ಸಂಪಾಜೆ ಗ್ರಾಮ ಸಭೆ – ವಿದ್ಯುತ್ ಸಮಸ್ಯೆ ವಾರದ ಒಳಗೆ ಸರಿ ಪಡಿಸದಿದ್ದಲ್ಲಿ ಸುಳ್ಯ ಮೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಲು ನಿರ್ಣಯ…

ಸುಳ್ಯ: ಸಂಪಾಜೆ ಗ್ರಾಮ ಪಂಚಾಯತ್ ಗ್ರಾಮ ಸಭೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜಿ. ಕೆ. ಹಮೀದ್ ಗೂನಡ್ಕ ಅಧ್ಯಕ್ಷತೆಯಲ್ಲಿ ಗ್ರಾಮಪಂಚಾಯಿತಿ ಸಬಾಭವನದಲ್ಲಿ ನಡೆಯಿತು.
ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸರಿತಾ ಡಿಸೋಜಾ ಪ್ರಾಸ್ತವಿಕ ಮಾತಿನೊಂದಿಗೆ ಸರ್ವರನ್ನು ಸ್ವಾಗತಿಸಿದರು. ಪಂಚಾಯತ್ ಸಿಬ್ಬಂದಿ ಗೋಪಮ್ಮ ವರದಿ ವಾಚಿಸಿ ವರದಿ ಮೇಲೆ ಚರ್ಚೆ ನಡೆಸಿ ಅನುಮೋದನೆ ಮಾಡಲಾಯಿತು. ವಿವಿಧ ಇಲಾಖೆ ಅಧಿಕಾರಿಗಳು ಅವರವರ ಇಲಾಖೆಯ ಮಾಹಿತಿಯನ್ನು ನೀಡಿದರು ಅರಣ್ಯ ಇಲಾಖೆಯ ಮಾಹಿತಿಯನ್ನು ಅದಿಕಾರಿ ಚಂದ್ರು ನೀಡಿದಾಗ, ಅಪಾಯಕಾರಿ ಮರ ತೆರವು, ಡಿಮ್ದ್ ಫಾರೆಸ್ಟ್ ಸಮಸ್ಯೆ, ಹಲವು ವಿಚಾರ ಪ್ರಸ್ತಾಪ ಆಯಿತು.
ಕಂದಾಯ ಇಲಾಖೆ ಮಾಹಿತಿಯನ್ನು ನೀಡಲು ಪ್ರಭಾರ ಗ್ರಾಮ ಕರಣಿಕರು ಬಂದಾಗ ಗಣಪತಿ ಭಟ್ ನಮ್ಮ ಗ್ರಾಮ ಕರಣಿಕರಲ್ಲಿ ಸಂತತಿ ನಕ್ಷೆ ಬಗ್ಗೆ ಚರ್ಚೆ ಮಾಡಬೇಕಾಗಿದೆ. ಸಂತತಿ ನಕ್ಷೆ ನೀಡುವಲ್ಲಿ ಬಡವರಿಗೆ ಅನ್ಯಾಯ ಮಾಡಲಾಗುತ್ತಿದೆ ಈ ಬಗ್ಗೆ ಕ್ರಮ ಕೈಗೊಳ್ಳಿ ಎಂದರು. ಮಹಿಳಾ ಮತ್ತು ಮಕ್ಕಳ ಇಲಾಖೆಯ ಮಾಹಿತಿಯನ್ನು ಮೇಲ್ವಿಚಾರಕರು ನಿಡಿದಾಗ ಸಾರ್ವಜನಿಕರು , ಗ್ರಾಮದಲ್ಲಿ ನಡೆಯುತ್ತಿರುವ ಕೆಲವು ವಿಚಾರಗಳ ಬಗ್ಗೆ ಎಚ್ಚರ ವಹಿಸಿ ಜಾಗೃತಿ ಮೂಡಿಸಿ. ಅಲ್ಲದೆ ಪೊಲೀಸ್ ಇಲಾಖೆಯವರು ರಾತ್ರಿ ವೇಳೆಯಲ್ಲಿ ಕಳ್ಳತನ ಆಗು ಇನ್ನಿತರ ಅಕ್ರಮ ಚಟುವಟಿಕೆ ಬಗ್ಗೆ ಗಮನ ಹರಿಸುವಂತೆ, ಗ್ರಾಮಸ್ಥರು ಅಗ್ರಹಿಸಿದರು. ಬಹುತೇಕ ಚರ್ಚೆ ವಿದ್ಯುತ್ ಸಮಸ್ಯೆ ಬಗ್ಗೆ ನಡೆಯಿತು. ರಾತ್ರಿ ವಿದ್ಯುತ್ ಕಣ್ಣು ಮುಚ್ಚಾಳೆ, ವಿದ್ಯುತ್ ಸಮಸ್ಯೆ ಬಗ್ಗೆ ಮೇಸ್ಕಾಂ ಜೂನಿಯರ್ ಇಂಜಿನಿಯರ್ ಮೇಲೆ ಸಾರ್ವಜಕರು ಪ್ರಶ್ನೆಗಳ ಸುರಿ ಮಳೆ ಗೈದರು. ಪ್ರಮುಖ ವಾಗಿ ಟಿ. ಎಮ್. ಶಾಹಿದ್, ಗಣಪತಿ ಭಟ್, ಸೋಮಶೇಖರ್ ಕೊಇಂಗಾಜೆ, ಮಹಮ್ಮದ್ ಕುoಞ , ಕೇಶವ ಬಂಗ್ಲೆ ಗುಡ್ಡೆ, ಷಾಜಿ ಮಾದವನ್, ವಿದ್ಯುತ್ ಇಲಾಖೆಯ ನಿಸ್ಕ್ರೀಯತೆ ಬಗ್ಗೆ ಚರ್ಚೆ ಮಾಡಿದರೆ, ಸುಳ್ಯದ ಮೆಸ್ಕಾಂ ಇಲಾಖೆಯ ವಿದ್ಯುತ್ ಪ್ರಮುಖ ಟ್ರಾನ್ಸ್ ಫಾರ್ಮರ್, ಉಳ್ಳಾಲ ಕಡೆಗೆ ಸ್ವಿಫ್ಟ್ ಮಾಡಲಾಗಿದ್ದು ತಿಂಗಳುಗಳಿಂದ ಸಂಪಾಜೆ ಬಾಗಕ್ಕೆ ಕರೆಂಟ್ ಸರಿ ಇಲ್ಲ ಯಾಕೆ ಈ ರೀತಿ ಎಂದು ಗ್ರಾಮಸ್ಥರು ಪ್ರಶ್ನೆ ಮಾಡಿದಾಗ ಇಂಜಿನಿಯರ್ ಅಭಿಷೇಕ್ ಟ್ರಾನ್ಸ್ ಫಾರ್ಮರ್ ಕೊಂಡು ಹೋಗಿರುವ ಬಗ್ಗೆ ಒಪ್ಪಿಕೊಂಡರು,. ಸುಳ್ಯದಲ್ಲಿ ಸಮಸ್ಯೆ ಸರಿ ಪಡಿಸದಿರುವ ಬಗ್ಗೆ ರಾತ್ರಿ ವೇಳೆಯಲ್ಲಿ ವೈಎಂಕೆ ಬಳಿ ಕರೆಂಟ್, ಬಂದ್ ಮಾಡುವ ಬಗ್ಗೆ ಹಾಗೂ ಸಬ್ ಸ್ಟೇಷನ್ ಕಾಮಗಾರಿ ಫೇನಸಿಂಗ್ ಮಾಡದ ಬಗ್ಗೆ, ಟ್ರೀ ಕಟ್ಟಿಂಗ್ ಬಗ್ಗೆ, ಹಳೆಯದಾದ ವಿದ್ಯುತ್ ತಂತಿ ಬದಲಾವಣೆ ಮಾಡದ ಬಗ್ಗೆ ಚರ್ಚೆ ನಡೆದು ಸೋಮವಾರ ದೊಳಗೆ ವಿದ್ಯುತ್ ಟ್ರಾನ್ಸ್ ಫಾರ್ಮರ್ ಮರಳಿ ಪ್ರತಿಷ್ಠಾಪನೆ ಮಾಡಬೇಕು, ಸಂಪಾಜೆ ವಿದ್ಯುತ್ ಸಮಸ್ಯೆ ಸರಿ ಪಡಿಸದಿದ್ದಲ್ಲಿ ಸುಳ್ಯ ಮೆಸ್ಕಾಂ ಇಲಾಖೆಯ ಕಚೇರಿಗೆ ಮುತ್ತಿಗೆ ಹಾಕಲು ತೀರ್ಮಾನ ಮಾಡಲಾಯಿತು. ನಂತರ ಇತರ ಎಲ್ಲಾ ಇಲಾಖೆಯ ಬಗ್ಗೆ ಮಾಹಿತಿಯನ್ನು ಮುಂದುವರಿಸಿದರು, ಹಲವು