ಬಂಟರ ಸಂಘ ಬಂಟವಾಳ:ವಿಜೃಂಭಿಸಿದ ವಿಂಶತಿ ಸಂಭ್ರಮ, ಸಾಧಕರ ಸನ್ಮಾನ, ವೈಭವದ ಯುವೋಚ್ಚಯ…

ಜಯಾನಂದ ಪೆರಾಜೆ ಬಂಟ್ವಾಳ
ಬಂಟ್ವಾಳ: ಬಂಟವಾಳದ ಬಂಟರ ಭವನದಲ್ಲಿ ನಡೆದ ವಿಂಶತಿ ಸಂಭ್ರಮ ಅದ್ದೂರಿಯಿಂದ ಸಂಪನ್ನಗೊಂಡಿತು. ಸಂಘದ ಅಧ್ಯಕ್ಷ ಚಂದ್ರಹಾಸ ಡಿ.ಶೆಟ್ಟಿ ರಂಗೋಲಿ ನೇತೃತ್ವದಲ್ಲಿ ಎರಡು ದಿನಗಳ ಸಮಾರಂಭ ಯಶಸ್ವಿಯಾಗಿ ಎಲ್ಲಾ ಸಮಾಜ ಬಾಂಧವರ ಮೆಚ್ಚುಗೆಗೆ ಪಾತ್ರವಾಯಿತು.
ಶ್ರೀದೇವಿ ವಿದ್ಯಾಸಂಸ್ಥೆಯ ಅಧ್ಯಕ್ಷರು ಡಾ.ಎ.ಸದಾನಂದಶೆಟ್ಟಿ,ಎಂ.ಆರ್.ಜಿ ಗ್ರೂಪ್ ಅಧ್ಯಕ್ಷರು ಡಾ.ಪ್ರಕಾಶ ಶೆಟ್ಟಿ ಬಂಜಾರ, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರು ಐಕಳ ಹರೀಶ ಶೆಟ್ಟಿ ವಿಂಶತಿ ಗೌರವ ಸ್ವೀಕರಿಸಿ ಕೃತಜ್ಞತಾ ಭಾವ ವ್ಯಕ್ತಪಡಿಸಿದರು. ಸಮಾಜಸೇವೆಯಲ್ಲಿ ಅಗ್ರಗಣ್ಯ ರಾದ 20 ಮಂದಿ ಸಾಧಕರನ್ನು ಗುರುತಿಸಿ ವಿಂಶತಿ ಸನ್ಮಾನ ಮಾಡಲಾಯಿತು. ಮೂರು ವಿಭಾಗಗಳಲ್ಲಿ ಶೈಕ್ಷಣಿಕ ಮಾರ್ಗದರ್ಶನ ಕಾರ್ಯಕ್ರಮದಲ್ಲಿ 700ಕ್ಕೂ ಮಿಕ್ಕಿ ವಿದ್ಯಾರ್ಥಿಗಳು ಭಾಗವಹಿಸಿದ್ದರು.ಆಳ್ವಾಸ್ ವಿದ್ಯಾಸಂಸ್ಥೆಯ ಡಾ.ಮೋಹನ ಆಳ್ವ,ಸಹ್ಯಾದ್ರಿ ವಿದ್ಯಾ ಸಂಸ್ಥೆಯ ಡಾ.ಮಂಜುನಾಥ ಭಂಡಾರಿ,ಅಡ್ಯಾರ್ ಗಾರ್ಡನ್ ಮಾಲಕ ಕಿಶನ್ ಶೆಟ್ಟಿ ಮಾಹಿತಿ ನೀಡಿದರು.ಬಂಟರ ಸಂಘದ ಕಾರ್ಯದರ್ಶಿ ಜಗನ್ನಾಥ ಚೌಟ ಬದಿಗುಡ್ಡೆ ಅಧ್ಯಕ್ಷತೆ ವಹಿಸಿದ್ದರು.
ಬಂಟ್ವಾಳ ವಲಯ ಮತ್ತು ಜಿಲ್ಲಾ ಮಟ್ಟದ ನೃತ್ಯ ಸ್ಪರ್ಧೆಪ್ರೇಕ್ಷಕರ ಮನಗೆದ್ದಿತು.
ಮಾಜಿ ಅಧ್ಯಕ್ಷ ಲ|ಲೋಕನಾಥ ಶೆಟ್ಟಿ ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭವನ್ನು ಮುಂಬೈ ಬಂಟರ ಸಂಘದ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿ ಉದ್ಘಾಟಿಸಿ ಶ್ಲಾಘಿಸಿದರು. ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್,ಎಂ.ಸಿ.ಆರ್.ಶೆಟ್ಟಿ ಬೆಂಗಳೂರು ಮೊದಲಾದ ಗಣ್ಯ ಅತಿಥಿಗಳು ಅಭಿನಂದಿಸಿ ಮಾತನಾಡಿದರು. ಗಾನ,ನೃತ್ಯ, ಆಹಾರ ಮೇಳಗಳು ಯುವ ಬಂಟರ ಪಾಲ್ಗೊಳ್ಳುವಿಕೆಯಲ್ಲಿ ಯುವೋಚ್ಚಯ ವೈಭವದಿಂದ ನೆರವೇರಿತು.
ಒಟ್ಟು ಸಮಾವೇಶ ಸಂಯೋಜಕರಾದ ಚಂದ್ರಹಾಸ ಡಿ.ಶೆಟ್ಟಿ, ಜಗನ್ನಾಥ ಚೌಟ, ಡಾ.ಪ್ರಶಾಂತ ಮಾರ್ಲ,ಲೋಕೇಶ್ ಶೆಟ್ಟಿ ಕುಳ,ರಂಜನ್ ಕುಮಾರ್ ಶೆಟ್ಟಿ ಅರಳ,ಪ್ರತಿಭಾ ಎ.ರೈ ಪಾಣೆಮಂಗಳೂರು, ರಮಾ ಎಸ್.ಭಂಡಾರಿ, ನಿಶಾನ್ ಆಳ್ವ ಬಿಸಿರೋಡ್,ಬಾಲಕೃಷ್ಣ ಆಳ್ವ ಕೊಡಾಜೆ ಯಶಸ್ವಿನ ರೂವಾರಿಗಳಾಗಿ ಮೆಚ್ಚುಗೆಗೆ ಪಾತ್ರರಾದರು.