ಮಾ.22 ರಂದು ಎ.ಸಿ.ಭಂಡಾರಿ ಅವರಿಗೆ ಪೌರ ಸಮ್ಮಾನ – ಆಹ್ವಾನ ಪತ್ರ ಬಿಡುಗಡೆ….
ಬಂಟ್ವಾಳ : ಶ್ರೀಕ್ಷೇತ್ರ ನಂದಾವರ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎ.ಸಿ.ಭಂಡಾರಿ ಅವರಿಗೆ ಮಾ. 22ರಂದು ಹಮ್ಮಿಕೊಂಡಿರುವ ಪೌರ ಸಮ್ಮಾನದ ಆಹ್ವಾನ ಪತ್ರಿಕೆಯನ್ನು ಹಿರಿಯ ಪತ್ರಕರ್ತ, ಕರ್ನಾಟಕ ತೆಂಗು ಉತ್ಪಾದಕರ ಸೌಹಾರ್ದ ಸಹಕಾರಿಯ ಅಧ್ಯಕ್ಷ ರಾಜಾ ಬಂಟ್ವಾಳ ಬಿಡುಗಡೆ ಮಾಡಿದರು.
ಶ್ರೀಕ್ಷೇತ್ರದ ಜ್ಞಾನ ಮಂದಿರದಲ್ಲಿ ಮಾ. 22 ರಂದು ಸಂಜೆ 6.15ಕ್ಕೆ ಮೂರು ದೇವರಿಗೆ ವಿಶೇಷ ರಂಗಪೂಜೆಯ ಬಳಿಕ ಪೌರ ಸಮ್ಮಾನ ಹಮ್ಮಿಕೊಂಡಿದೆ.
ಭಂಡಾರಿಯವರು ನಂದಾವರ ಶ್ರೀ ವಿನಾಯಕ ಶಂಕರನಾರಾಯಣ ದುರ್ಗಾಂಬಾ ಕ್ಷೇತ್ರದಲ್ಲಿ ಕಳೆದ 1980 ರಿಂದ ಸುದೀರ್ಘ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ. ಎಲ್ಲರನ್ನೂ ಅಣ್ಣಾ ಎಂದೇ ಕರೆಯುವ ಮೂಲಕ ದೊಡ್ಡಣ್ಣನಾಗಿದ್ದಾರೆ. ಅವರು ಹಿಡಿದ ಕೆಲಸವನ್ನು ಕೊನೆಮುಟ್ಟಿಸುವ ಸಾಧನೆಗಾರ. ಯಾರೊಂದಿಗೂ ನಿಷ್ಠುರ ಇಲ್ಲದ ಅಜಾತಶತ್ರು. ತನಗೆ ನೋವಾದರೂ ಅದನ್ನು ಪ್ರಕಟಿಸದ ನಿರ್ಲಿಪ್ತ ವ್ಯಕ್ತಿತ್ವದವರು. ಅವರು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿ ಅದಕ್ಕೊಂದು ತೂಕ ತಂದಿದ್ದರು. ಜಿ.ಪಂ. ಸದಸ್ಯರಾಗಿ ಕ್ರಿಯಾಶೀಲತೆಗೆ ಮಾದರಿಯಾಗಿದ್ದರು ಎಂದು ಅವರು ಅಭಿಪ್ರಾಯಪಟ್ಟರು.
