ಡಾ.ದೇವರಶೂಲ ಉಸ್ತಾದ್ ಸುಳ್ಯ ಭೇಟಿ…
ಸುಳ್ಯ: ಕರ್ನಾಟಕ ಮತ್ತು ತಮಿಳುನಾಡು ರಾಜ್ಯದ ಗಡಿ ಪ್ರದೇಶವಾದ ಗುಡಲೂರು ಎಂಬಲ್ಲಿ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಿ ಸಾವಿರಾರು ವಿದ್ಯಾರ್ಥಿಗಳಿಗೆ ಆಸರೆಯಾಗಿದ್ದುಕೊಂಡು ಸಮಾಜ ಸೇವಾ ಸಂಸ್ಥೆಯನ್ನು ಸ್ಥಾಪಿಸಿ, ಈವರೆಗೆ 1200 ಕ್ಕೂ ಮಿಕ್ಕಿದ ಬಡಕುಟುಂಬಗಳ ವಿವಾಹ ಕಾರ್ಯ ನೆರವೇರಸಿ, ಬಡ ಕುಟುಂಬಗಳಿಗೆ ಕುಡಿಯುವ ನೀರಿಗೆ ಬಾವಿ, ಬೋರ್ ತೋಡಿಸಿ ನೆರವು, ವೈದ್ಯಕೀಯ ಚಿಕಿತ್ಸೆ, ಮನೆ ನಿರ್ಮಾಣ ಮೊದಲಾದ ಸಮಾಜ ಸೇವಾ ಕಾರ್ಯಕ್ಕೆ ತಮಿಳುನಾಡು ಸರಕಾರದಿಂದ ಗೌರವ ಡಾಕ್ಟರೇಟ್ ಪುರಸ್ಕೃತ ಬಹು.ಅಬ್ದುಲ್ ಸಲಾಂ ದೇವರಶೂಲ ಸುಳ್ಯಕ್ಕೆ ಭೇಟಿ ನೀಡಿದರು.
ಗಾಂಧಿನಗರ ಜುಮಾ ಮಸೀದಿಯಲ್ಲಿ ಜಮಾ ನಂತರ ಧಾರ್ಮಿಕ ಪ್ರವಚನ ನೀಡಿದ ಉಸ್ತಾದರು ತಂದೆ ತಾಯಿ ಯನ್ನು ವೃದ್ಧಾಶ್ರಮಕ್ಕೆ ಸೇರಿಸುವ ಕಾಲಘಟ್ಟ ಈ ಸಮಾಜವನ್ನು ವಿನಾಶಕ್ಕೆ ಕೊಂಡೊಯ್ಯಲಿದೆ ಎಂದು ಎಚ್ಚರಿಸಿದ ಅವರು ಯುವ ಜನತೆ ಭಾತೃತ್ವ ಬೆಳಸಲು ಕರೆ ನೀಡಿದರು ಆಡಳಿತ ಸಮಿತಿ ವತಿಯಿಂದ ಶಾಲು ಹೊದಿಸಿ ಗೌರವಿಸಲಾಯಿತು.
ಅಧ್ಯಕ್ಷರಾದ ಕೆ ಎಂ ಮುಸ್ತಫ, ಉಪಾಧ್ಯಕ್ಷ ಕೆ ಎಂ ಮಹಮ್ಮದ್ ಬಾರ್ಪಣೆ, ಪ್ರಧಾನ ಕಾರ್ಯದರ್ಶಿ ಕೆ ಬಿ ಅಬ್ದುಲ್ ಮಜೀದ್, ಕೋಶಾಧಿಕಾರಿ ಮುಹಿಯದ್ದೀನ್ ಫ್ಯಾನ್ಸಿ, ನಿರ್ದೇಶಕರುಗಳಾದ ಕೆಎಸ್ ಉಮ್ಮರ್, ಖತೀಬರಾದ ಅಶ್ರಫ್ ಖಾಮಿಲ್ ಸಖಾಫಿ ಮೊದಲಾದವರು ಉಪಸ್ಥಿತರಿದ್ದರು. ಈ ಬಾರಿ ಫೆಬ್ರವರಿ ಯಲ್ಲಿ ಟ್ರಸ್ಟ್ ವತಿಯಿಂದ 1200 ಜೋಡಿ ವಿವಾಹ ನಡೆಯಲಿದೆ ಎಂದು ಅವರು ಈ ಸಂಧರ್ಭದಲ್ಲಿ ತಿಳಿಸಿದರು.