ಉಪ್ಪಿನಂಗಡಿಯಲ್ಲಿ ಟ್ಯಾಂಕರ್‌ನಿಂದ ಗ್ಯಾಸ್ ಸೋರಿಕೆ…..
ಉಪ್ಪಿನಂಗಡಿ: ಅನಿಲ ಟ್ಯಾಂಕರ್ ಒಂದರ ಮೇಲ್ಭಾಗದ ವಾಲ್ವ್ ಮುಚ್ಚಳ ಏಕಾಏಕಿ ತೆರೆದು ಭಾರೀ ಪ್ರಮಾಣದಲ್ಲಿ ಅನಿಲ ಸೋರಿಕೆಯಾಗಿ ಸ್ಥಳದಲ್ಲಿ ಆತಂಕ ಮೂಡಿಸಿದ ಘಟನೆ ಉಪ್ಪಿನಂಗಡಿ ಬಳಿಯ ಕರ್ವೇಲ್ ನಲ್ಲಿ ಸೋಮವಾರ ಬೆಳಗ್ಗೆ ನಡೆದಿದೆ.
ಮಂಗಳೂರಿನಿಂದ ಬೆಂಗಳೂರಿಗೆ ಅಡುಗೆ ಅನಿಲ ಸಾಗಿಸುತ್ತಿದ್ದ ಟ್ಯಾಂಕರ್ ಬೆಳಿಗ್ಗೆ 7.30ರ ಸುಮಾರಿಗೆ ಪೆರ್ಣೆ ಗ್ರಾಮದ ಕರ್ವೇಲು ಸಮೀಪದ ಚಲಿಸುತ್ತಿದ್ದ ವೇಳೆ ಏಕಾಎಕಿ ಮೇಲ್ಭಾಗದ ಮುಚ್ಚಳ ತೆರೆದುಕೊಂಡಿತ್ತು. ಇದರಿಂದ ಭಾರಿ ಪ್ರಮಾಣದಲ್ಲಿ ಅಡುಗೆ ಅನಿಲ ಹೊರಹೋಗಿದ್ದು ಸ್ಥಳದಲ್ಲಿ ಆತಂಕ ಸೃಷ್ಠಿಯಾಗಿತ್ತು.
ಕೂಡಲೇ ಕರ್ವೇಲ್ ಮಸೀದಿಯಿಂದ ಮೈಕ್ ಮೂಲಕ ಸುತ್ತ ಮುತ್ತಲಿನ ಮನೆಯವರಿಗೆ ಬೆಂಕಿ ಉರಿಸದಂತೆ ಮುನ್ನೆಚ್ಚರಿಕೆ ನೀಡಲಾಯಿತು. ಅಲ್ಲದೆ ಪರಿಸರದ ಮನೆಯವರನ್ನು ಸ್ಥಳಾಂತರಗೊಳಿಸಲಾಯಿತು. ತಕ್ಷಣ ಇಕ್ಕೆಲಗಳಲ್ಲಿ ರಾಷ್ಟ್ರೀಯ ಹೆದ್ದಾರಿಯನ್ನು ಬಂದ್ ಮಾಡಲಾಯಿತು. ಈ ಮೂಲಕ ನಡೆಯಲಿದ್ದ ಭಾರಿ ಅನಾಹುತವನ್ನು ತಪ್ಪಿಸಲಾಯಿತು.
ಮಾಹಿತಿ ತಿಳಿದ ತಕ್ಷಣ ಹೆಚ್ ಪಿಸಿಎಲ್ ನ ತುರ್ತು ಸೇವೆ ಸಿಬ್ಬಂಧಿ ಸ್ಥಳಕ್ಕೆ ಆಗಮಿಸಿ ಟ್ಯಾಂಕರ್ ನ ಮುಚ್ಚಳ ಮುಚ್ಚಿ ಗ್ಯಾಸ್ ಸೋರಿಕೆಯನ್ನು ನಿಲ್ಲಿಸಿದರು.