ಅವರ ಸಮ್ಮಾನ ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ವೇ|ಮೂ| ಶಿವರಾಮ ಮಯ್ಯ ತನ್ನಚ್ಚಿಲ್ ವಹಿಸುವರು. ಸಭೆಯನ್ನು ಕ್ಷೇತ್ರದ ಪ್ರಧಾನ ಅರ್ಚಕ ವೇ| ಮೂ| ಮಹೇಶ್ ಭಟ್ ವಹಿಸುವರು. ಕೆಲಿಂಜ ಉಳ್ಳಾಲ್ತಿ ಕ್ಷೇತ್ರದ ಅನುವಂಶಿಕ ಮೊಕ್ತೇಸರ ಪಿ. ಶಂಕರನಾರಾಯಣ ಭಟ್, ಉದ್ಯಮಿ ವಿವೇಕ್ ಬಾಳಿಗ, ವಿಘ್ನೇಶ್ವರ ಸೇವಾ ಸಮಿತಿ ಅಧ್ಯಕ್ಷ ಅಶೋಕ ಗಟ್ಟಿ ನಂದಾವರ , ನೇತ್ರಾವತಿ ಯುವಕ ಮಂಡಲದ ಅಧ್ಯಕ್ಷ ಚಂದ್ರಶೇಖರ ಕುಲಾಲ್ ಮತ್ತು ಮಾಗಣೆಯ ಭಕ್ತರು, ಸನ್ಮಿತ್ರರ, ಅಭಿಮಾನಿಗಳ ಉಪಸ್ಥಿತಿಯಲ್ಲಿ ಸಮ್ಮಾನ ನಡೆಯಲಿದೆ. ಬಳಿಕ ಕ್ಷೇತ್ರದಲ್ಲಿ ಅನ್ನ ಸಂತರ್ಪಣೆ ಇರುವುದು.
ಪೌರ ಸಮ್ಮಾನ ಆಹ್ವಾನ ಬಿಡುಗಡೆ ಸಂದರ್ಭ ಕ್ಷೇತ್ರದ ಪ್ರಧಾನ ಅರ್ಚಕರು, ಕ್ಷೇತ್ರದ ಪ್ರಬಂಧಕ ರಾಮಕೃಷ್ಣ ಭಂಡಾರಿ, ಪುತ್ತೂರು ಶ್ರೀ ಬಲ್ನಾಡ್ ಉಳ್ಳಾಲ್ತಿ ಕ್ಷೇತ್ರದ ದರ್ಶನ ಪಾತ್ರಿ ಬಿ.ಕೆ.ರಾಜ, ನಂದಾವರ ಶ್ರೀ ವಿನಾಯಕ ಶಂಕರನಾರಾಯಣ ದುರ್ಗಾಂಬಾ ಭಜನಾ ಮಂಡಳಿ ಅಧ್ಯಕ್ಷ ಸತೀಶ್ ಗಟ್ಟಿ, ಉದ್ಯಮಿ ಸತೀಶ ಗೌಡ, ಹಿರಿಯರಾದ ಮಹಾಬಲ ಗಟ್ಟಿ, ವಿಘ್ನೇಶ್ವರ ಸೇವಾ ಸಮಿತಿಯ ಅಧ್ಯಕ್ಷ ಅಶೋಕ ಗಟ್ಟಿ, ಮಾಜಿ ಅಧ್ಯಕ್ಷ ದಯಾನಂದ ಗಟ್ಟಿ ಅರಮನೆಹಿತ್ಲು, ನಂದಾವರ ನೇತ್ರಾವತಿ ಯುವಕ ಮಂಡಲ ಅಧ್ಯಕ್ಷ ಶೇಖರ ಕುಲಾಲ್, ಪ್ರಮುಖರಾದ ಪ್ರಕಾಶ್ ಮರಾಠೆ, ಉದಯ ಭಟ್, ಧರ್ಣಪ್ಪ ಸಪಲಿಗ , ಯೋಗೀಶ ಗಟ್ಟಿ ಅರಮನೆಹಿತ್ಲು, ಮಂಜುನಾಥ ಭಟ್, ಶಿವರಾಂ ಮರ್ತಾಜೆ, ಕಾರ್ತಿಕ್ ಶಾಸ್ತ್ರಿ, ಮೋಹನ ಕುಲಾಲ್ ಬೊಕ್ಕಸ, ಶಶಿಧರ ಕಾಪಿಕಾಡ್, ಗಣೇಶ ಕಾಪಿಕಾಡ್ ಉಪಸ್ಥಿತರಿದ್ದರು.