ಕಲ್ಲುಗುಂಡಿ ಯಲ್ಲಿ ನೂತನ ಸುನ್ನಿ ಸೆಂಟರ್ ಉದ್ಘಾಟನೆ ಹಾಗೂ ಮಾಸಿಕ ಮಹ್ಲರತುಲ್ ಬದ್ರಿಯಾ…

ಸುಳ್ಯ: SSF, SYS ವತಿಯಿಂದ ಕಲ್ಲುಗುಂಡಿಯಲ್ಲಿ ನೂತನವಾಗಿ ನಿರ್ಮಿಸಿದ ಸುನ್ನೀ ಸೆಂಟರ್ ಉಧ್ಘಾಟನಾ ಕಾರ್ಯಕ್ರಮವು ಗಣ್ಯರ ಉಪಸ್ಥಿತಿ ಯಲ್ಲಿ ಜ. 8 ರಂದು ಜರುಗಿತು.
ಕಲ್ಲುಗುಂಡಿ ಯಲ್ಲಿ ನೂತನವಾಗಿ ನಿರ್ಮಿಸಿದ ಸುನ್ನಿ ಸೆಂಟರ್ ಅನ್ನು ಅಬ್ದುಲ್ ಹಮೀದ್ ಅಂಜದಿ ಉಸ್ತಾದರು ಸುನ್ನೀ ಸೆಂಟರ್ ರಿಬ್ಬನ್ ಕಟ್ಟಿಂಗ್ ಮಾಡಿ ಪ್ರಾರ್ಥನೆ ಮೂಲಕ ಉದ್ಘಾಟಿಸಿದರು. ಜೊತೆಯಲ್ಲಿ ಮಹ್ಳರತುಲ್ ಬದ್ರಿಯಾ ಮಜ್ಲಿಸ್ ನಲ್ಲಿ ಸುಂದರವಾದ ಶ್ರವಣಗಳ ಮೂಲಕ ಎಲ್ಲರ ಮನಗೆದ್ದ ರಾಷ್ಟ್ರೀಯ ಮಟ್ಟದ ಪ್ರತಿಭೆ ಇರ್ಫಾನ್ ಸಅದಿ ಜೋಗಿಬೆಟ್ಟು ರವರು ನೇತೃತ್ವ ವಹಿಸಿದರು. ಕಾರ್ಯಕ್ರಮದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು SYS ಕಲ್ಲುಗುಂಡಿ ಬ್ರಾಂಚ್ ಅದ್ಯಕ್ಷರಾದ ಅಬ್ದುಲ್ ಲತೀಫ್ ಮುಸ್ಲಿಯಾರ್ ವಹಿಸಿದರು. SYS ಸುಳ್ಯ ಸೆಂಟರ್ ಅದ್ಯಕ್ಷರಾದ ಅಬ್ದುಲ್ಲತೀಫ್ ಜೌಹರಿ ಸಭೆಯನ್ನು ಉದ್ಘಾಟಿಸಿದರು, ಅಬ್ದುಲ್ ಹಮೀದ್ ಆಂಜದಿ ಅಲ್ ಕಾಮಿಲ್ ಸಖಾಫಿ ಯವರು ಮುಖ್ಯಪ್ರಭಾಷಣ ಮಾಡಿದರು. SYS ರಾಜ್ಯ ಸಮಿತಿ ಸದಸ್ಯರಾದ ಅಬ್ದುಲ್ ಹಮೀದ್ ಬೀಜಕೊಚ್ಚಿ, ಜಿಲ್ಲಾ ವಕ್ಫ್ ಸಲಹಾ ಸಮಿತಿ ಉಪಾಧ್ಯಕ್ಷ ಅಬ್ದುಲ್ ರಹಿಮಾನ್ ಮೊಗರ್ಪಣೆ, SMA ಸುಳ್ಯ ರೀಜನಲ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಲತೀಫ್ ಸಖಾಫಿ ಗೂನಡ್ಕ, ಎಸ್ಸೆಸ್ಸಫ್ ಕರ್ನಾಟಕ ರಾಜ್ಯ ಸಮಿತಿ ಸದಸ್ಯರಾದ ಎ.ಎಂ.ಫೈಝಲ್ ಝುಹ್‌ರಿ ಸಹಿತ ನಾಯಕರು ಶುಭನುಡಿಯನ್ನಾಡಿದರು. ಕೊಯನಾಡು ಜಮಾಅತ್ ಅಧ್ಯಕ್ಷರಾದ ಅಬ್ದುರ್ರಝಾಕ್ ಕೊಯನಾಡು, ಮಾಜಿ ಅಧ್ಯಕ್ಷರಾದ ಮೊಯ್ದೀನ್ ಕುಂಞಿ ಕೊಯನಾಡು ಅತಿಥಿಗಳಾಗಿ ಭಾಗವಹಿಸಿದರು. ಸ್ವಾದಿಕ್ ಮಾಸ್ಟರ್ ಸ್ವಾಗತಿಸಿ ವಂದಿಸಿದರು.

img 20230109 wa0051
img 20230109 wa0054
img 20230109 wa0052
Sponsors

Related Articles

Back to top button