ದ್ವಿತೀಯ ಪಿಯುಸಿ ಡಿಸ್ಟಿಂಕ್ಷನ್ ಪಡೆದ ವಿದ್ಯಾರ್ಥಿ ಗಳಿಗೆ ತೆಕ್ಕಿಲ್ ಪ್ರತಿಷ್ಠಾನ ವತಿಯಿಂದ ಸನ್ಮಾನ…
ವಿಜ್ಞಾನ ವಿಭಾಗದಲ್ಲಿ ಫಾತಿಮತ್ ಶಿಬಾ, ಕಾಮರ್ಸ್ ವಿಭಾಗದಲ್ಲಿ ರೌದ ಅಶ್ರಫ್ ತೆಕ್ಕಿಲ್ ಡಿಸ್ಟಿಂಕ್ಷನ್...
ಸುಳ್ಯ: ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳಿಗೆ ತೆಕ್ಕಿಲ್ ಪ್ರತಿಷ್ಠಾನ ವತಿಯಿಂದ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಕೆಪಿಸಿಸಿ ರಾಜ್ಯ ಪ್ರದಾನ ಕಾರ್ಯದರ್ಶಿ ಟಿ. ಎಂ. ಶಹೀದ್ ಇಬ್ಬರು ತೆಕ್ಕಿಲ್ ಕುಟುಂಬದ ವಿದ್ಯಾರ್ಥಿಗಳು 600 ರಲ್ಲಿ 581 ಮತ್ತು 600 ರಲ್ಲಿ 580 ಅಂಕ ಪಡೆದದ್ದು ಮಾತ್ರವಲ್ಲದೆ 3 ಸಬ್ಜೆಕ್ಟ್ ನಲ್ಲಿ 100 ಅಂಕವನ್ನು ಪಡೆದು ನಾಡಿಗೆ ಕೀರ್ತಿ ತಂದಿರುವುದು ಅಭಿನಂದನಾರ್ಹ ಎಂದರು.
ಈ ಸಂದರ್ಭದಲ್ಲಿ ಸುಳ್ಯ ನಗರ ಪಂಚಾಯತ್ ಮಾಜಿ ಅಧ್ಯಕ್ಷ ಎಸ್ ಸಂಶುದ್ದೀನ್, ಕೆಪಿಸಿಸಿ ಅಲ್ಪಸಂಖ್ಯಾತ ವಿಭಾಗ ರಾಜ್ಯ ಪ್ರದಾನ ಕಾರ್ಯದರ್ಶಿ ಕೆ. ಎಂ. ಮುಸ್ತಫ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸುಳ್ಯ ತಾಲೂಕು ಅಧ್ಯಕ್ಷ ಶಾಹುಲ್ ಹಮೀದ್ ಕುತ್ತಮೊಟ್ಟೆ, ಮಂಗಳೂರು ವಿಶ್ವವಿದ್ಯಾನಿಲಯ ಸೆನೆಟ್ ಸದಸ್ಯರು ಶವಾದ್, ನಗರ ಪಂಚಾಯತ್ ಸದಸ್ಯರುಗಳಾದ ಶರೀಫ್ ಕಂಠಿ, ಸಿದ್ದೀಕ್ ಕೊಕ್ಕೋ, ಉದ್ಯಮಿ ನಾಸಿರ್ ಕಟ್ಟೆಕ್ಕಾರ್, ಫೈಸಲ್ ಕಟ್ಟೆಕ್ಕಾರ್, ಮನ್ಸೂರ್ ತೆಕ್ಕಿಲ್,ಮನ್ಸೂರ್ ಮೆಟ್ರೋ ಮೊದಲಾದವರು ಉಪಸ್ಥಿತರಿದ್ದರು.
ಫಾತಿಮತ್ ಶಿಬಾ ಅವರು ಹನೀಫ್ ಕುಂಡಿಲ್ ರವರ ಪುತ್ರಿ, ರೌದ ಅವರು ಅಶ್ರಫ್ ತೆಕ್ಕಿಲ್ ರವರ ಪುತ್ರಿ.