ದುಬೈ – ಸದ್ಭಾವನಾ ಸರ್ಗ ಸಂಗಮ 2024…

ದುಬೈ: ಸದ್ಭಾವನಾ ಗ್ಲೋಬಲ್ ಕಲ್ಚರಲ್ ಫೋರಮ್ (SGCF)ವತಿಯಿಂದ ಸದ್ಭಾವನಾ ಸರ್ಗ ಸಂಗಮ 2024 ಸಮಾರಂಭದಲ್ಲಿ ಅಧ್ಯಕ್ಷರಾದ ಅಜಿತ್ ಕುಮಾರ್ ನೇತೃತ್ವದಲ್ಲಿ ದುಬೈ ಪಬ್ಲಿಕ್ ಲೈಬ್ರರಿ ಹಾಲ್ ನಲ್ಲಿ ನಡೆಯಿತು.
ಸಮಾರಂಭದಲ್ಲಿ ತೆಕ್ಕಿಲ್ ಪ್ರತಿಷ್ಠಾನದ ಸ್ಥಾಪಕ ಅಧ್ಯಕ್ಷರಾದ ಟಿ ಎಂ ಶಾಹಿದ್ ತೆಕ್ಕಿಲ್, ಶೈಜು ಅಮ್ಮನಪರಂ, ಟಿ ಕೆ ಮೋಹನ್ ದಾಸ್,ಪ್ರಮೋದ್ ಪುರವಂಗರ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು. ಸಮಾರಂಭದಲ್ಲಿ ಸದ್ಭಾವನೆಯ ಅಗತ್ಯ ಬಗ್ಗೆ ಅತಿಥಿಗಳು ಮಾತನಾಡಿ ಯು ಎ ಇ ಎಲ್ಲರಿಗೂ ಮಾದರಿ ಎಂದು ಅಭಿಪ್ರಾಯ ಹಂಚಿಕೊಂಡರು. ನ್ಯಾಯವಾದಿ ಸಂರೀನಾ ಆಶಿಕ್, ಬ್ರಜೇಶ್ ಮುದ್ರಿಕ್ಕಲ್,ಅಭಿನಂದನ್ ಆನಂದ್, ಕುಮಾರಿ ಅಪರ್ಣ ದಿಲೀಪ್ ಕುಮಾರ್ ನಾಯರ್, ಸುಚೇತ ಸತೀಶ್, ಅನೂಜ್ ನಾಯರ್ ಮೊದಲಾದವರನ್ನು ಸನ್ಮಾನಿಸಲಾಯಿತು.