ಸಹಕಾರಿ ಸಾಲದ ವಿಚಾರದಲ್ಲಿ ಬಿಜೆಪಿಯವರದ್ದು ದ್ವಂದ್ವ ನಿಲುವು – ಎಂ. ವೆಂಕಪ್ಪ ಗೌಡ…
ಸುಳ್ಯ: ಸಹಕಾರಿ ಸಾಲದ ವಿಚಾರದಲ್ಲಿ ಬಿಜೆಪಿಯವರ ನಿಲುವು “ಮಗುವನ್ನು ತೊಟ್ಟಿಲಿಗೆ ಹಾಕುವುದೂ ಅವರೇ ಅದಕ್ಕೆ
ಚಿವುಟುವುದೂ ಅವರೇ” ಎಂಬ ಗಾದೆ ಮಾತಿನಂತಾಗಿದೆ ಎಂದು ಕೆಪಿಸಿಸಿ ಮಾಜಿ ಕಾರ್ಯದರ್ಶಿ ಮತ್ತು ಮಡಿಕೇರಿ
ಸಂಯೋಜಕ ಎಂ. ವೆಂಕಪ್ಪ ಗೌಡ ಲೇವಡಿಯಾಡಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರು, ಕರ್ನಾಟಕದಲ್ಲಿ ಕಾಂಗ್ರೆಸ್ ನೇತೃತ್ವದ ಸಿದ್ದರಾಮಯ್ಯ ಸರಕಾರ ಇರುವಾಗ ರೈತಾಪಿ ವರ್ಗದವರಿಗೆ ಹಲವಾರು ರೀತಿಯಲ್ಲಿ ಸಹಕರಿಸುವಂತೆ ಈಗ ಇತಿಹಾಸ ಅವರ ಅವಧಿಯಲ್ಲಿ ೦% ಗೆ 3ಲಕ್ಷ ಸಾಲ, ಹತ್ತು ಲಕ್ಷದವರೆಗೆ 3 %ನಲ್ಲಿ ಸಾಲ ನೀಡುವ ಸೌಲಭ್ಯವಿತ್ತು. ಇದರ ಹೊರತಾಗಿ ಒಟ್ಟು ಕುಟುಂಬದ ಎಷ್ಟೇ ಸದಸ್ಯರು ಒಂದೇ ಪಡಿತರ ಚೀಟಿಯಲ್ಲಿ ಇದ್ದಾಗಲೂ ಅವರಿಗೆ 0%ನಲ್ಲಿ ಸಾಲ ಕೊಡುವ ಹಾಗೂ ಇನ್ನಿತರ ಸೌಲಭ್ಯಗಳು ದೊರೆಯುತ್ತಿತ್ತು. ಇಂತಹ ಸವಲತ್ತುಗಳಿಗೆ ಕೊಳ್ಳಿ ಇಟ್ಟ ಸರಕಾರವೇ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ. ಇದೀಗ ವಿರೋಧ ಪಕ್ಷಗಳ ಒತ್ತಡದ ಮೇರೆಗೆ ಮೇಲಿಂದ ಮೇಲೆ ಮನವಿ ಹೇಳಿಕೆಗಳನ್ನು ರೈತಾಪಿ ವರ್ಗ ಹಾಗೂ ಕಾಂಗ್ರೆಸ್ ನಾಯಕರುಗಳು ನೀಡಿದ್ದರ ಮೇರೆಗೆ ರಾಜ್ಯ ಸರ್ಕಾರ ರೈತರಿಗೆ ಹಾಗೂ ವಿರೋಧ ಪಕ್ಷಕ್ಕೆ ಹೆದರಿ ಹಿಂದೆ ಇದ್ದ ಆದೇಶವನ್ನೇ ಮತ್ತೆ ಯಥಾಸ್ಥಿತಿಗೆ ತರಲು ಇತ್ತೇ ಹೊರತು ಇದರಲ್ಲಿ ಬಿಜೆಪಿ ಸರಕಾರದ ಸಾಧನೆ ಏನೂ ಇಲ್ಲ. ಆದರೆ ಇದೀಗ ಬಿಜೆಪಿ ಪಕ್ಷದವರು ಇವೆಲ್ಲವನ್ನೂ ತಾವು ಮಾಡಿದ್ದು ಎಂದು ಬೊಗಳೆ ಬೀಳುತ್ತಿರುವುದು ನಿಜಕ್ಕೂ ಅತ್ಯಂತ ನಾಚಿಗೆಗೇಡಿನ ಸಂಗತಿಯಾಗಿರುತ್ತದೆ. ಇವರ ನಡೆ ಮಗು ಸಂತೋಷದಿಂದ ಇದ್ದಾಗ ಅದಕ್ಕೆ ಚಿವುಟುವುದು ಅವರೇ, ಅದೇ ಮಗು ಅತ್ತಾಗ ತೊಟ್ಟಿಲಿಗೆ ಹಾಕುವುದು ಅವರೇ ಎನ್ನುವ ಗಾದೆಯ ಮಾತಿನಂತಿದೆ ಎಂದೂ ಅವರು ಪತ್ರಿಕಾ ಪ್ರಕಟಣೆಯಲ್ಲಿ ಹೇಳಿದ್ದಾರೆ.