ಪತ್ರಕರ್ತ ಮನೋಹರ ಪ್ರಸಾದ್ ನಿಧನಕ್ಕೆ ಟಿ ಎಂ ಶಾಹಿದ್ ತೆಕ್ಕಿಲ್ ಸಂತಾಪ…

ದುಬೈ: ಹಿರಿಯ ಪತ್ರಕರ್ತ, ಉದಯವಾಣಿ ಪತ್ರಿಕೆಯ ಮುಖ್ಯ ವರದಿಗಾರರಾಗಿದ್ದ ಮನೋಹರ ಪ್ರಸಾದ್ ಅವರ ನಿಧನಕ್ಕೆ ಕೆಪಿಸಿಸಿ ಮುಖ್ಯ ವಕ್ತಾರ ಹಾಗು ತೆಕ್ಕಿಲ್ ಪ್ರತಿಷ್ಠಾನದ ಸ್ಥಾಪಕಧ್ಯಕ್ಷ ಟಿ ಎಂ ಶಾಹಿದ್ ತೆಕ್ಕಿಲ್ ಸಂತಾಪ ವ್ಯಕ್ತಪಡಿಸಿದ್ದಾರೆ.
1990 ರ ದಶಕದಲ್ಲಿ ಎನ್ ಎಸ್ ಯು ಐ ಜಿಲ್ಲಾ, ರಾಜ್ಯ ಮಟ್ಟದ ನಾಯಕನಾಗಿದ್ದಾಗ, ಸರ್ವ ಕಾಲೇಜು ವಿದ್ಯಾರ್ಥಿ ಸಂಘದ ಉಪಾಧ್ಯಕ್ಷನಾಗಿ ವಿದ್ಯಾರ್ಥಿಗಳ ಪರವಾಗಿ ಕೆಲಸ, ಹೋರಾಟ ಧರಣಿ ಮಾಡಿದ ಸಂದರ್ಭದಲ್ಲಿ ಉದಯವಾಣಿ ಪತ್ರಿಕೆಯಲ್ಲಿ ವರದಿ ಬರುವುದೆಂದರೆ ದೊಡ್ಡ ಸಾಧನೆ ಆಗಿತ್ತು. ರಾಜಕೀಯ ಹಾಗು ಇತರ ಎಲ್ಲಾ ಕ್ಷೇತ್ರದ ಬೆಳವಣಿಗೆಗೆ ತಮಗೆ ಸಹಕಾರ ನೀಡಿದ ಮನೋಹರ ಪ್ರಸಾದ್ ಅವರ ನಿಧನ ಕಾಸರಗೋಡು ಮತ್ತು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಪತ್ರಿಕಾ ರಂಗಕ್ಕೆ ಹಾಗೂ ವೈಯುಕ್ತಿಕವಾಗಿ ತನಗೆ ತುಂಬಲಾರದ ನಷ್ಟ ಎಂದು ದುಬೈ ಪ್ರವಾಸದಲ್ಲಿರುವ ಟಿ ಎಂ ಶಾಹಿದ್ ತೆಕ್ಕಿಲ್ ತಮ್ಮ ಸಂತಾಪ ವ್ಯಕ್ತಪಡಿಸಿದ್ದಾರೆ.
2023 ಅಕ್ಟೋಬರ್ 3 ನೇ ತಾರೀಕಿನಂದು ಕಾಸರಗೋಡಿನ ಬದಿಯಡ್ಕದಲ್ಲಿ ನಡೆದ ಕನ್ನಡ ಪತ್ರಕರ್ತರ ಸಂಘದ ಹರ್ಷೋಲ್ಲಾಸ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಂದರ್ಭದಲ್ಲಿ ಅವರನ್ನು ಸನ್ಮಾನಿಸುವ ಕಾರ್ಯಕ್ರಮದಲ್ಲಿ ಅವರು ಸನ್ಮಾನ ಸ್ವೀಕರಿಸಿ ಮಾತನಾಡಿದ ಸಂದರ್ಭದಲ್ಲಿ ಗ್ರಾಮೀಣ ಮಟ್ಟದಿಂದ ಬಂದು ಈ ಮಟ್ಟಕ್ಕೆ ಬೆಳೆದದಕ್ಕೆ ತಮ್ಮನ್ನ ಮುಕ್ತ ಕಂಠದಿಂದ ಪ್ರಶಂಸಿಸಿದ್ದರು. 1999 ರಲ್ಲಿ ಸೋನಿಯಾ ಗಾಂಧಿಯವರನ್ನು ಮಂಗಳೂರಿನ ಮಂಗಳ ಸ್ಟೇಡಿಯಂನಲ್ಲಿ ಘೋಷಣೆ ಮೂಲಕ ಸ್ವಾಗತಿಸಿದ ತನ್ನ ಘೋಷಣೆಯನ್ನು ಮತ್ತು ಬಾವ ಚಿತ್ರವನ್ನು ಉದಯವಾಣಿಯ ಮುಖ ಪುಟದಲ್ಲಿ ಪ್ರಸಾರ ಮಾಡಿದ್ದನ್ನ ಹಾಗೂ ತಮ್ಮ ಭಾಷಣದಲ್ಲಿ ಸ್ಮರಿಸಿದ್ದನ್ನ ಟಿ ಎಂ ಶಾಹಿದ್ ನೆನಪಿಸಿಕೊಂಡಿದ್ದಾರೆ.

whatsapp image 2024 03 01 at 12.53.59 pm

whatsapp image 2024 03 01 at 12.53.37 pm

Sponsors

Related Articles

Back to top button