ಡಿ.8ರಂದು ನಡೆಯುವ “ನಮ್ಮ ಬಿರುವೆರ್” ಐಕ್ಯತಾ ಸಮಾವೇಶದ ಆಮಂತ್ರಣ ಪತ್ರಿಕೆ ಬಿಡುಗಡೆ ….

ಬಂಟ್ವಾಳ: ಡಿ. 8ರಂದು ಬಿ.ಸಿ.ರೋಡಿನ ಸ್ಪರ್ಶಾ ಕಲಾಮಂದಿರದಲ್ಲಿ ಬಿಲ್ಲವ ಕಣ್ಮಣಿಗಳ ಅಭಿನಂದನಾ ಸಮಿತಿ ಆಶ್ರಯದಲ್ಲಿ ಬಂಟ್ವಾಳ ತಾಲೂಕು ಬಿಲ್ಲವ ಸಂಘಗಳ ಹಾಗೂ ಯುವವಾಹಿನಿ ಬಂಟ್ವಾಳ ಮತ್ತು ಮಾಣಿ ಘಟಕ ಸಹಯೋಗದೊಂದಿಗೆ ನಡೆಯಲಿರುವ “ನಮ್ಮ ಬಿರುವೆರ್” ಐಕ್ಯತಾ ಸಮಾವೇಶದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಸಜೀಪ ಬ್ರಹ್ಮಶ್ರೀ ನಾರಾಯಣ ಸಭಾ ಭವನದಲ್ಲಿ ನಡೆಯಿತು.
ಸಮಿತಿಯ ಗೌರವಾಧ್ಯಕ್ಷರಾದ ಎ.ರುಕ್ಮಯ ಪೂಜಾರಿ, ಮಾಯಿಲಪ್ಪ ಸಾಲ್ಯಾನ್, ಸಂಜೀವ ಪೂಜಾರಿ ಜಂಟಿಯಾಗಿ ಅಮಂತ್ರಣ ಪತ್ರಿಕೆಯ ಬಿಡುಗಡೆ ಮಾಡಿದರು.
ಬಳಿಕ ಮಾಜಿ ಶಾಸಕ ರುಕ್ಮಯ ಪೂಜಾರಿ ಮಾತನಾಡಿ, ಅಂದು ಬೆಳಿಗ್ಗೆ 8.30ಕ್ಕೆ ಬಿ.ಸಿ.ರೋಡಿನ ನಾರಾಯಣಗುರು ಮಂದಿರದಲ್ಲಿ ಗುರುಪೂಜೆ, ಸ್ಪರ್ಶ ಕಲಾಮಂದಿರದವರೆಗೆ ಚೆಂಡೆ ವಾದ್ಯದೊಂದಿಗೆ ಸ್ವಾಮೀಜಿಗಳಿಗೆ ಮತ್ತು ಅತಿಥಿ ಗಣ್ಯರಿಗೆ ಪೂರ್ಣಕುಂಭ ಸ್ವಾಗತ ನಡೆಯಲಿದೆ. ವಿಶೇಷ ಅಕರ್ಷಣೆಯಾಗಿ ಚಿತ್ರ ನಟ ನಟಿಯರು, ಯಕ್ಷಗಾನ ಕಲಾವಿದರು, ಬಾಲನಟಿಯರು ಭಾಗಹಿಸುವರು. ಮಧ್ಯಾಹ್ನ 2 ಗಂಟೆಯಿಂದ “ನಾರಾಯಣಗುರು” ತುಳು ಚಲನಚಿತ್ರ ಪ್ರದರ್ಶನ ನಡೆಯಲಿದೆ ಎಂದು ತಿಳಿಸಿದರು.
ಗೌರವಾಧ್ಯಕ್ಷ ಸಂಜೀವ ಪೂಜಾರಿ ಮಾತನಾಡಿ, ಸಾಮೂಹಿಕ ನಾಯಕತ್ವದಿಂದ ಮಾತ್ರ ಕಾರ್ಯಕ್ರಮ ಯಶಸ್ವಿಯಾಗಲು ಸಾಧ್ಯ ಎಂದರು. ಯಶವಂತ ದೇರಾಜೆ ಕಾರ್ಯಕ್ರಮದ ಅಧ್ಯಕ್ಷ ತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಗೌರವಾಧ್ಯಕ್ಷ ಮಾಯಿಲಪ್ಪ ಸಾಲ್ಯಾನ್, ಉಪಾಧ್ಯಕ್ಷರಾದ ಜಯಂತಿ ಪೂಜಾರಿ, ಚೆನ್ನಪ್ಪ ಕೋಟ್ಯಾನ್, ರಾಜೇಶ್ ಬಾಳೆಕಲ್ಲು, ಕಾರ್ಯದರ್ಶಿ ಜಗದೀಶ್ ಕೊಯಿಲ, ಸಮಿತಿ ಹಾಗೂ ವಿವಿಧ ವಲಯದ ಪ್ರಮುಖರಾದ ಯಶವಂತ ಪೆÇಳಲಿ, ಬೇಬಿಕುಂದರ್, ಮೋನಪ್ಪ ದೇವಸ್ಯ, ಪುರುಷ ಸಾಲಿಯಾನ್, ವೆಂಕಪ್ಪ ಪೂಜಾರಿ, ಇಂದ್ರೇಶ್, ಸತೀಶ್ ಪೂಜಾರಿ, ಶ್ರೀಧರ ಅಮೀನ್, ಅನಂದ ಸಾಲಿಯಾನ್, ಶಾರದಾ ಎಂ, ಪ್ರೇಮನಾಥ ಕೆ, ಸುಂದರ ಪೂಜಾರಿ ಬೋಳಂಗಡಿ, ಲೋಕೇಶ್ ಪೂಜಾರಿ, ಜಯಶಂಕರ್ ಕಾನ್ಸಾಲೆ, ರಮೇಶ್ ಮುಜಲ, ರೋಶನ್ ಅಮೀನ್, ಕೃಷ್ಣಪ್ಪ ಪೂಜಾರಿ ಕೇಪುಲಕೋಡಿ, ರಮೇಶ್ ಹೊಸಕಟ್ಟ, ಗಣೇಶ್ ಪೂಜಾರಿ ಪೂಂಜರಕೋಡಿ, ಪ್ರವೀಣ್ ಪೂಜಾರಿ, ಸೀತಾರಾಮ್ ಶಾಂತಿ, ಕೊರಗಪ್ಪ ಪೂಜಾರಿ ಕೊಯಿಲ, ಸುಂದರ ಪೂಜಾರಿ ಬೋಳಿಯಾರ್, ಭವಾನಿ ಎನ್ ಅಮೀನ್, ಸುಜಾತಮೋಹನ್ ದಾಸ್ ಪೂಜಾರಿ ಬೊಳ್ಳಾಯಿ ಮತ್ತಿತರರು ಉಪಸ್ಥಿತರಿದ್ದರು. ಜಗದೀಶ್ ಕೊಯಿಲ ಸ್ವಾಗತಿಸಿ, ಲೋಕೇಶ್ ಸುವರ್ಣ ಅಲೆತ್ತೂರು ವಂದಿಸಿದರು. ಶ್ರೀಧರ್ ಅಮೀನ್ ಕಾರ್ಯಕ್ರಮ ನಿರೂಪಿಸಿದರು.

Sponsors

Related Articles

Leave a Reply

Your email address will not be published. Required fields are marked *

Back to top button