ಕುಕ್ಕುಜಡ್ಕ – ಆರೋಗ್ಯ ಪ್ಲಸ್ ಶಾರದಾ ಸ್ಮಾರ್ಟ್ ಕ್ಲಿನಿಕ್ ಉದ್ಘಾಟನೆ…
ಸುಳ್ಯ: ಪಂಜದ ಗ್ರಾ.ಪಂ. ಕಟ್ಟಡ ದೀನ್ ದಯಾಳ್ ಕಾಂಪ್ಲೆಕ್ಸ್‌ನಲ್ಲಿರುವ ಆರೋಗ್ಯ ಪ್ಲಸ್ ಸ್ಮಾರ್ಟ್ ಕ್ಲಿನಿಕ್ ನ ನೂತನ ಶಾಖೆ ಆರೋಗ್ಯ ಪ್ಲಸ್ ಶಾರದಾ ಸ್ಮಾರ್ಟ್ ಕ್ಲಿನಿಕ್ ಕುಕ್ಕುಜಡ್ಕದ ಹೈಸ್ಕೂಲ್ ರಸ್ತೆ ಬಳಿಯ ಕಟ್ಟಡದಲ್ಲಿ ಆ. 23ರಂದು ಶುಭಾರಂಭಗೊಂಡಿತು.
ಸಚಿವ ಎಸ್. ಅಂಗಾರ ಕ್ಲಿನಿಕ್ ನ್ನು ಉದ್ಭಾ.ಟಿಸಿದರು. ಅಮರ ಮುಡ್ನೂರು ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ಪದ್ಮಪ್ರಿಯಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪ್ರಗತಿಪರ ಕೃಷಿಕರಾದ ಡಾ. ಗೋಪಾಲಕೃಷ್ಣ ಪೈಲೂರರವರ ಪುತ್ರ ಡಾ. ಸುಬ್ರಹ್ಮಣ್ಯ,
ತುಮಕೂರು ಸಿದ್ಧಾ ರ್ಥ ವಿಶ್ವವಿದ್ಯಾನಿಲಯದ ಉಪಕುಲಪತಿ ಡಾ. ಬಾಲಕೃಷ್ಣ ಪಿ. ಶೆಟ್ಟಿ, ಕೆ.ಎಸ್. ಹೆಗ್ಡೆ ಆಸ್ಪತ್ರೆಯ ಪಿ.ಆರ್.ಒ. ಹೇಮನಾಥ್ ಶೆಟ್ಟಿ, ತಾಲೂಕು ಆರೋಗ್ಯಾಧಿಕಾರಿ ಡಾ. ನಂದಕುಮಾರ್ ಬಾಳಿಕಳ, ನ್ಯಾಯವಾದಿ ಲಯನ್ ಎನ್. ಜಯಪ್ರಕಾಶ್ ರೈ ಮುಖ್ಯ ಅತಿಥಿಗಳಾಗಿ ಭಾಗವಹಿಸದ್ದರು. ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕರಾದ ಕೆ. ಸೀತಾರಾಮ ರೈ ಸವಣೂರು ಸ್ವಾಗತಿಸಿದರು. ವಿದ್ಯಾರಶ್ಮಿ ವಿದ್ಯಾ ಸಂಸ್ಥೆಗಳ ಪ್ರಾಂಶುಪಾಲರಾದ ಸೀತಾರಾಮ ಕೇವಳ ಕಾರ್ಯಕ್ರಮ ನಿರೂಪಿಸಿದರು.
ಆಯುರ್ವೇದ ಮೆಡಿಸಿನ್, ಲ್ಯಾಬೋರೇಟರಿ ವ್ಯವಸ್ಥೆ ಕಲ್ಪಿಸಲಾಗಿದೆ. ಕಾರ್ಡಿಯಾಲಜಿ, ಗೈನೋಕಾಲಜಿ, ನ್ಯೂರಾಲಜಿ, ಆರ್ಥೋಪಪೆಡಿಕ್, ಜನರಲ್ ಮೆಡಿಸಿನ್, ಪೀಡಿಯಾಟ್ರಿಕ್, ಡಯಾಟಿಷಿಯನ್ ಸಂಬಂದಿಸಿದ ಸಲಹೆಗಳು ತಜ್ಞ ವೈದ್ಯರಿಂದ ಲಭ್ಯವಾಗಲಿದೆ. ಕ್ಲಿನಿಕ್ ಬೆಳಿಗ್ಗೆ 8.30ರಿಂದ ಸಂಜೆ 6.00 ಗಂಟೆಯ ತನಕ ಮತ್ತು ಆದಿತ್ಯವಾರ ಮಧ್ಯಾಹ್ನ 1.00 ಗಂಟೆಯ ತನಕ ಸಾರ್ವಜನಿಕರ ಸೇವೆಗೆ ಲಭ್ಯವಾಗಲಿದೆ. ದಿನದ 24 ಗಂಟೆಯೂ ಸಾರ್ವಜನಿಕರಿಗೆ ಅ್ಯಂಬುಲೆನ್ಸ್ ಸೇವೆ ದೊರೆಯಲಿದೆ ಎಂದು ಸಂಸ್ಥೆಯ ಸಂಸ್ಥಾಪಕರಾದ ಅಶ್ವಿನ್ ಎಲ್. ಶೆಟ್ಟಿ ಮತ್ತು ಶ್ರದ್ಧಾ ಎಲ್ ರೈ ತಿಳಿಸಿದರು.
