ಕವಿಗಳು ಸಾಹಿತ್ಯದ ವಿವಿಧ ಪ್ರಕಾರಗಳನ್ನು ಓದುವುದರೊಂದಿಗೆ ಬರೆಯುವುದನ್ನು ಅಭ್ಯಸಿಸಬೇಕು- ಶಾಂತಾ ಪುತ್ತೂರು…

ಮಂಗಳೂರು:ಕುವೆಂಪುರವರ ಕೃತಿಗಳಲ್ಲಿ ಪರಿಸರ ಸೌಂದರ್ಯ ಕಾಣುತ್ತದೆ. ಹಾಗೆಯೇ ಪರಿಸರ ನಮ್ಮ ಕವನಗಳಗೆ ಸ್ಪೂರ್ತಿ ಯಾಗಬೇಕು. ಕುವೆಂಪುರವರು ಕಾದಂಬರಿಗಳು, ಕವನ ಸಂಕಲನ , ವಿಮರ್ಶಾ ಸಂಕಲನ ,ಮಕ್ಕಳ ಪುಸ್ತಕಗಳು, ನಾಟಕಗಳು, ಆತ್ಮಕಥನ, ಶ್ರೀ ರಾಮಾಯಣ ದರ್ಶನಂ ಹೀಗೆ ಸಾಹಿತ್ಯದ ವಿವಿಧ ಪ್ರಕಾರಗಳನ್ನು ಬರೆಯುವುದರ ಮೂಲಕ ಕನ್ನಡ ಸಾಹಿತ್ಯ ಸಂಪತ್ತನ್ನು ಸಮೃದ್ಧಿ ಗೊಳಿಸಿದ್ದಾರೆ ಎಂದು ಶಿಕ್ಷಕಿ, ಸಾಹಿತಿ ಶಾಂತಾ ಪುತ್ತೂರು ಹೇಳಿದ್ದಾರೆ.
ಅವರು ಕರ್ನಾಟಕ ಸಾಮಾಜಿಕ ಸಾಂಸ್ಕೃತಿಕ ಅಭಿವೃದ್ಧಿ ಪ್ರತಿಷ್ಠಾನ ಮಂಗಳೂರಿನ ಪುರಭವನದ ಎದುರಿನ ರಾಜಾಜಿ ಪಾರ್ಕಿನಲ್ಲಿ ಕುವೆಂಪು ಜನ್ಮದಿನದ ಪ್ರಯುಕ್ತ ಜ. 5 ರಂದು ನಡೆಸಿದ “ಕನ್ನಡವೇ ಸತ್ಯ” ಕಾರ್ಯಕ್ರಮದಲ್ಲಿ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕವಿಯಾದವನು ಸಾಹಿತ್ಯದ ವಿವಿಧ ಪ್ರಕಾರಗಳನ್ನು ಓದುವುದರೊಂದಿಗೆ ಬರೆಯುವುದನ್ನು ಅಭ್ಯಸಿಸಬೇಕು. ಸಂಪಾದಿಸಿದ ಜ್ಞಾನವನ್ನು ಸಾಹಿತ್ಯದ ಮೂಲಕ ಪ್ರಸಾರ ಮಾಡಬೇಕು ಎಂದವರು ಹೇಳಿದರು.
ಕವಿಗೋಷ್ಠಿಯಲ್ಲಿ ಅನುರಾಧ ರಾಜೀವ ಸುರತ್ಕಲ್, ದೀಪಾ ಚಿಲಿಂಬಿ, ಅನಿತಾ ಶೆಣೈ, ಎಂ ಎಸ್. ವೆಂಕಟೇಶ ಗಟ್ಟಿ ವೀಣಾ ರಾವ್ ವಾಮಂಜೂರು, ಅನಾರ್ಕಲಿ ಸಲೀಂ ,ವ.ಉಮೇಶ್ ಕಾರಂತ್ ಮಂಗಳೂರು, ಬದ್ರುದ್ದೀನ್ ಕೂಳೂರು ಸುಖಲತಾ ಶೆಟ್ಟಿ ಪಚ್ಚನಾಡಿ, ಜುಲಿಯೆಟ್ ಪೆರ್ನಾಂಡಿಸ್ ,ನಿಶಾನ್ ಅಂಚನ್ ,ಜಯಾನಂದ ಪೆರಾಜೆ ಸ್ವರಚಿತ ಕವನ ವಾಚಿಸಿದರು .
ಶಿಕ್ಷಕಿ ಶ್ರೀಮತಿ ಕುಸುಮ ಕೆ .ಆರ್ ಕಾರ್ಯಕ್ರಮ ಉದ್ಘಾಟಿಸಿದರು. ಕರ್ನಾಟಕ ಸಾಮಾಜಿಕ ಸಾಂಸ್ಕೃತಿಕ ಅಭಿವೃದ್ದಿ ಪ್ರತಿಷ್ಠಾನದ ಅಧ್ಯಕ್ಷೆ ಶ್ರೀಮತಿ ರಾಣಿ ಪುಷ್ಪಲತಾದೇವಿ ಸಭಾಧ್ಯಕ್ಷತೆ ವಹಿಸಿದ್ದರು. ಶ್ರೀ ನಾಗೇಂದ್ರ, ಶ್ರೀಮತಿ ಶಾಂತಾ ಕುಂಟಿನಿ, ಶ್ರೀ ಗಂಗಾಧರ ಗಾಂಧಿ ಮುಖ್ಯ ಅತಿಥಿಗಳಾಗಿದ್ದರು.
ನಂತರ ವಿಶ್ವ ದಾಖಲೆ ನಿರ್ಮಿಸಿದ NSCDF ಅಧ್ಯಕ್ಷರಾದ ಶ್ರೀ ಗಂಗಾಧರ್ ಗಾಂಧಿ ಹಾಗೂ KSSAP ಅಧ್ಯಕ್ಷರಾದ ಶ್ರೀಮತಿ ರಾಣಿ ಪುಷ್ಪಲತಾ ದೇವಿ ಬಳಗದವರಿಂದ ಸಂಗೀತ ರಸಸಂಜೆ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಮಂಗಳೂರಿನ ವೈದ್ಯ ಬರಹಗಾರ ಡಾ.ಸುರೇಶ್ ನೆಗಳಗುಳಿ ಹೊಸಗನ್ನಡ ಪತ್ರಿಕೆ ಲೋಕಾರ್ಪಣೆ ಮಾಡಿದರು. ಹಿರಿಯ ಸಾಹಿತಿ ಪತ್ರಕರ್ತ ಜಯಾನಂದ ಪೆರಾಜೆ ಶುಭಾಶಯ ಮಾತುಗಳನ್ನಾಡಿದರು. ದೀಪಾ ಚಿಲಿಂಬಿ ಕಾರ್ಯಕ್ರಮ ನಿರೂಪಿಸಿದರು.

whatsapp image 2025 01 09 at 10.10.12 pm

Sponsors

Related Articles

Back to top button