ಸುಜೀರು -75ನೇ ವರ್ಷದ ಏಕಾಹ ಭಜನಾ ಮಹೋತ್ಸವ ಹಾಗೂ ಶತರುದ್ರಯಾಗ, ಧಾರ್ಮಿಕ ಸಭೆ…

ಹಿಂದೂ ಧರ್ಮದ ಮರ್ಮ ಜಗತ್ತಿಗೆ ದಾರಿ ದೀಪ- ಬ್ರಹ್ಮಶ್ರೀ ಕುಂಟಾರು ರವೀಶ್ ತಂತ್ರಿ...

ಬಂಟ್ವಾಳ :ಭಾರತವು ಧರ್ಮದಿಂದ ಗುರುತಿಸಲ್ಪಟ್ಟ ರಾಷ್ಟ್ರ. ಹಿಂದೂ ಧರ್ಮವು ಆಧ್ಯಾತ್ಮಿಕ ಶಕ್ತಿಯ ನೆಲೆ. ಧರ್ಮದ ಆಚಾರ ವಿಚಾರಗಳಿಗೆ ನಮ್ಮಲ್ಲಿ ಉತ್ತರವಿದೆ.ಜಗತ್ತಿಗೆ ಗುರುವಿನ ಸ್ಥಾನದಲ್ಲಿ ಅಲಂಕರಿಸುವ ಶಕ್ತಿ ಭಾರತದ ಪುಣ್ಯ ಮಣ್ಣಿಗಿದೆ. ಹಿಂದೂ ಧರ್ಮದ ತತ್ವ ಸಿದ್ಧಾಂತಗಳು ಜಗತ್ತಿಗೆ ದಾರಿ ದೀಪವಾಗಿವೆ ಎಂದು ಬ್ರಹ್ಮಶ್ರೀ ಕುಂಟಾರು ರವೀಶ್ ತಂತ್ರಿ ಹೇಳಿದರು.
ಅವರು ಶ್ರೀರಾಮ ವೈದ್ಯನಾಥ ಭಜನಾ ಮಂದಿರ ಸುಜೀರು ಇದರ 75ನೇ ವರ್ಷದ ಏಕಾಹ ಭಜನಾ ಮಹೋತ್ಸವ ಹಾಗೂ ಲೋಕ ಕಲ್ಯಾಣಾರ್ಥ ಶತ ರುದ್ರಯಾಗದ ಪ್ರಯುಕ್ತ ಜ.12 ರಂದು ನಡೆದ ಧಾರ್ಮಿಕ ಸಭೆಯಲ್ಲಿ ಮಾತನಾಡಿದರು.
ಶ್ರೀರಾಮನ ಕಪಿ ಸೇನೆಯಂತೆ ಯುವ ಭಕ್ತ ಸಮೂಹ ಸಮಾಜದಲ್ಲಿ ಸದಾ ಜಾಗೃತವಾಗಿರಬೇಕು. ಸಮಾಜಕ್ಕೆ ಒಳಿತು ಮಾಡುವ ಕೆಲಸ ನಿತ್ಯ ನಿರಂತರ ಸಾಗಲಿ. ಮೃತ್ಯುವನ್ನು ಜಯಿಸುವ ರುದ್ರಯಾಗ ಎಲ್ಲರಿಗೂ ಕಲ್ಯಾಣವನ್ನುಟು ಮಾಡಲಿ. ಶ್ರೀ ರಾಮನ ಆದರ್ಶ ಮಣ್ಣಿನ ಸಂಸ್ಕೃತಿ ಪರಂಪರೆಯನ್ನು ಅರಿತು ಬದುಕಿ ಸಮಾಜಕ್ಕೆ ಮಾದರಿಯಾಗುವ ಪವಿತ್ರ ಭೂಮಿ ಇದಾಗಲಿ ಎಂದು ಶುಭಹಾರೈಸಿದರು.
ಮುಖ್ಯ ಅತಿಥಿ ಮಾಜಿ ಗವರ್ನರ್ ರೋಟರಿ ಜಿಲ್ಲೆ, ಪ್ರಕಾಶ್ ಕಾರಂತ ಮಾತನಾಡಿ,
ಯಾಗಗಳಿಂದ ದೇಹ ಮನಸ್ಸು ಪರಿಸರ ಶುದ್ಧಿಯಾಗಿ ಭಕ್ತರ ಸಕಾರತ್ಮಕ ಬೆಳವಣಿಗೆ ಸಾಧ್ಯ. ಧಾರ್ಮಿಕ ಸೇವೆಯೊಂದಿಗೆ ಸಾಮಾಜಿಕ ಶೈಕ್ಷಣಿಕ ಆರೋಗ್ಯ ಕಾರ್ಯಗಳು ನಿರಂತರ ನಡೆಯಲಿ ಎಂದು ಆಶಯ ವ್ಯಕ್ತಪಡಿಸಿದರು.
