ಆಲೆಟ್ಟಿಯಲ್ಲಿ ಮಕ್ಕಳ ದಿನಾಚರಣೆ….
ಸುಳ್ಯ: ಕಸ್ತೂರಿಬಾ ಮಹಿಳಾ ಮಂಡಲ ಆಲೆಟ್ಟಿ, ಸ್ತ್ರೀಶಕ್ತಿ ಸ್ವಸಹಾಯ ಸಂಘಗಳು ಆಲೆಟ್ಟಿ ಇದರ ವತಿಯಿಂದ ಆಲೆಟ್ಟಿ ಅಂಗನವಾಡಿಯಲ್ಲಿ ಮಕ್ಕಳ ದಿನಾಚರಣೆ ಆಚರಿಸಲಾಯಿತು.
ಗ್ರಾ. ಪಂ. ಉಪಾಧ್ಯಕ್ಷೆ ಸುಂದರಿ ಮೊರಂಗಲ್ಲು ಅಧ್ಯಕ್ಷತೆ ವಹಿಸಿದ್ದು, ಮಹಿಳಾ ಒಕ್ಕೂಟ ಕಾರ್ಯದರ್ಶಿ ಸುಮನ, ಬಾಲವಿಕಾಸ ಸಮಿತಿ ಅಧ್ಯಕ್ಷೆ ಪವಿತ್ರ ಗುಂಡ್ಯ, ಪಂಚಾಯತ್ ಸದಸ್ಯೆ ಕುಸುಮಾವತಿ ಕುಡೆಕಲ್ಲು, ಆಶಾ ಕಾರ್ಯಕರ್ತೆ ಸಿ.ಕೆ. ಸರಸ್ವತಿ ಉಪಸ್ಥಿತರಿದ್ದು ಶುಭ ಹಾರೈಸಿದರು. ಮಕ್ಕಳಿಗಾಗಿ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿ ಬಹುಮಾನ ವಿತರಿಸಲಾಯಿತು. ಸಾವಿತ್ರಿ ಟೀಚರ್ ಜಾನಕಿ ಮೈಂದೂರು, ನಳಿನಾಕ್ಷಿ, ಪೂರ್ಣಿಮ ಸಹಕರಿಸಿದರು.