ನೇತಾಜಿ ಯುವಕ ಸಂಘ ಸಜೀಪ ಇದರ ಆಶ್ರಯದಲ್ಲಿ ಬೃಹತ್ ರಕ್ತದಾನ ಶಿಬಿರ…

ಬಂಟ್ವಾಳ: ನೇತಾಜಿ ಯುವಕ ಸಂಘ ಸಜೀಪ ಇದರ ಆಶ್ರಯದಲ್ಲಿ ಫಾದರ್ ಮುಲ್ಲರ್ಸ್ ಆಸ್ಪತ್ರೆ ಸಹಯೋಗದೊಂದಿಗೆ ಬೃಹತ್ ರಕ್ತದಾನ ಶಿಬಿರ ಪ್ರಾಥಮಿಕ ಆರೋಗ್ಯ ಕೇಂದ್ರ ಸಜಿಪನಡು ಇಲ್ಲಿ ಡಿ.10 ರಂದು ಹಮ್ಮಿಕೊಳ್ಳಲಾಯಿತು.
ಯುವಕ ಸಂಘದ ಸ್ಥಾಪಕ ಅಧ್ಯಕ್ಷ ಯಶವಂತ ದೇರಾಜೇಗುತ್ತು ಅವರ 50ನೇ ಹುಟ್ಟುಹಬ್ಬದ ನಿಮಿತ್ತ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿತ್ತು. 50ರ ಸಂಭ್ರಮದ ನಿಮಿತ್ತ 11 ಮಂದಿ ಹಿರಿಯ ಸದಸ್ಯರನ್ನು ಗೌರವಿಸಲಾಯಿತು. ಸಜೀಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್, ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ಹಾಗೂ ಕ್ಯಾಡ್ಸ್ ಮಂಗಳೂರು ಅಧ್ಯಕ್ಷ ರವೀಂದ್ರ ಕಂಬಳಿ, ಸಜೀಪನಡು ಗ್ರಾಮ ಪಂಚಾಯತ್ ಅಧ್ಯಕ್ಷ ಇಕ್ಬಾಲ್ ಎಸ್ ಎನ್, ಆದರ್ಶ್ ಆಸ್ಪತ್ರೆ ವೈದ್ಯ ಡಾ.ಮಹಿಮಾ, ಮೋಹಿನಿ, ಧರ್ನಮ್ಮ, ಸಂಘದ ಅಧ್ಯಕ್ಷ ನಿತಿನ್ ಅರಸ, ಮೊದಲಾದವರು ಉಪಸ್ಥಿತರಿದ್ದರು. ಗ್ರಾಮ ಪಂಚಾಯತಿ ಸದಸ್ಯ ಸುರೇಶ್ ಸ್ವಾಗತಿಸಿ, ವಂದಿಸಿದರು. ಮನೋಜ್ ಕಾರ್ಯಕ್ರಮ ನಿರ್ವಹಿಸಿದರು.