ಬಿ.ಸಿ.ರೋಡಿನಲ್ಲಿ ಸರಣಿ ತಾಳಮದ್ದಳೆ ಉದ್ಘಾಟನೆ…
ಬಂಟ್ವಾಳ: ಸಮಾಜದಲ್ಲಿ ನೈತಿಕ ಮೌಲ್ಯಗಳನ್ನು ಹಾಗೂ ಭಾರತದ ಸಂಸ್ಕೃತಿಯನ್ನು ವೃದ್ಧಿಸಲು ಯಕ್ಷಗಾನ ತಾಳಮದ್ದಲೆ ಸಹಕಾರಿಯಾಗಿದೆ ಎಂದು ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನ ಇದರ ಗೌರವ ಅಧ್ಯಕ್ಷ ಪ್ರೊ. ಎ.ವಿ. ನಾರಾಯಣ ಹೇಳಿದರು.
ಅವರು ಬಿ.ಸಿ.ರೋಡಿನ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದ ವಠಾರದಲ್ಲಿ ಮೇ.9 ರಿಂದ 20 ರವರೆಗೆ ನಡೆಯಲಿರುವ ದ್ವಾದಶ ಯಕ್ಷಾಂಜಲಿ ಸರಣಿ ತಾಳಮದ್ದಳೆ ಕಾರ್ಯಕ್ರಮ ರಾಮಾಯಣ ದರ್ಶನವನ್ನು ಉದ್ಘಾಟಿಸಿ ಮಾತನಾಡಿದರು. ಹಿರಿಯರ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಕೈಯೂರು ನಾರಾಯಣ ಭಟ್ , ಬಂಟ್ವಾಳ ನೇತ್ರಾವತಿ ಸಂಗಮ ಕಾರ್ಯದರ್ಶಿ ಸತ್ಯನಾರಾಯಣ ರಾವ್ ,ಅನ್ನಪೂರ್ಣೇಶ್ವರಿ ದೇವಸ್ಥಾನ ಪ್ರಧಾನ ಅರ್ಚಕ ಎಮ್. ಈಶ್ವರ ಭಟ್, ಶಂಕರ ಸೇವಾ ಪ್ರತಿಷ್ಠಾನದ ಕೃಷ್ಣ ಶರ್ಮ, ವಿಶ್ವಭಾರತಿ ಯಕ್ಷ ಸಂಜೀವಿನಿಯ ಪ್ರಶಾಂತ್ ಕುಮಾರ್ , ಕಾಂತಾಡಿ ಗುತ್ತು ಸೀತಾರಾಮ ಶೆಟ್ಟಿ , ರಾಜಮಣಿ ರಾಮಕುಂಜ, ಭಾಸ್ಕರ ಬಾರ್ಯ ಪುತ್ತೂರು ಮೊದಲಾದವರು ಸಮಾರಂಭದಲ್ಲಿ ಇದ್ದರು. ಪ್ರತಿದಿನ ಸಂಜೆ 4 ರಿಂದ ಪ್ರಸಿದ್ಧ ಕಲಾವಿದರ ಕೂಟದಿಂದ ಯಕ್ಷಗಾನ ತಾಳಮದ್ದಳೆ ಕೂಟ ನಡೆಯಲಿದೆ. ಮೇ. 15 ರಂದು ಶಂಕರ ಜಯಂತಿ ಆಚರಣೆ ನಡೆಯಲಿದೆ.