ಡಿ.7 ರಂದು ಇ-ಗವರ್ನೆನ್ಸ್ ನೆಟ್ವರ್ಕ್ ಎಂಡ್ ಸೊಲ್ಯುಶನ್ ಫಾರ್ ಕರ್ನಾಟಕ ಕಾರ್ಯಾಗಾರ….
ಪುತ್ತೂರು: ಪುತ್ತೂರಿನ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜು ವಿವೇಕಾನಂದ ಕಾಲೇಜ್ ಆಫ್ ಆಟ್ರ್ಸ್, ಸೈನ್ಸ್ ಎಂಡ್ ಕಾಮರ್ಸ್, ವಿವೇಕಾನಂದ ಸೆಂಟರ್ ಫಾರ್ ರೀಸರ್ಚ್ ಸ್ಟಡೀಸ್ ಹಾಗೂ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ ಬೆಂಗಳೂರು ಇದರ ಸಂಯುಕ್ತ ಆಶ್ರಯದಲ್ಲಿ ‘ಇ-ಗವರ್ನೆನ್ಸ್ ನೆಟ್ವರ್ಕ್ ಎಂಡ್ ಸೊಲ್ಯುಶನ್ ಫಾರ್ ಕರ್ನಾಟಕ’ ಎನ್ನುವ ವಿಷಯದ ಬಗ್ಗೆ ಒಂದು ದಿನದ ಕಾರ್ಯಾಗಾರವು ಡಿ. 7 ರಂದು ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಶ್ರೀರಾಮ ಸಭಾ ಭವನದಲ್ಲಿ ನಡೆಯಲಿದೆ.
ಅಂದು ಬೆಳಿಗ್ಗೆ 9.30ಕ್ಕೆ ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ಕರ್ನಾಟಕ ಸರ್ಕಾರದ ಮಾಹಿತಿ ತಂತ್ರಜ್ಞಾನ ಸಲಹೆಗಾರ ಬೇಲೂರು ಸುದರ್ಶನ, ಭಾರತ ಸರ್ಕಾರದ ವಿಶ್ರಾಂತ ಕಾರ್ಯದರ್ಶಿ ಹಾಗೂ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್‍ನ ಸ್ವತಂತ್ರ ನಿರ್ದೇಶಕ ವಿ.ವಿ.ಭಟ್ ಮತ್ತು ಭಾರತ್ ಸಂಚಾರ್ ನಿಗಮ್ ಲಿಮಿಟೆಡ್‍ನ ಪ್ರಧಾನ ವ್ಯವಸ್ಥಾಪಕ ಶ್ರೀನಿವಾಸುಲು ರೆಡ್ಡಿ ಮುಖ್ಯ ಅತಿಥಿಗಳಾಗಿ ಭಾಗವಹಿಸುತ್ತಾರೆ.
ಭಾರತ್ ಸಂಚಾರ್ ನಿಗಮ್ ಲಿಮಿಟೆಡ್‍ನ ಪ್ರಧಾನ ವ್ಯವಸ್ಥಾಪಕ ಶ್ರೀನಿವಾಸುಲು ರೆಡ್ಡಿ, ಕರ್ನಾಟಕ ವೈಡ್ ನೆಟ್ವರ್ಕ್ ಮತ್ತು ಇ-ಗವರ್ನೆನ್ಸ್‍ನ ಯೋಜನಾ ನಿರ್ದೇಶಕ ಕೆ.ರಮೇಶ್, ಎನ್‍ಐಸಿ ಬೆಂಗಳೂರಿನ ತಾಂತ್ರಿಕ ನಿರ್ದೇಶಕ ಪಿ.ಮೋಹನ್, ಭಾರತ್ ಸಂಚಾರ್ ನಿಗಮ್ ಲಿಮಿಟೆಡ್‍ನ ಅಧಿಕಾರಿಗಳಾದ ಬಾಲಸುಬ್ರಮಣ್ಯ.ಕೆ, ಕೃಷ್ಣಕುಮಾರ್ ಪಡಾರ್ ಮತ್ತು ಜಯರಾಮ್.ಕೆ.ಎಲ್ ಸಂಪನ್ಮೂಲ ವ್ಯಕ್ತಿಗಳಾಗಿ ಕಾರ್ಯಾಗಾರವನ್ನು ನಡೆಸಲಿದ್ದಾರೆ.
ಅಪರಾಹ್ನ ಕ್ರಿಯಾಯೋಜನೆಯನ್ನು ಅನುಷ್ಟಾನಗೊಳಿಸುವ ಬಗ್ಗೆ ಚರ್ಚೆ ನಡೆಯಲಿದ್ದು ಕರ್ನಾಟಕ ಸರ್ಕಾರದ ಮಾಹಿತಿ ತಂತ್ರಜ್ಞಾನ ಸಲಹೆಗಾರ ಬೇಲೂರು ಸುದರ್ಶನ ಇದರ ಅಧ್ಯಕ್ಷತೆಯನ್ನು ವಹಿಸುತ್ತಾರೆ ಎಂದು ಕಾಲೇಜಿನ ಪ್ರಾಂಶುಪಾಲ ಡಾ.ಎಂ.ಎಸ್.ಗೋವಿಂದೇಗೌಡ ಅವರು ತಿಳಿಸಿದ್ದಾರೆ.