ಅಮರ ಪಡ್ನೂರು ಗ್ರಾಮ ವ್ಯಾಪ್ತಿಯ 5 ಆಶಾ ಕಾರ್ಯಕರ್ತೆಯರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಕ್ಷೇಮ ಹೆಲ್ತ್ ಸೆಂಟರ್ ವತಿಯಿಂದ ಕ್ಲಿನಿಕ್ ಗೆ ಇ.ಸಿ.ಜಿ. ಮೆಶಿನನ್ನು ಕೊಡುಗೆಯಾಗಿ ನೀಡಿದರು. ಸಂಸ್ಥೆಯ ಸಂಸ್ಥಾಪಕರಾದ ಶ್ರದ್ಧಾ ಎಲ್ ರೈ ವಂದಿಸಿದರು. ಲಲಿತ್ ರೈ ಸಹಕಾರ ನೀಡಿದರು.
ವೇದಿಕೆಯಲ್ಲಿ ಉಪಸ್ಥಿತರಿದ್ದ ಸವಣೂರು ವಿದ್ಯಾರಶ್ಮಿ ವಿದ್ಯಾಸಂಸ್ಥೆಗಳ ಆಡಳಿತಾಧಿಕಾರಿ ಅಶ್ವಿನ್ ಎಲ್. ಶೆಟ್ಟಿ ಪ್ರಾಸ್ತಾವಿಕ ಮಾತುಗಳನ್ನಾಡುತ್ತಾ ವಿಶ್ವ ದರ್ಜೆಯ ಆರೋಗ್ಯ ಸೇವೆಗಳನ್ನು ಮಿತ ದರದಲ್ಲಿ ಗ್ರಾಮೀಣ ಜನತೆಗೆ ಒದಗಿಸಿಕೊಡುವುದು ಈ ಸಂಸ್ಥೆಯ ಧ್ಯೇಯವಾಗಿದ್ದು, ಇಲ್ಲಿ ಎಲ್ಲಾ ರೀತಿಯ ಕಾಯಿಲೆಗಳನ್ನು ತಜ್ಞ ವೈದ್ಯರು ಟೆಲಿ ಕನ್ಸಲ್ ಟೆನ್ಸಿ ಮುಖೇನ ಪತ್ತೆ ಹಚ್ಚಿ ಸೂಕ್ತ ಸಲಹೆ ಮತ್ತು ಚಿಕಿತ್ಸೆ ಒದಗಿಸುವುದು, ಇದರೊಂದಿಗೆ ಕೌನ್ಸಿಲಿಂಗ್, ಡಯಗ್ನಾಸ್ಟಿಕ್ ಸೇವೆಗಳು, ಹೋಂ ನರ್ಸಿಂಗ್ ಸೌಲಭ್ಸ ಡೇ ಕೇರ್ ಬೆಡ್ ವ್ಯವಸ್ಥೆ, ಬೇರೆ ಬೇರೆ ವಿಷಯಗಳಲ್ಲಿ ಪರಿಣತಿ ಪಡೆದ ವೈದ್ಯರ ಸಲಹೆಗಳು, ಹಳ್ಳಿಯ ಜನತೆಗೆ ಶೀಘ್ರ ಆರೋಗ್ಯ ವ್ಯವಸ್ಥೆ ಈ ಸ್ಮಾರ್ಟ್ ಕ್ಲನಿಕ್ ನಲ್ಲಿ ಒದಗಿಸಲಾಗಿದೆ. ಮುಂದಿನ ದಿನಗಳಲ್ಲಿ ಈ ವ್ಯವಸ್ಥೆಯನ್ನು ಗ್ರಾಮೀಣ ಪ್ರದೇಶಗಳಲ್ಲಿ ವಿಸ್ತರಿಸುವ ಯೋಜನೆಯನ್ನು ಹೊಂದಿದ್ದೇವೆ. ಇದಕ್ಕೆ ಗ್ರಾಮಸ್ಥರ ಸಹಕಾರ ಬೇಕು ಎಂದು ಹೇಳಿದರು. ಪ್ರತೀ ದಿನ ಬೆಳಿಗ್ಗೆಯಿಂದ ಮಧ್ಯಾಹ್ನ ತನಕ ಆಯುರ್ವೇದ ವೈದ್ಯರು ಕ್ಲಿನಿಕ್ ಗೆ ಭೇಟಿ ನೀಡಿ ಸಲಹೆ ಮತ್ತು ಚಿಕಿತ್ಸೆ ನೀಡಲಿದ್ದಾರೆ.