ಮೀಫ್ ಸಂಸ್ಥೆಗೆ ರಾಜ್ಯೋತ್ಸವ ರಾಜ್ಯ ಪ್ರಶಸ್ತಿ – ಪದಾಧಿಕಾರಿಗಳಿಗೆ ಸನ್ಮಾನ…

ಪುತ್ತೂರು: ಕರ್ನಾಟಕ ರಾಜ್ಯೋತ್ಸವ ರಾಜ್ಯ ಪ್ರಶಸ್ತಿ ಪುರಸ್ಕೃತ ದ. ಕ. ಮತ್ತು ಉಡುಪಿ ಜಿಲ್ಲೆಗಳ ಮುಸ್ಲಿಂ ಶಿಕ್ಷಣ ಸಂಸ್ಥೆಗಳ ಒಕ್ಕೂಟ (ಮೀಫ್ ) ಸಂಸ್ಥೆಗೆ ಮೀಫ್ ನ ಸದಸ್ಯ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ಪುತ್ತೂರು ಸಾಲ್ಮರ ರ್ಮೌಂಟನ್ ವ್ಯೂ ಸಭಾಂಗಣದಲ್ಲಿ ಆಡಳಿತ ಮಂಡಳಿ ವತಿಯಿಂದ ಮೀಫ್ ಅಧ್ಯಕ್ಷ ಮೂಸಬ್ಬ. ಪಿ. ಬ್ಯಾರಿ ಮತ್ತು ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು.
ಶಾಲಾ ಆಡಳಿತ ಮಂಡಳಿ ಪ್ರಧಾನ ಕಾರ್ಯದರ್ಶಿ ಯು ಮಹಮ್ಮದ್ ಹಾಜಿ, ಸಂಚಾಲಕ ಮಹಮ್ಮದ್ ಸಾಬ್, ಕಾರ್ಯದರ್ಶಿ ಅಬ್ದುಲ್ ರೆಹಮಾನ್ ಆಜಾದ್,ಟ್ರಸ್ಟಿಗಳಾದ ಅಬ್ದುಲ್ಲ ಹಾಜಿ, ರಕ್ಷಕ -ಶಿಕ್ಷಕ ಸಂಘ ದ ಅಧ್ಯಕ್ಷ ಉಸ್ಮಾನ್,ಶಾಲಾ ಶಿಕ್ಷಕರುಗಳಾದ ಅಶ್ರಫ್, ಜಯರಾಮ್, ರವೂಫ್, ಮುಖ್ಯೊಪಾಧ್ಯಾಯಿನಿ ಮೋಹನಾಂಗಿ, ಶರೀಅತ್ ಕಾಲೇಜು ಮುಖ್ಯಸ್ಥ ರಾದ ಕೆಎಂಎ ಕೊಡುoಗಾಯಿ, ಮೀಫ್ ಉಪಾಧ್ಯಕ್ಷ ಕೆ. ಎಂ. ಮುಸ್ತಫ, ಪ್ರದಾನ ಕಾರ್ಯದರ್ಶಿ ರಿಯಾಜ್ ಕಣ್ಣೂರ್, ಪದಾಧಿಕಾರಿಗಳಾದ ಪರ್ವೇಜ್ ಅಲಿ, ಶಾರಿಕ್ ಕುಂಜತ್ತಬೈಲು, ಶೇಕ್ ರಹ್ಮತುಲ್ಲ ಬುರೂಜ್, ಹೈದರ್ ಮರ್ದಾಳ, ಅಬ್ದುಲ್ ರಝಕ್ ಗೊಳ್ತಮಜಲು, ಹೈದರ್ ಅನುಗ್ರಹ ಮೊದಲಾದವರು ಉಪಸ್ಥಿತರಿದ್ದರು.

Sponsors

Related Articles

Back to top button