ಹಾರಾಡಿ ಶಾಲೆಯಲ್ಲಿ `ಗ್ರಹಣ ಕಂಕಣ’ ಮಕ್ಕಳ ನಾಟಕ ಪ್ರದರ್ಶನ…..
ಪುತ್ತೂರು: ಗ್ರಹಣದ ಕುರಿತು ಜಾಗೃತಿ ಮೂಡಿಸುವ `ಗ್ರಹಣ ಕಂಕಣ’ ಮಕ್ಕಳ ನಾಟಕ ನ.14 ರಂದು ಪುತ್ತೂರಿನ ಹಾರಡಿ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.
ಪುತ್ತೂರು ನಿರತನಿರಂತ ಮಕ್ಕಳ ನಾಟಕ ಶಾಲೆ ಪ್ರಸ್ತುತ ಪಡಿಸಿದ, ರಂಗಕರ್ಮಿ ಐಕೆ ಬೊಳುವಾರು ರಂಗಪಠ್ಯ ಹಾಗೂ ನಿರ್ದೇಶನದಲ್ಲಿ ಹಾರಾಡಿ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಅಭಿನಯಿಸಿದ ಈ ನಾಟಕವು ಹಾರಾಡಿ ಶಾಲೆಯ ಮಯೂರಿ ರಂಗವೇದಿಕೆಯಲ್ಲಿ ಪ್ರದರ್ಶನಗೊಂಡಿತು.
ನಾಟಕದ ನಡುವೆ ನಡುವೆ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷೆ ಪ್ರತಿಮಾ ಯು. ರೈ ವಹಿಸಿದ್ದರು. ಪುತ್ತೂರು ನಗರಸಭಾ ಸದಸ್ಯೆ ಪ್ರೇಮಲತಾ, ಪುತ್ತೂರು ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಸಂಶುದ್ದೀನ್ ಸಂಪ್ಯ, ಶಾಲಾ ಪ್ರಭಾರ ಮುಖ್ಯಗುರು ಪ್ರಿಯಾಕುಮಾರಿ ಅತಿಥಿಗಳಾಗಿ ಭಾವಹಿಸಿ ಮಾತನಾಡಿದರು.
ನಾಟಕದ ನಟರಾಗಿ ವಿದ್ಯಾರ್ಥಿಗಳಾದ ಭೂಮಿಕ ಜಿ, ಪವನ್ ಎಂ, ಸೌಮ್ಯ ಕೆ, ಸಾನಿತ ಎ.ಎಂ, ಸಾತ್ವಿಕ್ ಕಾರಂತ್, ಹರ್ಷಿಣಿ ಎಸ್, ಧನುಷ್ ರೈ ಎಚ್, ಶ್ರಾವ್ಯ ಎಚ್.ಬಿ, ಅಭಿಲಾಷ ದೋಟ, ಜೀವನ್ ಎನ್, ಅನಿರುದ್ದ ದೋಟ, ಲೋಕೇಶ್ವರಿ ಬಿ, ಪವಿತ್ ಯು ರೈ, ಸಿಂಚನಾ ಬಿ, ಗೌರೀಶ್ ಕೆ, ವಿಖ್ಯಾತ್ ಬಿ.ಕೆ ಮತ್ತು ನಾಗಲಕ್ಷ್ಮೀ ಬಿ ಅಭಿನಯಿಸಿದರು.
ನಾಟಕದ ನಿರ್ದೇಶಕ ಐಕೆ ಬೊಳುವಾರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಹ ಶಿಕ್ಷಕ ಪ್ರಶಾಂತ್ ಅನಂತಾಡಿ ಕಾರ್ಯಕ್ರಮ ನಿರೂಪಸಿ ಸ್ವಾಗತಿಸಿದರು. ರಂಗಕರ್ಮಿ ಮೌನೇಶ್ ವಿಶ್ವಕರ್ಮ ವಂದಿಸಿದರು.