ವರ್ಷಗಳಿಂದ ರಸ್ತೆ ಕಾಮಗಾರಿ ಬಾಕಿ ಇದ್ದ ರಸ್ತೆಗೆ ಕಾಂಕ್ರಿಟ್ ಬಾಗ್ಯ ಈ ಬಾರಿ ಲಭಿಸಿದೆ ನಾನು ಇಷ್ಟರ ವರೆಗೆ ಗ್ರಾಮ ಸಭೆಗೆ ಬಂದಿಲ್ಲ, ಈ ಬಾರಿ ನಾನು ಗ್ರಾಮ ಪಂಚಾಯತ್ ಸಭೆಗೆ ಗ್ರಾಮ ಪಂಚಾಯತ್ ಆಡಳಿತಕ್ಕೆ ಅಭಿನಂದನೆಗಳು ಸಲ್ಲಿಸಲು ಬಂದಿದ್ದೇನೆ ಎಂದು ಕೊಪ್ಪತಕಜೆ ರಸ್ತೆ ಪಾಲಾನುಭವಿಗಳೊಂದಿಗೆ ಸತ್ಯ ಕುಮಾರ್ ಭಟ್ ಆಗಮಿಸಿ ಅಭಿನಂದನೆ ಸಲ್ಲಿಸಿದರು ಈ ಸಂದ್ರಬ ಮಾತನಾಡಿದ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜಿ. ಕೆ. ಹಮೀದ್ ಗೂನಡ್ಕ, ಮತ್ತೆ ಅದೇ ರಸ್ತೆಗೆ 3 ಲಕ್ಷ ಮಿಸಲಿಟ್ಟಿದ್ದೇವೆ ಶೀಘ್ರ ಕಾಮಗಾರಿ ಮಾಡುತ್ತೇವೆ ಭರವಸೆ ನೀಡಿದರು, ಅಲ್ಲದೆ ಗ್ರಾಮಕ್ಕೆ ಜೆಜೆಮ್ ಕುಡಿಯುವ ನೀರಿನ ಯೋಜನೆಯಲ್ಲಿ 2.94 ಕೋಟಿ ಮಂಜೂರಾತಿ ಆಗಿದ್ದು ಶಂಕು ಸ್ಥಾಪನೆ ಆಗಿದೆ ಶೀಘ್ರ ಕಾಮಗಾರಿ ಆರಂಭಿಸಾಲಾಗುಹುದು ಹಾಗೂ ಇಂಗು ರಚನೆಗೆ 31 ಲಕ್ಷ ಮಂಜೂರಾತಿ ಆಗಿದೆ, ಘನ ತ್ಯಾಜ್ಯ ಘಟಕ ಕಟ್ಟಡ ರಚನೆಗೆ 15 ಲಕ್ಷ ಅಲ್ಲದೆ ಗಡಿಕಲ್ಲು ಅಂಗನವಾಡಿ ಕಟ್ಟಡ ಕಾಮಗಾರಿಗೆ ವಿಧಾನ ಪರಿಷತ್ ಸದಸ್ಯರಾದ ನಾಸಿರ್ ಅಹಮದ್ ಅನುದಾನದಲ್ಲಿ 5 ಲಕ್ಷ, ಕಡೆಪಾಲ ಕುಯಿಂತೋಡು ರಸ್ತೆಗೆ ಮಂಜುನಾಥ್ ಬಂಡಾರಿ ಅನುದಾನ ದಲ್ಲಿ 5 ಲಕ್ಷ, ಬೈಲೆ ಶಿರಾಡಿಗೆ ವಿಧಾನ ಪರಿಷತ್ ಸದಸ್ಯರಾದ ಹರೀಶ್ ಕುಮಾರ್ ಅನುದಾನ ದಲ್ಲಿ 3 ಲಕ್ಷ,, ವಿಧಾನ ಪರಿಷತ್ ಸದಸ್ಯರಾದ ಬಿ. ಕೆ. ಹರಿಪ್ರಸಾದ್ ಅನುದಾನ ದಲ್ಲಿ ದರ್ಕಾಸ್ ಗುಡ್ಡೆ ರಸ್ತೆಗೆ 5 ಲಕ್ಷ ಅನುದಾನ ಬಿ. ಎಮ್. ಪಾರೂಕ್ ಅನುದಾನ ದಲ್ಲಿ ದರ್ಕಾಸ್ ಅಂಗನವಾಡಿ ಹಾಗೂ ಅರೋಗ್ಯ ಸಹಾಯಕಿ ಕೇಂದ್ರದ ಆವರಣ ಗೋಡೆ ನಿರ್ಮಾಣ ಕ್ಕೆ 3 