ಸುಜೀರು ಗುತ್ತಿನ ಯಜಮಾನ ರಾಮಕೃಷ್ಣ ಚೌಟ‌ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ರುದ್ರಯಾಗದಿಂದ ಸರ್ವರಿಗೂ ಸುಖ ಶಾಂತಿ ಸಿಗಲಿ. ಜನರ ಪ್ರಾಮಾಣಿಕ ಪರಿಶ್ರಮ ಹಾಗೂ ಒಗ್ಗಟ್ಟಿನಿಂದ ದೈವ ದೇವರು ಪ್ರಸನ್ನರಾಗಿ ಮುಂದಿನ ದಿನಗಲ್ಲಿ ಹೆಚ್ಚಿನ ಧಾರ್ಮಿಕ ಸಾಮಾಜಿಕ ಕಾರ್ಯ ಮಾಡಲು ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದರು.
ಅತಿಥಿ ಮೂಲ್ಯರ ಯಾನೆ ಕುಲಾಲರ ಮಾತೃ ಸಂಘ ದ. ಕ ಇದರ ಅಧ್ಯಕ್ಷ ಮಯೂರ್ ಉಳ್ಳಾಲ್ ಶುಭ ಹಾರೈಸಿದರು.ರವೀಂದ್ರ ಕಂಬಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ಭಜನಾ ಮಂದಿರದ ಅಧ್ಯಕ್ಷ ಚಂದ್ರಶೇಖರ ಗಾಂಭೀರ ಸುಜೀರುಗುತ್ತು, ಮಹೋತ್ಸವ ಸಮಿತಿ ಅಧ್ಯಕ್ಷ ಐತ್ತಪ್ಪ ಆಳ್ವ ಸುಜೀರುಗುತ್ತು , ಶ್ರೀ ಅರಸು ವೈದ್ಯನಾಥ ದೈವದ ಪಾತ್ರಿ ಮೋನಪ್ಪ ಪೂಜಾರಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಸಹಕಾರಿ ರತ್ನ ಪ್ರಶಸ್ತಿ ಪುರಸ್ಕೃತ ರವೀಂದ್ರ ಕಂಬಳಿ ಸುಜೀರುಗುತ್ತು ಇವರನ್ನು ಅಭಿನಂದಿಸಲಾಯಿತು.ಪ್ರಧಾನ ಕಾರ್ಯದರ್ಶಿ ಪ್ರವೀಣ್ ಕುಮಾರ್ ಶೆಟ್ಟಿ ಸುಜೀರು ಸ್ವಾಗತಿಸಿ,ಕೋಶಾಧಿಕಾರಿ ಪ್ರಮೋದ್ ಕುಮಾರ್ ಸುಜೀರು ಧನ್ಯವಾದವಿತ್ತರು, ಉಮೇಶ್ ಕೋಟ್ಯಾನ್ ವಾಮದಪದವು ಕಾರ್ಯಕ್ರಮ ನಿರೂಪಿಸಿದರು,
ಬೆಳಿಗ್ಗೆ ನವಗ್ರಹ ಸಹಿತ ರುದ್ರಯಾಗ , ಮಧ್ಯಾಹ್ನ ಯಾಗದ ಪೂರ್ಣಾಹುತಿ, ಮಹಾಪೂಜೆ , ಅನ್ನಸಂತರ್ಪಣೆ ನಡೆಯಿತು. ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.

whatsapp image 2025 01 13 at 12.59.08 pm

Sponsors

Related Articles

Back to top button