ಶ್ರೀ ನಂದಾವರ ಕ್ಷೇತ್ರ ವಾರ್ಷಿಕ ಜಾತ್ರಾ ಮಹೋತ್ಸವ ಸಂಪನ್ನ…
ಬಂಟ್ವಾಳ: ಸಜೀಪ ಮಾಗಣೆ ಶ್ರೀ ನಂದಾವರ ಕ್ಷೇತ್ರ ವಾರ್ಷಿಕ ಜಾತ್ರಾ ಮಹೋತ್ಸವದ ನಿಮಿತ್ತ ಶ್ರೀ ನಾಲ್ಕೈತ್ತಾಯ ದೈವದ ಅಪ್ಪಣೆ ಪ್ರಕಾರ ಧ್ವಜ ಅವರೋಹಣ, ಶ್ರೀ ದೇವರ ಜಳಕ, ದೇವರ ಜಾತ್ರಾ ಉತ್ಸವ ಬಲಿ ಸಂಪನ್ನಗೊಂಡಿತು.
ಜಾತ್ರೆಯ ಅಂಗವಾಗಿ ಬುಧವಾರದಂದು ಭೂತರಾದನೆಯಲ್ಲಿ ಪ್ರಸಿದ್ಧಿ ಪಡೆದ 1001 ಹಾಳೆಯ ಅಣಿ ಹೊಂದಿರುವ ಶ್ರೀ ನಾಲ್ಕೈತ್ತಾಯ ದೈವದ ಮೆಚ್ಚಿ ನೆರವೇರಿತು. ಸಜಿಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್, ಪ್ರಧಾನ ಅರ್ಚಕ ಮಹೇಶ್ ಭಟ್, ಆಡಳಿತ ಅಧಿಕಾರಿ ತಾರಾನಾಥ ಸಾಲ್ಯಾನ್, ಗಡಿ ಪ್ರಧಾನರಾದ ಗಣೇಶ ನಾಯಕ್ ಯಾನೆ ಉಗ್ಗಶೆಟ್ಟಿ, ಮುಂಡಪ್ಪ ಶೆಟ್ಟಿ ಯಾನೆ ಕೊಚು ಬಂಡಾರಿ, ಶಿವರಾಮ ಭಂಡಾರಿ, ಯಶೋಧರ ರೈ, ಜಯರಾಮ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.