ಬಂಟ್ವಾಳ ತಾಲೂಕು ಮಟ್ಟದ ಪ್ರತಿಭಾಕಾರಂಜಿಯಲ್ಲಿ ಕಲ್ಲಡ್ಕ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಗೆ ಹಲವು ಬಹುಮಾನ….
ಬಂಟ್ವಾಳ: ಅ.25 ರಂದು ಪಾಣೆಮಂಗಳೂರು ಶಾರದಾ ಪೌಢಶಾಲೆಯಲ್ಲಿ ನಡೆದ ತಾಲೂಕು ಮಟ್ಟದ ಪ್ರತಿಭಾ ಕಾರಂಜಿಯಲ್ಲಿ , ಕಲ್ಲಡ್ಕ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ 7 ಪ್ರಥಮ, 1 ದ್ವಿತೀಯ ಹಾಗೂ 4 ತೃತೀಯ ಸ್ಥಾನ ಪಡೆದು ಸಮಗ್ರ ಪ್ರಶಸ್ತಿಯನ್ನು ಪಡೆದು ಶಾಲೆಗೆ ಕೀರ್ತಿಯನ್ನು ತಂದಿದ್ದಾರೆ.
ಹಿರಿಯ ವಿಭಾಗದಲ್ಲಿ 7ನೇ ತರಗತಿಯ ಚೇತನಾ, ಮರಾಠಿ ಕಂಠಪಾಠದಲ್ಲಿ ಪ್ರಥಮ, ಅಕ್ಷತಾ ಲಕ್ಷ್ಮೀ, ಧಾರ್ಮಿಕ ಪಠಣ ಸಂಸ್ಕೃತದಲ್ಲಿ ತೃತೀಯ, ಸಂಸ್ಕೃತ ಕಂಠಪಾಠದಲ್ಲಿ – ದೀಕ್ಷಿತ್ ತೃತೀಯ, 6ನೇ ತರಗತಿಯ ವಾಸವಿ ಕೆ.ಸಿ- ಕನ್ನಡ ಕಂಠಪಾಠದಲ್ಲಿ ಪ್ರಥಮ, ಶ್ರದ್ಧಾ – ತುಳು ಕಂಠಪಾಠದಲ್ಲಿ ದ್ವಿತೀಯ ಹಾಗೂ ಭಕ್ತಿಗೀತೆ ಸ್ಪರ್ಧೆಯಲ್ಲಿ ಆದಿಶ್ರೀ ತೃತೀಯ ಸ್ಥಾನ ಪಡೆದಿರುತ್ತಾರೆ. ಸಾಮೂಹಿಕ ವಿಭಾಗದ ಸ್ಪರ್ಧೆಗಳಾದ ದೇಶಭಕ್ತಿಗೀತೆ, ರಸಪ್ರಶ್ನೆ ಹಾಗೂ ಜನಪದ ನೃತ್ಯದಲ್ಲಿ ಪ್ರಥಮ ಸ್ಥಾನ ಪಡೆದಿರುತ್ತಾರೆ
ಕಿರಿಯ ವಿಭಾಗದಲ್ಲಿ ತಮಿಳು ಕಂಠಪಾಠ ಸ್ಪರ್ಧೆಯಲ್ಲಿ 3ನೇ ತರಗತಿಯ ರಮ್ಯ ಪ್ರಥಮ ಸ್ಥಾನ, ಧಾರ್ಮಿಕ ಪಠಣ ಸಂಸ್ಕೃತದಲ್ಲಿ 4ನೇ ತರಗತಿಯ ಶ್ರೀವತ್ಸ, ತೃತೀಯ ಸ್ಥಾನ ಪಡೆದಿರುತ್ತಾರೆ ಮತ್ತು ರಸಪ್ರಶ್ನೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿರುತ್ತಾರೆ.
ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳು ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ. ಇವರಿಗೆ ಶಾಲಾ ಆಡಳಿತ ಮಂಡಳಿ, ಮುಖ್ಯೋಪಾಧ್ಯಾಯರು ಹಾಗೂ ಅಧ್ಯಾಪಕ ವೃಂದದವರು ಅಭಿನಂದನೆ ಸಲ್ಲಿಸಿದರು.