ರಂಗಮನೆ ಸುಳ್ಯ – ಯಕ್ಷಗಾನ ನಾಟ್ಯ ಮತ್ತು ಹಿಮ್ಮೇಳ ತರಗತಿಗಳ ಉದ್ಘಾಟನಾ ಸಮಾರಂಭ…

ಯಕ್ಷಗಾನ ಸರ್ವಾಂಗೀಣ ಕಲೆ- ಯಕ್ಷಗಾನ ಹಿಮ್ಮೇಳ ಗುರು ಕುಮಾರ ಸುಬ್ರಹ್ಮಣ್ಯ...

ಸುಳ್ಯ: ಯಕ್ಷಗಾನದ ಕಲಿಕೆ ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿಯೂ ಬಹಳ ಉಪಯುಕ್ತ. ಹಿಮ್ಮೇಳ, ಮಾತುಗಾರಿಕೆ,ನಾಟ್ಯ,ವೇಷಭೂಷಣ ಸೇರಿದಂತೆ ಯಕ್ಷಗಾನ ಒಂದು ಸರ್ವಾಂಗೀಣ ಕಲೆ. ಕಳೆದ 35 ವರ್ಷಗಳಿಂದ ಹಿಮ್ಮೇಳ ವಾದಕನಾಗಿ, ಗುರುವಾಗಿ ದುಡಿಯುತ್ತಿದ್ದೇನೆ. ಕಲಿಕೆಗೆ ಪೂರಕವಾದ ವಾತಾವರಣ ರಂಗಮನೆಯಲ್ಲಿದೆ’ ಎಂದು ಖ್ಯಾತ ಹಿಮ್ಮೇಳ ಗುರುಗಳಾದ ವಳಕುಂಜ ಕುಮಾರ ಸುಬ್ರಹ್ಮಣ್ಯ ಅವರು ಹೇಳಿದರು.
ಅವರು ರಂಗಮನೆ ಸಾಂಸ್ಕೃತಿಕ ಕಲಾಕೇಂದ್ರದಲ್ಲಿ ಸುಜನಾ ಯಕ್ಷ ಶಿಕ್ಷಣ ಕೇಂದ್ರದ ಆಶ್ರಯದಲ್ಲಿ ನಡೆಯುವ 2023-24 ನೇ ಸಾಲಿನ ಯಕ್ಷಗಾನ ನಾಟ್ಯ ಮತ್ತು ಹಿಮ್ಮೇಳ ತರಗತಿಗಳ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ಹಿರಿಯ ಯಕ್ಷರಂಗ ಕಲಾವಿದ ಸುಜನಾ ಸುಳ್ಯರವರು ದೀಪಬೆಳಗಿಸಿ ತರಗತಿಗೆ ಚಾಲನೆ ನೀಡಿದರು.
ಯಕ್ಷಗಾನನಾಟ್ಯಗುರುಗಳಾದ, ಕಲಾವಿದೆ ಶ್ರೀಮತಿ ಸರೋಜಿನಿ ಬನಾರಿ, ಉದ್ಯಮಿ ಬಾಲಕೃಷ್ಣ ಬಲ್ಲಾಳ್ ಅತಿಥಿಗಳಾಗಿ ಭಾಗವಹಿಸಿದರು.
ರಂಗಮನೆಯ ಅಧ್ಯಕ್ಷರಾದ ಡಾ|| ಜೀವನ್ ರಾಂ ಸುಳ್ಯ ಪ್ರಾಸ್ತಾವಿಕ ನುಡಿಗಳೊಂದಿಗೆ ಸ್ವಾಗತಿಸಿದರು.
ರಂಗಮನೆಯ ಸದಸ್ಯರಾದ ರವೀಶ್ ಪಡ್ಡಂಬೈಲು ವಂದಿಸಿದರು.

ಪ್ರತಿ ಭಾನುವಾರ ಯಕ್ಷ ಶಿಕ್ಷಣ..

ಯಕ್ಷಗಾನ ನಾಟ್ಯ ತರಗತಿಯು ಪೂ.9.30 ರಿಂದ 11.30 ವರೆಗೆ ಹಾಗೂ ಚೆಂಡೆ – ಮದ್ದಳೆ ತರಗತಿಯು ಪೂ.9.00 ರಿಂದ ಮಧ್ಯಾಹ್ನ 1.30 ರ ವರೆಗೆ ನಡೆಯುತ್ತದೆ. ಒಂದು ಗಂಟೆ ಅವಧಿಯ ಹಿಮ್ಮೇಳ ತರಗತಿಯನ್ನು ಕಲಿಯುವವರು ತಮ್ಮ ಅನುಕೂಲದ ಸಮಯವನ್ನು ಹೊಂದಿಸಿಕೊಳ್ಳಲು ಅವಕಾಶವಿದೆ.
ಆಸಕ್ತರು ಗುರುಗಳಾದ ಶ್ರೀಮತಿ ಸರೋಜಿನಿ ಬನಾರಿ (9441189710 )
ಮತ್ತು ಶ್ರೀ ಕುಮಾರ ಸುಬ್ರಹ್ಮಣ್ಯ ( 9449915777 ) ಇವರನ್ನು ಸಂಪರ್ಕಿಸಬಹುದು.

whatsapp image 2023 07 10 at 10.56.25 am
Sponsors

Related Articles

Back to top button