ಮಾನವ ಹಕ್ಕು ಕುರಿತು ಉಪನ್ಯಾಸ….
ಬಂಟ್ವಾಳ : ಮೆಲ್ಕಾರ್ ಮಹಿಳಾ ಪದವಿ ಕಾಲೇಜು, ಮಾರ್ನಬೈಲ್ ನಲ್ಲಿ ಮಾನವ ಹಕ್ಕು ಕುರಿತು ಉಪನ್ಯಾಸ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.
ಸಂಪನ್ಮೂಲ ವ್ಯಕ್ತಿಯಾಗಿ ವಕೀಲರಾದ ಶಿವಪ್ರಸಾದ್ ಆಗಮಿಸಿದ್ದರು. ಮಾನವ ಹಕ್ಕು ಹಾಗೂ ಕಾನೂನು ರಕ್ಷಣೆ ಕುರಿತು ಉಪಯುಕ್ತ ಮಾಹಿತಿ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲರಾದ ಬಿ.ಕೆ. ಅಬ್ದುಲ್ ಲತೀಫ್ ವಹಿಸಿದ್ದು, ಹಿರಿಯ ವಕೀಲರಾದ ಡಿ.ಬಿ. ಅಬೂಬಕ್ಕರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಫಾತಿಮಾ ಅಜ್ಮಿಯಾ ಕೆ ಸ್ವಾಗತಿಸಿ, ರಮೀಝ ಧನ್ಯವಾದವಿತ್ತು, ಶಾಹೀನಾ.ಎನ್ ಕಾರ್ಯಕ್ರಮ ನಿರ್ವಹಿಸಿದರು.