ಗಾಂಧಿನಗರ – ನಿರ್ಗಮನ ಮದರಸ ಮುಅಲ್ಲಿಮರುಗಳಿಗೆ ಬೀಳ್ಕೊಡುಗೆ..

ಅಧ್ಯಾಪಕ ವೃತ್ತಿ ಗೌರವದ ಪ್ರತೀಕ - ಕೆ. ಎಂ. ಮುಸ್ತಫ...

ಸುಳ್ಯ: ಮನುಷ್ಯ ವಿದ್ಯಾಭ್ಯಾಸ ಪಡೆದು ಎಷ್ಟೇ ದೊಡ್ಡವನಾದರೂ ಕಲಿಸಿದ ಗುರುವನ್ನು ಜೀವನದ ಕೊನೆಯವರೆಗೂ ಗೌರವಿಸುತ್ತಾನೆ. ಆದ್ದರಿಂದ ಅಧ್ಯಾಪಕ ವೃತ್ತಿ ಸಮಾಜದಲ್ಲಿ ಪರಮ ಪವಿತ್ರವಾದದ್ದು ಎಂದು ಗಾಂಧಿನಗರ ಜುಮ್ಮಾ ಮಸ್ಜಿದ್ ಅಧ್ಯಕ್ಷ ಕೆ. ಎಂ. ಮುಸ್ತಫ ಹೇಳಿದರು.
ಸುಳ್ಯ ಗಾಂಧಿನಗರ ಮುನವ್ವಿರುಲ್ ಇಸ್ಲಾಂ ಹೈಯರ್ ಸೆಕೆಂಡರಿ ಮದರಸ ಸಭಾಂಗಣದಲ್ಲಿ ಮುನವ್ವಿ ರುಲ್ ಇಸ್ಲಾಂ ಹೈಯರ್ ಸೆಕೆಂಡರಿ ಮದರಸ, ಮುಹಿಯದ್ದೀನ್ ಜುಮ್ಮಾ ಮಸ್ಜಿದ್ ತರ್ಭಿ ಯತುಲ್ ಇಸ್ಲಾಂ ಕಮಿಟಿ ಮತ್ತು ಸ್ಟಾಫ್ ಕೌನ್ಸಿಲ್ ಸಂಯುಕ್ತ ಆಶ್ರಯದಲ್ಲಿ ಪ್ರಸಕ್ತ ಸಾಲಿನ ಅಧ್ಯಯನ ವರ್ಷ ಮುಗಿಸಿ ಬೇರೆಡೆಗೆ ವೃತ್ತಿ ನಿರ್ವಹಿಸಲು ತೆರಳುತ್ತಿರುವ ನಿರ್ಗಮಿತ ಮದರಸ ಮುಅಲ್ಲಿಮರುಗಳಿಗೆ (ಅಧ್ಯಾಪಕರುಗಳಿಗೆ ) ಬೀಳ್ಕೊಡುಗೆ ಸಮಾರಂಭ ದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ಮದರಸ ಅಧ್ಯಾಪಕರುಗಳಾದ ಸದರರ್ ಉಸ್ತಾದ್ ಇಬ್ರಾಹಿಂ ಸಖಾಫಿ ಪುಂಡೂರ್, ಸಹಾಯಕ ಸದರ್ ಅಬ್ದುಲ್ ಖಾದರ್ ಮುಸ್ಲಿಯಾರ್ ಎಡಪ್ಪಾಲ, ಅಬ್ದುಲ್ ಖಾದರ್ ಮದನಿ ಅಜ್ಜಾವರ, ಅಬ್ದುಲ್ ಲತೀಫ್ ಸಖಾಫಿ ಗೂನಡ್ಕಮತ್ತು ಸಿರಾಜುದ್ದೀನ್ ಸಅದಿ ಬೈತಡ್ಕ ರವರನ್ನು ಶಾಲು ಹೊದಿಸಿ, ಸ್ಮರಣಿಕೆ ನೀಡಿ, ಗೌರವಿಸಲಾಯಿತು
ಮದರಸ ಎಸ್ ಬಿಎಸ್ ವತಿಯಿಂದ ಮತ್ತು ಹಳೆ ವಿದ್ಯಾರ್ಥಿಗಳ ವತಿಯಿಂದಲೂ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಗಾಂಧಿನಗರ ಖತೀಬರಾದ ಅಲ್ ಹಾಜ್ ಆಶ್ರಫ್ ಕಾಮಿಲ್ ಸಖಾಫಿ, ಮುದರ್ರಿಸ್ ಇರ್ಫಾನ್ ಸಖಾಫಿ, ಎಂಜೆಎಂ ಮಾಜಿ ಅಧ್ಯಕ್ಷ ಆದo ಹಾಜಿ ಕಮ್ಮಾಡಿ, ಪದಾಧಿಕಾರಿಗಳಾದ ಹಾಜಿ ಮಹಮ್ಮದ್ ಬಾರ್ಪಣೆ ಕೆಎಂಎಸ್, ಹಾಜಿ ಐ. ಇಸ್ಮಾಯಿಲ್, ಹಾಜಿ ಕೆ. ಎಂ. ಮುಹಿಯದ್ದೀನ್ ಫ್ಯಾನ್ಸಿ, ನಿರ್ದೇಶಕರುಗಳಾದ ಕೆ. ಎಸ್. ಉಮ್ಮರ್, ಕೆ. ಬಿ. ಅಬ್ದುಲ್ ಮಜೀದ್,ಎಸ್. ಎಂ. ಹಮೀದ್, ಜಿ. ಎಂ. ಇಬ್ರಾಹಿಂ ಶಿಲ್ಪಾ, ಅನ್ಸಾರ್ ಅಧ್ಯಕ್ಷ ಹಾಜಿ ಅಬ್ದುಲ್ ಶುಕೂರ್,ಮೊದಲಾದವರು ವೇದಿಕೆಯಲ್ಲಿದ್ದರು.
ಸ್ಟಾಫ್ ಕೌನ್ಸಿಲ್ ನಿಸಾರ್ ಸಖಾಫಿ, ಅಬ್ದುಲ್ ರೆಹಮಾನ್ ಸಅದಿ, ಇರ್ಫಾನ್, ಕುಂಜಿಲ ಮದನಿ, ಅಬೂಬಕ್ಕರ್ ಸಖಾಫಿ ಅಯ್ಯಂಗೇರಿ ಮುಅಝಿನ್ ಅಬ್ದುಲ್ ರವೂಫ್ ಝುಹರಿ ಮೊದಲಾವರು ಕಾರ್ಯಕ್ರಮ ದಲ್ಲಿ ಸಹಕರಿಸಿದರು.

whatsapp image 2024 03 03 at 1.27.11 pm

Sponsors

Related Articles

Back to top button