ದುಬೈ -ಕೆಸೆಫ್ ಉತ್ತರೋಲ್ಸವಂ 2024″ಕಾರ್ಯಕ್ರಮ…

ದುಬೈ: ಕಾಸರಗೋಡು ಎಕ್ಸಪಟ್ರೇಟ್ಸ್ ಸೋಶಿಯೋ ಎಕನಾಮಿಕ್ಸ್ ಫಾರಂ ಇದರ ವತಿಯಿಂದ ಇಂಡಿಯನ್ ಅಸೋಸಿಯೇಷನ್ ಶಾರ್ಜಾ ಇದರ ಸಮುದಾಯ ಹಾಲ್ ನಲ್ಲಿ ನಡೆದ 22ನೇ ವರ್ಷಚಾರನೇಯ “ಕೆಸೆಫ್ ಉತ್ತರೋಲ್ಸವಂ 2024″ಕಾರ್ಯಕ್ರಮ ನಿಸಾರ್ ತಲಂಗಾರ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಮಾರಂಭವನ್ನು ಕಾಸರಗೋಡಿನ ಸಂಸತ್ ಸದಸ್ಯ ರಾಜಮೋಹನ್ ಉಣ್ಣಿತ್ತಾನ್ ಉದ್ಘಾಟಿಸಿದರು. ತ್ರಿಕರಿಪ್ಪುರ ಶಾಸಕ ಎಂ ರಾಜಗೋಪಾಲನ್ ಮಾಜಿ ಸಚಿವರು ಕಾನ್ಜಾಂಗಾಡ್ ಶಾಸಕರಾದ ಇ ಚಂದ್ರಶೇಖರ್, ಉದುಮ ಶಾಸಕ ಸಿ ಎಚ್ ಕುನ್ಹಮ್ಬು,ಕಾಸರಗೋಡು ಶಾಸಕರ ಎನ್ ಎ ನೆಲ್ಲಿಕುನ್ನ್, ಮಂಜೇಶ್ವರ ಶಾಸಕ ಎ ಕೆ ಎಂ ಅಶ್ರಫ್, ತೆಕ್ಕಿಲ್ ಪ್ರತಿಷ್ಟಾನದ ಅಧ್ಯಕ್ಷರಾದ ಕೆಪಿಸಿಸಿ ಕಾರ್ಯದರ್ಶಿ ಟಿ ಎಂ ಶಾಹಿದ್ ತೆಕ್ಕಿಲ್ ಮೊದಲಾದವರು ಭಾಗವಹಿಸಿ ಹಲವು ವಿಚಾರಗಳ ಬಗ್ಗೆ ಚರ್ಚಿಸಿದರು.