾಗಿಲು, ಸತೀಶ್ ಪಲ್ಲಮಜಲು, ದಿವಾಕರ ಶೆಟ್ಟಿ ಕುಪ್ಪಿಲ, ನಿತೇಶ್ ಪಲ್ಲಮಜಲು, ಪ್ರಶಾಂತ್ ಬೆದ್ರಗುಡ್ಡೆ, ಮನೋಜ್ ಪಲ್ಲಮಜಲು, ಚೈತನ್ಯ ಗಣೇಶ್ ದಾಸ್, ಜ್ಯೋತಿ ಮಧು ಆಚಾರ್ಯ, ದೀಕ್ಷಿತಾ, ನಿವೇದಿತಾ, ಯಶಸ್ವಿನಿ ಉಮೇಶ್ ಕುಲಾಲ್, ಹೊನ್ನಮ್ಮ ಆನಂದ ಗೌಡ, ಶಶಿಕಲಾ ಸದಾಶಿವ, ರಮಿತಾ ಸುರೇಶ್ ದಾಸ್ ಮತ್ತಿತರರು ಉಪಸ್ಥಿತರಿದ್ದರು.

Sponsors

Related Articles

Back to top button