ದ.ಕ.ಜಿ.ಪ.ಹಿ.ಪ್ರಾ ಶಾಲೆ ರಾಯಿ – ಎನ್. ಎಸ್. ಎಸ್ ಶಿಬಿರ ಉದ್ಘಾಟನೆ…
ಬಂಟ್ವಾಳ : ದ.ಕ.ಜಿ.ಪ.ಹಿ.ಪ್ರಾ ಶಾಲೆ ರಾಯಿಯಲ್ಲಿ ಪ್ರಥಮ ದರ್ಜೆ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರವನ್ನು ಬಂಟ್ವಾಳ ವಿಧಾನಸಭಾ ಕ್ಷೇತ್ರದ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಉದ್ಘಾಟನೆ ಮಾಡಿದರು.
ಶ್ರೀರಾಮ ವಿದ್ಯಾಕೇಂದ್ರದ ಸಂಚಾಲಕರಾದ ವಸಂತ ಮಾಧವ ಅಧ್ಯಕ್ಷತೆ ವಹಿಸಿ ಮಾತನಾಡುತ್ತ , ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಇಂತಹ ಶಿಬಿರಗಳು ಸದವಕಾಶವನ್ನು ನೀಡುತ್ತದೆ. ಶಿಕ್ಷಣದ ಜೊತೆಗೆ ಸಹಮಿಲನದ, ಸಹಭೋಜನದ ಕಲ್ಪನೆಗಳು ಸಾಮರಸ್ಯಕ್ಕೆ ದಾರಿದೀಪವಾಗುತ್ತದೆ ಎಂದರು.
ಶಿಬಿರದ ಶ್ರಮದಾನ ಉದ್ಘಾಟನೆಯನ್ನು ದುರ್ಗಾದಾಸ್ ಶೆಟ್ಟಿ ಮಾವಂತೂರ್ ನೆರವೇರಿಸಿದರು. ಪ್ರಭಾಕರ ಪ್ರಭು ಮತ್ತು ಪಂಚಾಯತ್ ಉಪಾಧ್ಯಕ್ಷರಾದ ರಶ್ಮಿತ್ ಶೆಟ್ಟಿ ಶುಭಹಾರೈಸಿದರು. ಗಣ್ಯರಾದ ವಸಂತ್ ಕುಮಾರ್ ಅಣ್ಣಳಿಕೆ, ಹರೀಶ್ ಆಚಾರ್ಯ ರಾಯಿ ,ಪಿ.ಡಿ.ಒ ಮಧು ಟಿ ಎಲ್, ಮುಖ್ಯೋಪಾಧ್ಯಾಯ ಜಯರಾಮ ಪಡ್ರೆ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ರಮೇಶ್ ಗೌಡ ಮಿಯಾಲು, ಧ. ಗ್ರಾ. ಯೋಜನೆಯ ರಾಯಿ ಒಕ್ಕೂಟದ ಅಧ್ಯಕ್ಷರಾದ ಪರಮೇಶ್ವರ ಪೂಜಾರಿ, ಪಂಚಾಯತ್ ಸದಸ್ಯರಾದ ಸಂತೋಷ್ ಗೌಡ ಗೊಳಿತಬೆಟ್ಟು, ಸಂತೋಷ್ ಕುಮಾರ್ ರಾಯಿ, ವೈದ್ಯಾಧಿಕಾರಿ ಡಾ|ಮನೋಣ್ಮಣಿ, ಡೊಂಬಯ್ಯ ಅರಳ, ಶಿಬಿರಾಧಿಕಾರಿಗಳಾದ ಯತಿರಾಜ್ ಪಿ, ಕು ದೀಕ್ಷಿತಾ ಉಪಸ್ಥಿತರಿದ್ದರು.