ಯೆಯ್ಯಾಡಿಯ ಗುಂಡಲಿಕೆ ಪ್ರದೇಶ ಸೀಲ್ ಡೌನ್…

ಮಂಗಳೂರು: ಯೆಯ್ಯಾಡಿಯ ಮಹಿಳೆಯಲ್ಲಿ ಸೋಮವಾರ ಕೊರೊನಾ ಸೋಂಕು ದೃಢವಾದ ಹಿನ್ನಲೆಯಲ್ಲಿ ಇವರು ವಾಸವಿರುವ ಕದ್ರಿ ಗ್ರಾಮದ ಯೆಯ್ಯಾಡಿಯ ಗುಂಡಲಿಕೆ ಪ್ರದೇಶವನ್ನು ಸೀಲ್ ಡೌನ್ ಮಾಡಿ ಜಿಲ್ಲಾಡಳಿತ ಆದೇಶ ಮಾಡಿದೆ.
ಸೋಂಕಿತರ ವಾಸವಾಗಿದ್ದ ಸುತ್ತಮುತ್ತ ನಿಯಂತ್ರಿತ ವಲಯವಾಗಿ ಘೋಷಿಸಲಾಗಿದ್ದು, ಈ ವ್ಯಾಪ್ತಿಯಲ್ಲಿ ಸುಮಾರು 14 ಕ್ಕೂ ಅಧಿಕ ಮನೆಗಳಿದ್ದು 48 ಜನ ವಾಸವಿದ್ದಾರೆ. ಇವರೆಲ್ಲರನ್ನು ಕ್ವಾರಂಟೈನ್ ಮಾಡಲಾಗಿದೆ. ಸೀಲ್ ಡೌನ್ ವ್ಯಾಪ್ತಿಯಲ್ಲಿ ಯಾವುದೇ ಅಂಗಡಿ ಮುಂಗಟ್ಟು ಕಚೇರಿಗಳಿಲ್ಲ.
ಪೂರ್ವಕ್ಕೆ ಯಮ್ಟಿ ಹೌಸ್ , ಪಶ್ಚಿಮಕ್ಕೆ ಯಮುನಾ ಹೌಸ್, ಉತ್ತರಕ್ಕೆ ಗುಡ್ಡವಿದ್ದು, ಹಾಗೂ ದಕ್ಷಿಣಕ್ಕೆ ಲಲಿತಾಸ್ ಹೌಸ್ ತನಕದ ಪ್ರದೇಶವನ್ನು ಸೀಲ್ ಡೌಲ್ ಮಾಡಲಾಗಿದೆ

Sponsors

Related Articles

Back to top button