ಶ್ರೀ ಕೃಷ್ಣ ಯುವಕ ಮಂಡಲ (ರಿ)ಸಿಟಿಗುಡ್ಡೆ ನೆಹರು ನಗರ ಇದರ ಸಂಭ್ರಮ ಕಾರ್ಯಕ್ರಮ…

ಶಿಕ್ಷಕಿ ಶಾಂತಾ ಪುತ್ತೂರು ಅವರಿಗೆ ಸನ್ಮಾನ...

ಪುತ್ತೂರು: ಶ್ರೀ ಕೃಷ್ಣ ಯುವಕ ಮಂಡಲ (ರಿ)ಸಿಟಿಗುಡ್ಡೆ ನೆಹರು ನಗರ ಪುತ್ತೂರು ಇದರ 2ನೇ ವರ್ಷದ ಶ್ರೀ ಕೃಷ್ಣ ಯುವಕ ಮಂಡಲ ಸಂಭ್ರಮ ಕಾರ್ಯಕ್ರಮ ನ. 26ರಂದು ಸುದಾನ ವಸತಿಯುತ ಶಾಲೆಯ ಎಡ್ವರ್ಡ್ ಹಾಲ್ ನಲ್ಲಿ ನಡೆಯಿತು.
ಈ ಕಾರ್ಯಕ್ರಮದಲ್ಲಿ ಬಹುಮುಖ ಪ್ರತಿಭೆ ನೆಲೆಯಲ್ಲಿ ಬೊಳುವಾರು ನಿವಾಸಿ ಸರಕಾರಿ ಪ್ರೌಢಶಾಲೆ ಕಬಕದ ಶಿಕ್ಷಕಿ ಶಾಂತಾ ಪುತ್ತೂರುರವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದ ಶ್ರೀಮತಿ ಅನ್ನಪೂರ್ಣ ಪ್ರಭಾರ ಮುಖ್ಯ ಶಿಕ್ಷಕಿ, ಸರಕಾರಿ ಪ್ರೌಢಶಾಲೆ ಆರ್.ಎಂ.ಎಸ್.ಎ.ವಿಟ್ಲ, ಸಭಾಧ್ಯಕ್ಷ ರಾದ ರೆ।ಫಾ।ವಿಜಯ ಹಾರ್ವಿನ್ ಸಂಚಾಲಕರು, ಸುದಾನ ವಸತಿಯುತ ಶಾಲೆ ನೆಹರುನಗರ ಪುತ್ತೂರು, ಮುಖ್ಯ ಅತಿಥಿಗಳಾದ ವಂದನೀಯ ಲಾರೆನ್ಸ್ ಮಸ್ಕರೇನಸ್ ಪ್ರಧಾನ ಧರ್ಮಗುರುಗಳು ಮಾಯ್ ದೆ ದೇವುಸ್ ಚರ್ಚ್ ಪುತ್ತೂರು,ಗಣೇಶ್. ಡಿ.ಎಸ್.ನಿವೃತ್ತ ಸರ್ಜಂಟ್ ಭಾರತೀಯ ವಾಯುಸೇನೆ,ಶ್ರೀ ಎನ್.ಕೆ.ರಾಮಚಂದ್ರ ಭಟ್ ಉಪನ್ಯಾಸಕರು ಪುತ್ತೂರು,ಶ್ರೀ ವಾಸು ನಾಯ್ಕ ನಿಸರ್ಗ ಗಣೇಶ್ ಭಾಗ್ ಪುತ್ತೂರು, ಶ್ರೀಕೃಷ್ಣ ಯುವಕ ಮಂಡಲದ ಅಧ್ಯಕ್ಷ ರಾದ ಬಿ.ರಾಜೀವ ಗೌಡ, ಹಿರಿಯ ಕವಿ- ನಿವೃತ್ತ ಶಿಕ್ಷಕ ನಾರಾಯಣ ರೈ ಕುಕ್ಕುವಳ್ಳಿ,ಆಮಂತ್ರಣ ಪರಿವಾರದ ಸಂಸ್ಥಾಪಕರಾದ ಶ್ರೀ ವಿಜಯ ಕುಮಾರ್ ಜೈನ್,ರಕ್ತದಾನಿ,ಸಮಾಜಸೇವಕ ಶ್ರೀ ನವೀನ್,ಕಲಾಪ್ರತಿಭೆಗಳು ಉಪಸ್ಥಿತರಿದ್ದರು.
ಕಲಾವಿದ ಕೃಷ್ಣಪ್ಪ ಸ್ವಾಗತಿಸಿದರು . ಕವಯಿತ್ರಿ ಅಪೂರ್ವ ಕಾರಂತ್ ಕಾರ್ಯಕ್ರಮ ನಿರೂಪಿಸಿ, ಧನ್ಯವಾದವಿತ್ತರು.

whatsapp image 2023 11 27 at 9.23.35 pm

 

Sponsors

Related Articles

Back to top button