ಮುಕ್ಕ ಶ್ರೀನಿವಾಸ್ ಎಂಜಿನಿಯರಿಂಗ್ ಕಾಲೇಜು- ಎಲೆಕ್ಟ್ರಾನಿಕ್ಸ್ ವಿದ್ಯಾರ್ಥಿ ಸಂಘ ಉದ್ಘಾಟನೆ….
ಮಂಗಳೂರು: ಮುಕ್ಕ ಶ್ರೀನಿವಾಸ್ ವಿಶ್ವವಿದ್ಯಾಲಯದ ಕಾಲೇಜ್ ಆಫ್ ಎಂಜಿನಿಯರಿಂಗ್ ಮತ್ತು ಟೆಕ್ನಾಲಜಿಯ ಎಲೆಕ್ಟ್ರಾನಿಕ್ಸ್ ಮತ್ತು ಸಂವಹನ ವಿಭಾಗದ ವಿದ್ಯಾರ್ಥಿ ಸಂಘದ (NICSA) ಚಟುವಟಿಕೆಗಳ ಉದ್ಘಾಟನಾ ಕಾರ್ಯಕ್ರಮ ಅ. 14 ರಂದು ನಡೆಯಿತು.
ಮಂಗಳೂರಿನ ಬ್ರೆವೆರಾ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ನಿರ್ದೇಶಕ ವೇಣುಗೋಪಾಲ ಪಿ ಕೆ ಮುಖ್ಯ ಅತಿಥಿಯಾಗಿ ಭಾಗವಹಿಸಿ, ಕೌಶಲ್ಯಗಳನ್ನು ಅಭಿವೃದ್ಧಿಪಡಿಸಲು ಶ್ರಮವಹಿಸುವಂತೆ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಕಾಲೇಜಿನ ಡೀನ್ ಡಾ.ಥೋಮಸ್ ಪಿಂಟೊ ಅವರು ಅಧ್ಯಕ್ಷತೆ ವಹಿಸಿದ್ದರು. ವೈಯಕ್ತಿಕ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಲು ಸಂಘದ ಎಲ್ಲಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಅವರು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ವಿಭಾಗ ಮುಖ್ಯಸ್ಥ ಪ್ರೊ.ನಾಗರಾಜ ಎನ್ ಎಸ್ ಅವರು ಸಂಘದ ಸಂಕ್ಷಿಪ್ತ ಪರಿಚಯ ಮತ್ತು ಸಂಘವು ಬೆಳೆದ ವಿಧಾನವನ್ನು ವಿವರಿಸಿದರು.
ಶಿಕ್ಷಕ ಸಲಹೆಗಾರ ಓಂಪ್ರಕಾಶ್ ಭಟ್ ಅವರು ಸಂಘದ ಉದ್ದೇಶಿತ ಚಟುವಟಿಕೆಗಳನ್ನು ಮಂಡಿಸಿದರು ಮತ್ತು ಹೊಸ ಪದಾಧಿಕಾರಿಗಳನ್ನು ಸಭೆಗೆ ಪರಿಚಯಿಸಿದರು. ಈ ಸಂದರ್ಭದಲ್ಲಿ ಅತಿಥಿಗಳು ಇ & ಸಿ ವಿಭಾಗದ ಸುದ್ದಿ ಪತ್ರ ಬಿಡುಗಡೆ ಮಾಡಿದರು. ಕಳೆದ ಪರೀಕ್ಷೆಗಳಲ್ಲಿ ಅತ್ಯಧಿಕ ಅ೦ಕಗಳಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಿ ಗೌರವಿಸಲಾಯಿತು. ಸಹಾಯಕ ಪ್ರಾಧ್ಯಾಪಕಿ ಎಂ.ಎಸ್.ವಿಜಯಲತಾ ದೇವಡಿಗ, ಸಂಘದ ಅಧ್ಯಕ್ಷ ಅಕ್ಷಯ್ ರಾವ್, ಲಿಖಿತಾ ಎಂ.ಎಸ್.ಅನನ್ಯಾ, ಲಾವಣ್ಯ ಕೆ, ಅಂಕಿತಾ ಕುಮಾರಿ ಸಭಾ ಕಾರ್ಯಕ್ರಮದಲ್ಲಿ ಸಹಕರಿಸಿದರು.
ಸಭಾ ಕಾರ್ಯಕ್ರಮಕ್ಕೆ ಮುಂಚಿತವಾಗಿ ವೇಣುಗೋಪಾಲ ಪಿ ಕೆ ಅವರಿಂದ ತಾಂತ್ರಿಕ ಭಾಷಣವನ್ನು ಆಯೋಜಿಸಲಾಗಿತ್ತು.