ಲಕ್ಷ ಅಲ್ಲದೆ ಗ್ರಾಮ ಪಂಚಾಯತ್ ವಿವಿಧ ಅನುದಾನ ದಲ್ಲಿ ಚಟ್ಟಕಲ್ಲು, ಬಂಗ್ಲೆ ಗುಡ್ಡೆ, ಕಡೆಪಾಲ ಪ ಜಾತಿ ಕಾಲನಿ ರಸ್ತೆ, ರಾಜರಾಂಪುರ ಕಾಲನಿ ರಸ್ತೆ, ಬಾಚಿಗದ್ದೆ ರಸ್ತೆ, ಕೈಪಡ್ಕ ಕೀಳಾರ್ ಮೂಲೆ ರಸ್ತೆ, ಕೊರಂಬಡ್ಕ ರಸ್ತೆ, ಗೂನಡ್ಕ ಬಳಿ ಕಾಲುಸಂಕ, ಕಿಂಡಿ ಆಣೆಕಟ್ಟು ಗಳಿಗೆ ಅನುದಾನ ಮಿಸಲಿಡ ಲಾಗಿದ್ದು ಕಾಮಗಾರಿ ಶೀಘ್ರ ಅನುಷ್ಠಾನಗೊಳ್ಳಲಿದೆ, ಅಧ್ಯಕ್ಷರು ಅನುದಾನ ನೀಡಿದ ಸಚಿವರು, ಶಾಸಕರು, ಜಿಲ್ಲಾ, ಆಗು ತಾಲೂಕು ಪಂಚಾಯತ್ ಅದಿಕಾರಿ ವರ್ಗದವರಿಗೂ ಅಭಿನಂದನೆ ಸಲ್ಲಿಸಿದರು ಹೆಚ್ಚಿನ ಅನುದಾನ ಕ್ಕೆ ಸ್ಥಳೀಯ ಶಾಸಕರು ಹಾಗೂ ಸಚಿವರಿಗೆ ಮನವಿ ಸಲ್ಲಿಸಲಾಗಿದ್ದು ದೊರಕುವ ವಿಸ್ವಾಸ ಇದೆ ಎಂದರು ಕಾಮಗಾರಿ ತರಿಸುವಲ್ಲಿ ವಿಧಾನ ಪರಿಷತ್ ಸದಸ್ಯರು ಗಳಾದ ನಾಸಿರ್ ಅಹಮದ್, ಬಿ. ಕೆ. ಹರಿಪ್ರಸಾದ್, ಪಾರುಕ್ ಸಹಕರಿಸಿದ ಟಿ. ಎಮ್.ಶಾಹಿದ್ ರವರಿಗೆ ವಿದಾನ ಪರಿಷತ್ ಸದಸ್ಯರುಗಳಾದ ಮಂಜುನಾಥ್ ಬಂಡಾರಿ, ಹರೀಶ್ ಕುಮಾರ್ ರವರಿಂದ ಅನುದಾನ ದೊರಕಿಸಿ ಕೊಟ್ಟ ಜಯರಾಮ್ ಪಿ. ಸಿ ಹಾಗೂ ಸೋಮಶೇಖರ್ ಕೊಇಂಗಾಜೆ ಹಾಗೂ ಪ್ರತಿಯಬ್ಬರಿಗೂ ಅಭಿನಂದನೆ ಸಲ್ಲಿಸಿದರು.
ಗ್ರಾಮ ಪಂಚಾಯತ್ ಗ್ರಂಥಾಲಯಕ್ಕೆಕಂಪ್ಯೂಟರ್ ನೀಡಿದ ಡಾ. ಲೀಲಾದರ್, ಹಾಗೂ ಪುಸ್ತಕ ಗೂಡು ರಚಿಸಲು ಸಹಕರಿಸಿದ ವಿಜಯ ನಿಡಿಂಜಿ ಯವರಿಗೆ ಗ್ರಾಮ ಸಭೆಯಲ್ಲಿ ಅಧ್ಯಕ್ಷರು ಅಭಿನಂದನೆ ಸಲ್ಲಿಸಿದರು.
ಸೋಮಶೇಖರ್ ಕೊಇಂಗಾಜೆ ವಂದಿಸಿದರು ಕಾಂತಿ ಬಿ. ಎಸ್. ಕಾರ್ಯಕ್ರಮ ನಿರೂಪಿಸಿದರು, ಕಡೆಪಾಲ ಅಂಗನವಾಡಿ ಕಾರ್ಯಕರ್ತೆ ಪುಷ್ಪ ಪ್ರಾರ್ಥನೆ ಮಾಡಿದರು.

Sponsors

Related Articles

Back to top button