ಬಂಟ್ವಾಳದ ವಿವಿಧೆಡೆ ಕಿಟ್ ವಿತರಣೆ…
ಬಂಟ್ವಾಳ: ಕೊರೋನಾ ಮಹಾಮಾರಿಯ ತೊಂದರೆಯನ್ನು ಗಮನದಲ್ಲಿಟ್ಟುಕೊಂಡು ಮೇ.5 ಮತ್ತು 10 ರಂದು ನಾಟಿ, ಕೇದಿಗೆ, ನಿನ್ನಿಪಡ್ಪು ಪರಿಸರದ ಸುಮಾರು 180 ಮನೆಗಳಿಗೆ 10 ಕೆಜಿ ಅಕ್ಕಿ, ಅರ್ಧ ಕೆಜಿ ಉಪ್ಪಿನಕಾಯಿ, ಒಂದು ಕೆಜಿ ಸಕ್ಕರೆ ಒಳಗೊಂಡ ಕಿಟ್ಟನ್ನು ನೀಡಲಾಯಿತು.
ಇದಕ್ಕೆ ಜಗನ್ನಾಥ ಬಂಗೇರ ನಿರ್ಮಲ್, ಜಿನರಾಜ್ ಕೋಟ್ಯಾನ್ ಮೈರಡ್ಕ, ಗ್ರಾಮ ಪಂಚಾಯತ್ ಸದಸ್ಯೆ ತ್ರಿವೇಣಿ ಮೋನಪ್ಪ, ನಾರಾಯಣ ಕೆದಿಗೆ ಸರಸ್ವತಿ ಶಿಶು ಮಂದಿರ ಕೊಪ್ಪಲಕೋಡಿ ಹಾಗೂ ಸ್ಥಳೀಯ ಬಿಜೆಪಿ ಕಾರ್ಯಕರ್ತರು ಸಹಕರಿಸಿದರು. ಶ್ರೀ ಕೋದಂಡರಾಮ ದೇವಸ್ಥಾನದ ವಠಾರದಲ್ಲಿ ವರದರಾಜ್ ನಿರ್ಮಲ್ ಇದಕ್ಕೆ ಚಾಲನೆ ಯನ್ನು ನೀಡಿದರು. ಪುರುಷೋತ್ತಮ್ ಬಂಗೇರ ನಾಟಿ, ಕಮಲಾಕ್ಷ ಶಾಂತಿಲ, ನಾರಾಯಣ ದರ್ಖಾಸ್ ಹಾಗೂ ಸ್ಥಳೀಯ ಕಾರ್ಯಕರ್ತರು ಉಪಸ್ಥಿತರಿದ್ದರು. ನಂತರ ಕಿಟ್ಟಿನ ವಿತರಣೆ ಸಂದರ್ಭದಲ್ಲಿ ಶಾಸಕ ರಾಜೇಶ್ ನಾಯಕ್ ಉಳಿಪ್ಪಾಡಿಗುತ್ತು, ಬಿಜೆಪಿ ಕ್ಷೇತ್ರಾಧ್ಯಕ್ಷ ದೇವಪ್ಪ ಪೂಜಾರಿ ಬಾಳಿಕೆ ಭೇಟಿ ನೀಡಿದರು.